ಹಲವು ಎಕ್ಸ್‌ಪ್ರೆಸ್ ರೈಲು ಸಮಯ ಪರಿಷ್ಕರಿಸಿದ ನೈಋತ್ಯ ರೈಲ್ವೆ, ಪಟ್ಟಿ | South Western Railway Revised Few Express Train Timings List

Travel

oi-Gururaj S

|

Google Oneindia Kannada News

ಬೆಂಗಳೂರು, ಜೂನ್ 27: ನೈಋತ್ಯ ರೈಲ್ವೆ ಹಲವು ಎಕ್ಸ್‌ಪ್ರೆಸ್ ರೈಲುಗಳ ವೇಳಾಪಟ್ಟಿಯನ್ನು ಕಾರ್ಯಾಚರಣೆಯ ಕಾರಣಕ್ಕಾಗಿ ಪರಿಷ್ಕರಣೆ ಮಾಡಿದೆ. ಬೆಂಗಳೂರು-ಹುಬ್ಬಳ್ಳಿ ಜನಶತಾಬ್ದಿ, ಶಿವಮೊಗ್ಗ-ಯಶವಂತಪುರ, ಮೈಸೂರು-ಶಿವಮೊಗ್ಗ ಸೇರಿದಂತೆ ಒಟ್ಟು 15 ರೈಲುಗಳ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದೆ.

ಪ್ರಕರಣೆ ಮೂಲಕ ನೈಋತ್ಯ ರೈಲ್ವೆ ಹಲವು ಎಕ್ಸ್‌ಪ್ರೆಸ್ ರೈಲುಗಳ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಿರುವ ಕುರಿತು ಮಾಹಿತಿ ನೀಡಿದೆ. ಅಲ್ಲದೇ ನೂತನ ವೇಳಾಪಟ್ಟಿ ಜಾರಿಗೆ ಬರುವ ದಿನಾಂಕವನ್ನು ಸಹ ತಿಳಿಸಿದೆ. ರೈಲು ಪ್ರಯಾಣ ಮಾಡುವ ಜನರು ಈ ಕುರಿತು ಇಲಾಖೆ ವೆಬ್‌ಸೈಟ್‌ ಮೂಲಕವೂ ಮಾಹಿತಿ ಪಡೆಯಬಹುದು.

ಕಲಬುರಗಿ; ನೂರಾರು ಪ್ರಯಾಣಿಕರನ್ನು ಬಿಟ್ಟು ಹೋದ ರೈಲು! ಕಲಬುರಗಿ; ನೂರಾರು ಪ್ರಯಾಣಿಕರನ್ನು ಬಿಟ್ಟು ಹೋದ ರೈಲು!

South Western Railway Revised Few Express Train Timings List

ಜೂನ್ 27ರ ಮಂಗಳವಾರ ಕರ್ನಾಟಕದಲ್ಲಿ 2ನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಚಾಲನೆ ಸಿಗಲಿದೆ. ಬೆಂಗಳೂರು-ಹುಬ್ಭಳ್ಳಿ-ಧಾರವಾಡ ನಡುವೆ ಈ ರೈಲು ಸಂಚಾರ ನಡೆಸಲಿದೆ. ಈ ಹಿನ್ನಲೆಯಲ್ಲಿ ಕೆಲವು ರೈಲುಗಳ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗಿದೆ.

Vande Bharat; ಮುಂಬೈ-ಗೋವಾ ರೈಲು ಉಡುಪಿ, ಮಂಗಳೂರಿಗೆ ವಿಸ್ತರಿಸಿ Vande Bharat; ಮುಂಬೈ-ಗೋವಾ ರೈಲು ಉಡುಪಿ, ಮಂಗಳೂರಿಗೆ ವಿಸ್ತರಿಸಿ

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಬೆಂಗಳೂರು, ದಾವಣಗೆರೆ, ಹುಬ್ಬಳ್ಳಿ, ಧಾರವಾಡಕ್ಕೆ ಸಂಚಾರ ನಡೆಸುವುದರಿಂದ ಜುಲೈ 28ರಿಂದಲೇ ಜಾರಿಗೆ ಬರುವಂತೆ ಬೆಂಗಳೂರು-ಎಸ್‌ಎಸ್‌ಎಸ್ ಹುಬ್ಬಳ್ಳಿ ನಡುವಿನ ಜನಶತಾಬ್ದಿ ಎಕ್ಸ್‌ಪ್ರೆಸ್ ರೈಲಿನ ಸಮಯವನ್ನು ಪರಿಷ್ಕರಣೆ ಮಾಡಲಾಗಿದೆ.

ವಿಜಯಪುರ-ಮಂಗಳೂರು ಸೇರಿ ಹಲವು ರೈಲು ಸೇವೆ ವಿಸ್ತರಣೆ, ಪಟ್ಟಿ ವಿಜಯಪುರ-ಮಂಗಳೂರು ಸೇರಿ ಹಲವು ರೈಲು ಸೇವೆ ವಿಸ್ತರಣೆ, ಪಟ್ಟಿ

ಕೆಎಸ್ಆರ್‌ ಬೆಂಗಳೂರು ನಿಲ್ದಾಣದಿಂದ ಪ್ರತಿದಿನ (ಮಂಗಳವಾರ ಹೊರತುಪಡಿಸಿ) ಹೊರಡುವ ರೈಲು ಯಶವಂತಪುರ, ದಾವಣಗೆರೆ, ಎಸ್‌ಎಸ್‌ಎಸ್ ಹುಬ್ಬಳ್ಳಿ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ. ಬಳಿಕ ರೈಲು ಧಾರವಾಡದ ತನಕ ಸಂಚಾರ ನಡೆಸಲಿದೆ.

ವೇಳಾಪಟ್ಟಿ ಪರಿಷ್ಕರಣೆಯಾದ ರೈಲುಗಳು

* ರೈಲು ನಂಬರ್ 12079 ಕೆಎಸ್ಆರ್ ಬೆಂಗಳೂರು-ಎಸ್ಎಸ್‌ಎಸ್ ಹುಬ್ಬಳ್ಳಿ ಜನಶತಾಬ್ದಿ ಎಕ್ಸ್‌ಪ್ರೆಸ್ ಮತ್ತು ರೈಲು ನಂಬರ್ 12080 ಎಸ್ಎಸ್‌ಎಸ್ ಹುಬ್ಬಳ್ಳಿ- ಕೆಎಸ್ಆರ್‌ ಬೆಂಗಳೂರು ನಡುವಿನ ಜನಶತಾಬ್ದಿ ಎಕ್ಸ್‌ಪ್ರೆಸ್ ರೈಲಿನ ವೇಳಾಪಟ್ಟಿ 28/6/2023ರಿಂದಲೇ ಜಾರಿಗೆ ಬರುವಂತೆ ಬದಲಾವಣೆಯಾಗಿದೆ.

* ರೈಲು ಸಂಖ್ಯೆ 06243 ಕೆಎಸ್ಆರ್ ಬೆಂಗಳೂರು-ಹೊಸಪೇಟೆ ಪ್ಯಾಸೆಂಜರ್ ಎಕ್ಸ್‌ಪ್ರೆಸ್ ಮತ್ತು ರೈಲು ಸಂಖ್ಯೆ 06245 ಹೊಸಪೇಟೆ-ಹರಿಹರ ನಡುವಿನ ಪ್ಯಾಸೆಂಜರ್ ರೈಲಗಳ ಸಮಯವನ್ನು ಸಹ ಜೂನ್ 28ರಿಂದಲೇ ಜಾರಿಗೆ ಬರುವಂತೆ ಪರಿಷ್ಕರಣೆ ಮಾಡಲಾಗಿದೆ.

* ರೈಲು ಸಂಖ್ಯೆ 16213 ಅರಸೀಕೆರೆ-ಎಸ್ಎಸ್‌ಎಸ್ ಹುಬ್ಬಳ್ಳಿ ರೈಲು ಸಮಯದ ಜೂನ್ 28 ರಿಂದ ಮತ್ತು ರೈಲು ಸಂಖ್ಯೆ 20656 ಎಸ್ಎಸ್ಎಸ್ ಹುಬ್ಬಳ್ಳಿ-ಯಶವಂತಪುರ ಎಕ್ಸ್‌ಪ್ರೆಸ್ ರೈಲಿನ ಸಮಯ 1/7/2023 ರಿಂದ ಪರಿಷ್ಕರಣೆಯಾಗಲಿದೆ.

* ರೈಲು ಸಂಖ್ಯೆ 16580 ಶಿವಮೊಗ್ಗ ಟೌನ್-ಯಶವಂತಪುರ ಎಕ್ಸ್‌ಪ್ರೆಸ್ ಸಮಯ ಜೂನ್ 28 ರಿಂದ, ರೈಲು ಸಂಖ್ಯೆ 16225 ಮೈಸೂರು- ಶಿವಮೊಗ್ಗ ಟೌನ್ ಕಾಯ್ದಿರಿಸದ ಎಕ್ಸ್‌ಪ್ರೆಸ್ ರೈಲಿನ ಸಮಯವನ್ನು 28 ಜೂನ್‌ನಿಂದ ಜಾರಿಗೆ ಬರುವಂತೆ ಬದಲಾವಣೆ ಮಾಡಲಾಗಿದೆ. ರೈಲು ಸಂಖ್ಯೆ 16228 ತಾಳಗುಪ್ಪ-ಮೈಸೂರು ಎಕ್ಸ್‌ಪ್ರೆಸ್ ವೇಳಾಪಟ್ಟಿ ಜೂನ್ 28ರಿಂದಲೇ ಪರಿಷ್ಕರಣೆ.

* ರೈಲು ಸಂಖ್ಯೆ 16590 ಮೀರಜ್-ಕೆಎಸ್ಆರ್ ಬೆಂಗಳೂರು ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್ ಸಮಯ ಜೂನ್ 28 ರಿಂದ, ರೈಲು ಸಂಖ್ಯೆ 16512 ಕಣ್ಣೂರು-ಕೆಎಸ್ಆರ್‌ ಬೆಂಗಳೂರು ಎಕ್ಸ್‌ಪ್ರೆಸ್ ಸಮಯ ಜೂನ್ 28ರಿಂದಲೇ ಪರಿಷ್ಕರಣೆಯಾಗಿದೆ.

* ರೈಲು ಸಂಖ್ಯೆ 17312 ಎಸ್‌ಎಸ್‌ಎಸ್‌ ಹುಬ್ಬಳ್ಳಿ- ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ವೇಳಾಪಟ್ಟಿ ಜೂನ್ 29 ರಿಂದ ಮತ್ತು ರೈಲು ಸಂಖ್ಯೆ 22697 ಎಸ್‌ಎಸ್‌ಎಸ್‌ ಹುಬ್ಬಳ್ಳಿ-ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ವೇಳಾಪಟ್ಟಿ 1/7/2023ರಿಂದ ಬದಲಾವಣೆ.

* ರೈಲು ಸಂಖ್ಯೆ 12778 ಕೊಚ್ಚುವೇಲಿ-ಎಸ್ಎಸ್‌ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್ ವೇಳಾಪಟ್ಟಿ ಜೂನ್ 29 ರಿಂದ ಮತ್ತು ರೈಲು ಸಂಖ್ಯೆ 12650 ಹಜರತ್ ನಿಜಾಮುದ್ದೀನ್-ಯಶವಂತಪುರ ಎಕ್ಸ್‌ಪ್ರೆಸ್ ರೈಲಿನ ವೇಳಾಪಟ್ಟಿ ಜೂನ್ 29ರಿಂದ ಪರಿಷ್ಕರಣೆ.

ಈ ಎಲ್ಲಾ ರೈಲುಗಳ ಪರಿಷ್ಕೃತ, ವಿವರವಾದ ವೇಳಾಪಟ್ಟಿಯನ್ನು ಭಾರತೀಯ ರೈಲ್ವೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಪ್ರಯಾಣಿಕರು ಹೆಚ್ಚಿನ ಮಾಹಿತಿಗಾಗಿ 139 ಸಹಾಯವಾಣಿ ಸಂಖ್ಯೆಗೆ ಸಹ ಕರೆ ಮಾಡಬಹುದಾಗಿದೆ.

English summary

South Western Railway revised few express train timings. Here are the train list and new timings.

Source link