Astrology
oi-Mallika P

ಜ್ಯೋತಿಷ್ಯದ ಪ್ರಕಾರ, ಕರ್ಕ ರಾಶಿಯಲ್ಲಿ ಬುಧ ಮತ್ತು ಶುಕ್ರನ ಸಂಯೋಗವು ಮಂಗಳಕರವಾದ ಲಕ್ಷ್ಮೀ ನಾರಾಯಣ ರಾಜ ಯೋಗವನ್ನು ರೂಪಿಸುತ್ತದೆ. ಈ ಯೋಗವು ಮೂರು ನಿರ್ದಿಷ್ಟ ರಾಶಿಚಕ್ರ ಚಿಹ್ನೆಗಳಿಗೆ ಸೇರಿದ ವ್ಯಕ್ತಿಗಳಿಗೆ ಅದೃಷ್ಟವನ್ನು ತರುತ್ತದೆ.
ಜುಲೈನಲ್ಲಿ ಗ್ರಹಗಳ ಚಲನೆಯು ಸಂಪತ್ತು, ವ್ಯಾಪಾರ, ಬುದ್ಧಿಶಕ್ತಿಯ ಅಧಿಪತಿಗಳಾದ ಬುಧ ಮತ್ತು ಶುಕ್ರರ ಸಂಯೋಗಕ್ಕೆ ಕಾರಣವಾಗುತ್ತದೆ. ಈ ಸಂಯೋಗವು ಕರ್ಕಾಟಕ ರಾಶಿಯಲ್ಲಿ ನಡೆಯುತ್ತದೆ. ಇದರಿಂದ ಲಕ್ಷ್ಮೀ ನಾರಾಯಣ ರಾಜ ಯೋಗವನ್ನು ಸೃಷ್ಟಿಯಾಗುತ್ತದೆ.
ಲಕ್ಷ್ಮೀ ನಾರಾಯಣ ರಾಜ ಯೋಗವು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರಲಿದ್ದರೂ ಸಹ ಈ ಮೂರು ರಾಶಿಯವರ ಅದೃಷ್ಟ ಹೆಚ್ಚಾಗುತ್ತದೆ. ಈ ಮೂರು ರಾಶಿಯವರು ನಿರೀಕ್ಷಿಸದ ಅದೃಷ್ಟ, ಲಾಭ ಹಾಗೂ ಪ್ರಯೋಜನ ಪಡೆಯುತ್ತಾರೆ. ಯಶಸ್ಸು ಅವರನ್ನು ಅವರಿಸಿ ಬಂದು ಮುಟ್ಟಿದ್ದಲ್ಲಾ ಚಿನ್ನ ಎನ್ನುವಂತಹ ಸಮಯ ಇದಾಗಿದೆ.

ಲಕ್ಷ್ಮೀ ನಾರಾಯಣ ರಾಜ ಯೋಗವು ಈ ರಾಶಿಯವರ ಅದೃಷ್ಟವನ್ನು ಹೆಚ್ಚಿಸಿ ಸಂಪತ್ತನ್ನು ಹೆಚ್ಚಿಸುತ್ತದೆ.
ಮೇಷ ರಾಶಿ
ಬುಧ ಮತ್ತು ಶುಕ್ರ ಸಂಯೋಗದಿಂದ ಆರಂಭವಾಗುವ ಲಕ್ಷ್ಮೀ ನಾರಾಯಣ ರಾಜ ಯೋಗವು ಮೇಷ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳಿಗೆ ಅಪಾರ ಅದೃಷ್ಟ ಹಾಗೂ ಪ್ರಯೋಜನಗಳನ್ನು ತರುತ್ತದೆ. ಹೊಸ ಮನೆ ಅಥವಾ ವಾಹನ ಖರೀದಿಯಿಂದ ಸಂತೋಷ ಹೆಚ್ಚಾಗುತ್ತದೆ. ಅನೇಕ ಸೌಕರ್ಯ ಹಾಗೂ ಜೀವನ ಮಟ್ಟ ಸುಧಾರಿಸುತ್ತದೆ. ಇದರಿಂದ ಅವರು ಐಷಾರಾಮಿ ಜೀವನ ಅನುಭವಿಸಬಹುದು. ಉದ್ಯೋಗದಲ್ಲಿರುವವರು ಉತ್ತಮವಾದ ಬೆಳವಣಿಗೆಯನ್ನು ನಿರೀಕ್ಷಿಸಬಹುದು. ಕಾರ್ಯಗಳು ಸಕಾಲದಲ್ಲಿ ಪೂರ್ಣಗೊಂಡು ಯಶಸ್ಸು ನಿಮ್ಮದಾಗುತ್ತದೆ. ರಿಯಲ್ ಎಸ್ಟೇಟ್ ಮತ್ತು ಆಸ್ತಿ-ಸಂಬಂಧಿತ ವ್ಯವಹಾರಗಳಲ್ಲಿ ತೊಡಗಿರುವ ವ್ಯಕ್ತಿಗಳು ಲಕ್ಷ್ಮೀ ನಾರಾಯಣ ಯೋಗದಲ್ಲಿ ವಿಶೇಷ ಲಾಭವನ್ನು ಪಡೆಯುತ್ತಾರೆ.
ತುಲಾ ರಾಶಿ
ಲಕ್ಷ್ಮೀ ನಾರಾಯಣ ರಾಜ ಯೋಗವು ತುಲಾ ರಾಶಿಯವರ ಅದೃಷ್ಟದ ಬಾಗಿಲನ್ನು ತೆರೆಯುತ್ತದೆ. ಉದ್ಯೋಗ ಮತ್ತು ವ್ಯಾಪಾರ ಉದ್ಯಮಗಳಲ್ಲಿ ಗಮನಾರ್ಹ ಲಾಭವನ್ನು ನಿರೀಕ್ಷಿಸಬಹುದು. ಈ ಅವಧಿಯು ಉತ್ತಮ ಯಶಸ್ಸು ಮತ್ತು ಸಾಧನೆಗಳನ್ನು ಮಾಡಬಹುದು. ಹೊಸ ಉದ್ಯೋಗಾವಕಾಶಗಳು ಸಿಗುತ್ತವೆ. ಹೊಸ ಜನರೊಂದಿಗೆ ಸಂಪರ್ಕ ಪ್ರಯೋಜನವನ್ನು ನೀಡುತ್ತದೆ. ವ್ಯಾಪಾರಸ್ಥರು ಆರ್ಥಿಕ ಸಮೃದ್ಧಿಯನ್ನು ನಿರೀಕ್ಷಿಸಬಹುದು. ಅವರ ಆದಾಯವು ಗಣನೀಯವಾಗಿ ಹೆಚ್ಚಾಗುತ್ತದೆ.
ಮಕರ ರಾಶಿ
ಮಕರ ರಾಶಿಯಲ್ಲಿ ಜನಿಸಿದವರು ಲಕ್ಷ್ಮೀ ನಾರಾಯಣ ರಾಜ ಯೋಗದಿಂದ ಅದ್ಭುತ ಲಾಭವನ್ನು ಪಡೆಯುತ್ತಾರೆ. ವೃತ್ತಿ ಜೀವನದಲ್ಲಿ ಸಕಾರಾತ್ಮಕ ಬೆಳವಣಿಗೆಗಳಿಗೆ ಈ ಯೋಗವು ಸಾಕ್ಷಿಯಾಗುತ್ತದೆ. ಉದ್ಯೋಗಗಳಲ್ಲಿ ಯಶಸ್ಸನ್ನು ಕಾಣುತ್ತಾರೆ. ಈ ಸಮಯದಲ್ಲಿ ವ್ಯಾಪಾರಸ್ಥರು ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಅವಿವಾಹಿತರಿಗೆ ನಿರೀಕ್ಷಿಸಿದ ಸಂಗಾತಿ ಸಿಕ್ಕಿ, ಮದುವೆ ಮಾತುಕಥೆಗಳು ಅಂತಿಮಗೊಳ್ಳಬಹುದು. ಇನ್ನು ಈ ರಾಶಿಯವರು ಹೊಸ ವ್ಯವಹಾರವನ್ನು ಪ್ರಾರಂಭಿಸಬಹುದು. ಕುಟುಂಬಗಳಲ್ಲಿ ಸಂತೋಷದ ವಾತಾವರಣ ಇರುತ್ತದೆ.
ಕರ್ಕಾಟಕ ರಾಶಿಯಲ್ಲಿ ಬುಧ ಮತ್ತು ಶುಕ್ರ ಸಂಯೋಗದಿಂದ ರೂಪುಗೊಂಡ ಲಕ್ಷ್ಮೀ ನಾರಾಯಣ ರಾಜ ಯೋಗವು ಎಲ್ಲಾ ಹನ್ನೆರಡು ರಾಶಿಗಳಿಗೆ ಸಮೃದ್ಧಿ ಮತ್ತು ಅದೃಷ್ಟವನ್ನು ತರುತ್ತದೆ. ಆದರೆ ಮೇಷ, ತುಲಾ ಮತ್ತು ಮಕರ ರಾಶಿಯವರು ವಿಶೇಷವಾದ ಪ್ರಯೋಜನಗಳನ್ನು ಪಡೆಯುತ್ತಾರೆ. ಲಕ್ಷ್ಮೀ ನಾರಾಯಣ ಯೋಗವು ಈ ಅದೃಷ್ಟದ ರಾಶಿಗಳಿಗೆ ಸಮೃದ್ಧಿ ಮತ್ತು ಸಂತೋಷವನ್ನು ನೀಡುತ್ತದೆ.
(ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)
English summary
Lakshmi Narayan Rajyoga 2023: Mercury Transit in Cancer will form an auspicious Lakshmi Narayan Rajyoga where people of these zodiac signs will get success and wealth.
Story first published: Tuesday, June 20, 2023, 13:20 [IST]