ಶಕ್ತಿ ಯೋಜನೆ ಪರಿಣಾಮ: ಚಾಲಕರು, ಕಂಡಕ್ಟರ್‌ಗಳು, ತಂತ್ರಜ್ಞರು ಸೇರಿ 8944 ಉದ್ಯೋಗಿಗಳ ನೇಮಕಕ್ಕೆ ಶಿಫಾರಸು- ಮಾಹಿತಿ, ವಿವರ | Karnataka transport department seeks nod to recruit 9,000 employees, increase bus fleet

Karnataka

oi-Ravindra Gangal

|

Google Oneindia Kannada News

ಬೆಂಗಳೂರು, ಜೂನ್‌ 30: ಶಕ್ತಿ ಯೋಜನೆ ( Shakti scheme ) ಅನುಷ್ಠಾನಗೊಂಡ ನಂತರ ಪ್ರಯಾಣಿಕರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ. ದೈನಂದಿನ ಆದಾಯವು ತೀವ್ರವಾಗಿ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಚಾಲಕರು, ಕಂಡಕ್ಟರ್‌ಗಳು ಮತ್ತು ತಂತ್ರಜ್ಞರು ಸೇರಿದಂತೆ ಹೆಚ್ಚುವರಿ 8944 ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಸರ್ಕಾರದಿಂದ ಅನುಮತಿ ಕೋರಿದ್ದಾರೆ.

ಕರ್ನಾಟಕದ ಎಲ್ಲಾ ನಾಲ್ಕು ರಸ್ತೆ ಸಾರಿಗೆ ನಿಗಮಗಳಲ್ಲಿ 4000 ಹೊಸ ಬಸ್‌ಗಳನ್ನು ಖರೀದಿಸಲು ಬೇಡಿಕೆ ಇಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

Karnataka transport department seeks nod to recruit 9,000 employees, increase bus fleet

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲ್ಯುಕೆಆರ್‌ಟಿಸಿ), ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್‌ಟಿಸಿ) ಸೇರಿದಂತೆ ಎಲ್ಲಾ ನಾಲ್ಕು ರಸ್ತೆ ಸಾರಿಗೆ ನಿಗಮಗಳಿಗೆ ಹೊಸ ಬಸ್‌ಗಳು ಬೇಕಿದೆ ಎಂದು ಬೇಡಿಕೆ ಇಟ್ಟಿದ್ದಾರೆ.

 ಕರ್ನಾಟಕ ವಿರೋಧ ಪಕ್ಷದ ನಾಯಕನ ಆಯ್ಕೆಗೆ ಭಾನುವಾರ ಮಹೂರ್ತ ಫಿಕ್ಸ್‌: ರೇಸ್‌ನಲ್ಲಿರುವವರ ಹೆಸರು ತಿಳಿಯಿರಿ ಕರ್ನಾಟಕ ವಿರೋಧ ಪಕ್ಷದ ನಾಯಕನ ಆಯ್ಕೆಗೆ ಭಾನುವಾರ ಮಹೂರ್ತ ಫಿಕ್ಸ್‌: ರೇಸ್‌ನಲ್ಲಿರುವವರ ಹೆಸರು ತಿಳಿಯಿರಿ

ಸಾರಿಗೆ ಇಲಾಖೆ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ. ಶಕ್ತಿ ಯೋಜನೆ (ಜೂನ್ 11) ಅನುಷ್ಠಾನಗೊಂಡ ನಂತರ ರೂ 28.89 ಕೋಟಿಗಳ ಸರಾಸರಿ ದೈನಂದಿನ ಆದಾಯವನ್ನು ಸಾರಿಗೆ ಇಲಾಖೆ ದಾಖಲಿಸಿದೆ.

ದಕ್ಕೂ ಮೊದಲು ಸುಮಾರು 4 ಕೋಟಿ ರೂಪಾಯಿಗಳಿಷ್ಟು ಕಡಿಮೆ ಸರಾಸರಿ ಆದಾಯ ಪ್ರತಿದಿನ ದಾಖಲಾಗುತ್ತಿತ್ತು. ಶಕ್ತಿ ಯೋಜನೆಯ ನಂತರ ಮಹಿಳೆಯರನ್ನು ಹೊರತುಪಡಿಸಿ ಪ್ರಯಾಣಿಕರಿಂದ ಸರಾಸರಿ ದೈನಂದಿನ ಆದಾಯ 16.87 ಕೋಟಿ ರೂ ದಾಖಲಾಗಿದೆ.

Karnataka transport department seeks nod to recruit 9,000 employees, increase bus fleet

ಇದರ ಜೊತೆಗೆ, ಶಕ್ತಿ ಯೋಜನೆಗೂ ಮೊದಲು ನಾಲ್ಕು RTC ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಸರಾಸರಿ 84 ಲಕ್ಷಕ್ಕೂ ಹೆಚ್ಚು ದಾಖಲಾಗುತ್ತಿತ್ತು. ಆದರೆ, ಯೋಜನೆಯ ನಂತರ, ಇದು 20 ಲಕ್ಷಕ್ಕೂ ಹೆಚ್ಚು ಏರಿಕೆಯಾಗಿದೆ. ಈಗ ಪ್ರತಿದಿನ ಸರಾಸರಿ ಒಂದು ಕೋಟಿ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಶಕ್ತಿ ಯೋಜನೆಯ ಫಲಾನುಭವಿಗಳ ಶೇಖಡಾವರು ಸಂಖ್ಯೆ ಹೀಗಿದೆ. NWKRTC (52.8%), KSRTC (47.9%), KKRTC (44.3%) ಮತ್ತು BMTC (42.2%) ದಾಖಲಾಗಿದೆ.

ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಒದಗಿಸುವ ಶಕ್ತಿ ಯೋಜನೆಯ ಅನುಷ್ಠಾನದ ಕುರಿತು ಮೊದಲ ಮಾಹಿತಿ ಸಂಗ್ರಹಿಸಲು 200 ಕ್ಕೂ ಹೆಚ್ಚು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಸಿಬ್ಬಂದಿಗೆ ಸೂಚಿಸಲಾಗಿದೆ.

English summary

Karnataka Transport Corporation has sought permission from the government to hire additional 8944 employees including drivers, conductors and technicians,

Story first published: Friday, June 30, 2023, 22:38 [IST]

Source link