ಹು- ಧಾರವಾಡ ಪಾಲಿಕೆ ಚುನಾವಣೆ: ಕೇಸರಿ ಶಾಲು ಹಾಕಿಕೊಂಡು ನಾಮಪತ್ರ ಸಲ್ಲಿಕೆ: ಬಿಜೆಪಿ ಅಭ್ಯರ್ಥಿ ನಡೆಗೆ “ಕೈ” ನಾಯಕರ ಆಕ್ಷೇಪ | BJP Deputy Mayor candidate who nomination submitted paper wearing saffron shawl in Dharwad

Dharwad

lekhaka-Sandesh R Pawar

By ಧಾರವಾಡ ಪ್ರತಿನಿಧಿ

|

Google Oneindia Kannada News

ಧಾರವಾಡ, ಜೂನ್‌, 20: ಬಿಜೆಪಿ ನಾಯಕರು ಕೇಸರಿ ಪಡೆಯ ಕಾರ್ಯಕರ್ತರು ಎಂಬುವಂತಹ ವಿಷಯವನ್ನು ಎಲ್ಲೆಡೆಯೂ ಸಾಕ್ಷಿಕರಿಸಲು ಮುಂದಾಗಿದ್ದಾರೆ. ಹಾಗೆಯೇ ಧಾರವಾಡದಲ್ಲಿ ಪಾಲಿಕೆ ಸದಸ್ಯರೊಬ್ಬರ ನಡೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಪಾಲಿಕೆಯ 22ನೇ ಅವಧಿಯ ಮೇಯರ್, ಉಪಮೇಯರ್ ಆಯ್ಕೆಗೆ ಪಾಲಿಕೆಯ ಧಾರವಾಡದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಭಾಂಗಣದಲ್ಲಿ ಚುನಾವಣೆ ನಡೆಯುತ್ತಿದೆ. ಈ ನಡುವೆ ಸತೀಶ್‌ ಹಾನಗಲ್ ಅವರು ಕೇಸರಿ‌ ಶಾಲು ಹಾಕಿಕೊಂಡು ಸಭಾಂಗಣಕ್ಕೆ ಬಂದು ನಾಮಪತ್ರ ಸಲ್ಲಿಸಿದರು.

BJP Deputy Mayor candidate

‌ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯ ಉಪಮೇಯರ್ ಅಭ್ಯರ್ಥಿ ಬಿಜೆಪಿಯ ಸತೀಶ್‌ ಹಾನಗಲ್ ಅವರು ಓಂ ಚಿಹ್ನೆ ಇರುವ ಶಾಲು ಹಾಕಿಕೊಂಡು ಬಂದಿದ್ದಕ್ಕೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮೇಯರ್ ಅಭ್ಯರ್ಥಿ ಸುವರ್ಣ ಕಲ್ಲಕುಂಟ್ಲ ಮತ್ತು ದೊರೆರಾಜ‌‌ ಮಣಿಕುಂಟ್ಲ ಸತೀಶ್‌ ಹಾನಗಲ್ ನಡೆಗೆ ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೆ ಕೇಸರಿ ಶಾಲು ಹಾಕಿಕೊಂಡು ಬಂದ ಅವರ ನಾಮಪತ್ರವನ್ನು ತಿರಸ್ಕರಿಸಬೇಕು ಎಂದು ಆಗ್ರಹಿಸಿದರು. ಇನ್ನು ಈ ಕುರಿತು ಪಾಲಿಕೆ ಆಯುಕ್ತ ಡಾ.ಗೋಪಾಲಕೃಷ್ಣ ಬಿ. ಪ್ರತಿಕ್ರಿಯಿಸಿ, ಇದನ್ನು ಚುನಾವಣಾಧಿಕಾರಿ ಗಮನಕ್ಕೆ ತಂದು ನಿಯಮದ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದರು‌.

ಜಿದ್ದಾಜಿದ್ದಿನ ಹುಬ್ಬಳ್ಳಿ-ಧಾರವಾಡ ಪಾಲಿಕೆ ಚುನಾವಣೆ: ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿ ಫೈನಲ್ಜಿದ್ದಾಜಿದ್ದಿನ ಹುಬ್ಬಳ್ಳಿ-ಧಾರವಾಡ ಪಾಲಿಕೆ ಚುನಾವಣೆ: ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿ ಫೈನಲ್

ಪಾಲಿಕೆ ಕಚೇರಿ ಪ್ರವೇಶಿಸಿದ ಬಿಜೆಪಿ ಸದಸ್ಯರು

ಇನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್‌, ಉಪಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಮತದಾನ ಮಾಡಲು ಪಾಲಿಕೆಯ ಬಿಜೆಪಿ ಸದಸ್ಯರು ಮಹಾನಗರ ಪಾಲಿಕೆ ಕಚೇರಿಗೆ ಆಗಮಿಸಿದ್ದಾರೆ.

ಮಂದಾರ ಹೋಟೆಲ್‌ನಿಂದ ಖಾಸಗಿ ಬಸ್ ಮೂಲಕ ಪಾಲಿಕೆ ಕಚೇರಿಗೆ ಆಗಮಿಸಿದ ಸದಸ್ಯರು, ನೇರವಾಗಿ ಸಭೆಗೆ ತೆರಳಿದರು. ಕೇಂದ್ರ ಸಚಿವ ಪ್ರಲ್ಹದ್‌ ಜೋಶಿ, ಶಾಸಕರಾದ ಅರವಿಂದ ಬೆಲ್ಲದ್‌, ಮಹೇಶ್‌ ಟೆಂಗಿನಕಾಯಿ, ಪ್ರದೀಪ್‌ ಶೆಟ್ಟರ್ ಕೂಡ ಪಾಲಿಕೆಯ ಬಿಜೆಪಿ ಸದಸ್ಯರೊಂದಿಗೆ ಸಭೆಗೆ ತೆರಳಿದರು.

ವಿನಯ್ ಕುಲಕರ್ಣಿ ಖುರ್ಚಿ ಖಾಲಿ

ಇನ್ನು ಧಾರವಾಡ ತಾಲೂಕಿನ ಹೆಬ್ಬಳ್ಳಿ ಜಿಲ್ಲಾ ಪಂಚಾಯತಿ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ ಕೊಲೆ ಪ್ರಕರಣ ಸಂಬಂಧ ಬಂಧಿತರಾಗಿ ಪ್ರಸ್ತುತ ಜಾಮೀನಿನ ಮೇಲೆ ಹೊರಗಿರುವ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಧಾರವಾಡ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧವಿದೆ.

ಪಾಲಿಕೆಯ ಮೇಯರ್ ಉಪಮೇಯರ್ ಸ್ಥಾನಕ್ಕೆ ಇಂದು ಚುನಾವಣೆ ಜರುಗಿದ್ದು, ಈ ಚುನಾವಣೆಯಲ್ಲಿ ವಿನಯ್ ಕುಲಕರ್ಣಿ ಕೂಡ ಮತ ಹಾಕಬೇಕಿತ್ತು. ಮತ ಹಾಕಲು ತಮಗೆ ಅವಕಾಶ ಮಾಡಿಕೊಡುವಂತೆ ಕುಲಕರ್ಣಿ ನ್ಯಾಯಾಲಯಕ್ಕೆ ಅರ್ಜಿ ಕೂಡ ಸಲ್ಲಿಸಿದ್ದರು. ಆದರೆ, ನಿನ್ನೆಯಷ್ಟೇ ನ್ಯಾಯಾಲಯ ಅವರ ಅರ್ಜಿಯನ್ನು ವಜಾಗೊಳಿಸಿದೆ.

ಹೀಗಾಗಿ ಅವರು ಧಾರವಾಡಕ್ಕೆ ಬರಲು ಆಗಲಿಲ್ಲ. ಆದರೂ ಶಿಷ್ಟಾಚಾರದ ಪ್ರಕಾರ ಧಾರವಾಡ ಮಹಾನಗರ ಪಾಲಿಕೆ ಕಚೇರಿಯ ಸಭಾಭವನದಲ್ಲಿ ವಿನಯ್ ಕುಲಕರ್ಣಿ ಹೆಸರಿನಲ್ಲಿ ಒಂದು ಖುರ್ಚಿಯನ್ನು ಮೀಸಲಿರಿಸಲಾಗಿತ್ತು. ಆದರೆ, ಅವರು ಬಾರದೇ ಇದ್ದಿದ್ದರಿಂದ ಆ ಖುರ್ಚಿ ಖಾಲಿ ಉಳಿದಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ.

English summary

Hubballi-Dharwad Municipal Corporation Election: BJP Deputy Mayor candidate who nomination submitted paper wearing saffron shawl in Dharwad

Source link