Hubballi
lekhaka-Sandesh R Pawar

ಹುಬ್ಬಳ್ಳಿ, ಜೂನ್ 27: ರೈಲ್ವೆ ಇಲಾಖೆ ಆಲಸ್ಯತನಯೋ ಅಥವಾ ನಿರ್ಲಕ್ಷ್ಯತನೋ ಗೊತ್ತಿಲ್ಲ, ಆದರೆ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯಲ್ಲಿ ಸಂಭವಿಸಬಹುದಾಗಿದ್ದ ದೊಡ್ಡ ಅಪಘಾತವೊಂದು ಕೂದಲು ಎಳೆಯ ಅಂತರದಲ್ಲಿ ತಪ್ಪಿದೆ. ತಪ್ಪಿದ ಬಹುದೊಡ್ಡ ದುರಂತದ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿದೆ ಸೆರೆಯಾಗಿದ್ದು, ಎದೆ ಝಲ್ ಎನಿಸುತ್ತಿದೆ.
ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಬಳಿ ಇದ್ದ ಬೃಹತ್ ಗಾತ್ರದ ಕಬ್ಬಿಣದ ಕಂಬ ಏಕಾಏಕಿ ನೆಲಕ್ಕೆ ಅಪ್ಪಳಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಬ್ರಿಡ್ಜ್ ಬಳಿ ಬೃಹತ್ ವಾಹನಗಳ ಪ್ರವೇಶ ನಿರ್ಬಂಧಿಸುವ ದೃಷ್ಟಿಯಿಂದ ಹಾಕಲಾಗಿದ್ದ ಕಬ್ಬಿಣದ ಬೃಹತ್ ಕಂಬ, ತುಕ್ಕು ಹಿಡಿದು ತನ್ನಷ್ಟಕ್ಕೆ ತಾನೆ ನೆಲಕ್ಕುರುಳಿದ್ದು, ಕೂದಲು ಎಳೆಯ ಅಂತರದಲ್ಲಿ ಬಹುದೊಡ್ಡ ದುರಂತ ತಪ್ಪಿದಂತಾಗಿದೆ. ಕಳೆದ ಮೂರು ತಿಂಗಳ ಹಿಂದೆ ಅಷ್ಟೇ ಈ ರೀತಿಯ ದುರ್ಘಟನೆ ನಡೆದಿತ್ತು. ಆದರೂ ಎತ್ತೆತ್ತುಕೊಳ್ಳದ ರೈಲ್ವೆ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ತೋರಿರುವುದು ಇಂತಹದೊಂದು ಘಟನೆಗೆ ಕಾರಣವಾಗಿದೆ.
ಧಾರವಾಡ ಬೆಂಗಳೂರು ಸೇರಿದಂತೆ ಏಕಕಾಲಕ್ಕೆ 5 ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ
ಇನ್ನು ಜನತೆ, ಬಸ್, ಕಾರು, ದ್ವಿಚಕ್ರ ವಾಹನಗಳು ಹಾಯ್ದು ಹೋದ ಕೆಲವೇ ಕ್ಷಣಗಳಲ್ಲಿ ಕಂಬ ಉರಳಿಬಿದ್ದಿದ್ದು, ಬಸ್ ಅಥವಾ ಕಾರಗಳ ಮೇಲೆ ಬಿದ್ದಿದ್ದರೇ ದೊಡ್ಡ ಅನಾಹುತ ನಡೆಯುತ್ತಿತ್ತು. ಅತ್ಯಂತ ಜನದಟ್ಟಣೆಯ ಪ್ರದೇಶ ಹಾಗೂ ಹುಬ್ಬಳ್ಳಿ-ಗದಗ ಎನ್‌ಎಚ್-63 ರಸ್ತೆ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ನಡೆದ ಬಹುದೊಡ್ಡ ಘಟನೆಯಾಗಿದ್ದು, ದಿವ್ಯ ನಿರ್ಲಕ್ಷ್ಯ ವಹಿಸಿದ ರೈಲ್ವೆ ಇಲಾಖೆಯ ಅಧಿಕಾರಗಳ ವಿರುದ್ಧ ಕ್ರಮಕ್ಕೆ ಹುಬ್ಬಳ್ಳಿಯ ಜನರ ಆಗ್ರಹಿಸಿದ್ದಾರೆ.

ಪೈಪ್‌ಲೈನ್ ಹಾಕಲು ಅಗೆದ ರಸ್ತೆ ಮುಚ್ಚದ ಗುತ್ತಿಗೆದಾರ: ಅಕ್ಕಸಾಲಿಗರ ಓಣಿಯ ಜನರ ಸ್ಥಿತಿ ಅಧೋಗತಿ
ಹುಬ್ಬಳ್ಳಿ: ವಾರ್ಡ್ ನಂಬರ್ 72 ರಲ್ಲಿ ಬರುವ ಅಕ್ಕಸಾಲಿಗರ ಓಣಿ ಅಜ್ಜಪ್ಪ ದೇವಸ್ಥಾನ ರಸ್ತೆಯಲ್ಲಿ, ಒಳಚರಂಡಿ ಪೈಪ್ ಲೈನ್ ಹಾಕಲು, ರಸ್ತೆ ಗುಂಡಿಯನ್ನು ಅಗೆದಿದ್ದರು. ಆದರೆ ಆ ಗುತ್ತಿಗೆದಾರ ಈವರೆಗೂ ರಸ್ತೆಯನ್ನು ಮುಚ್ಚದೆ ಹಾಗೆಯೇ ಬಿಟ್ಟಿದ್ದಾರೆ. ಇದರಿಂದ ಇಲ್ಲಿನ ನಿವಾಸಿಗಳು ಭಯಬೀತಿಯಲ್ಲಿ ಓಡಾಡುತ್ತಿದ್ದಾರೆ.
ಗುತ್ತಿಗೆದಾರ ಎಸ್.ಆರ್ ರಾಜು ಕಳೆದ ಮೂರ್ನಾಲ್ಕು ತಿಂಗಳ ಹಿಂದೆ, ಅಕ್ಕಸಾಲಿಗರ ಓಣಿಯಲ್ಲಿ ಯುಜಿಡಿ ಕಾಮಗಾರಿಗಾಗಿ ರಸ್ತೆ ಗುಂಡಿಯನ್ನು ಅಗೆದಿದ್ದರು. ಈವರೆಗೂ ಆ ಗುಂಡಿಯನ್ನು ಮುಚ್ಚದೆ, ರಸ್ತೆ ಮಾಡದೆ ಹಾಗೆಯೇ ಬಿಟ್ಟಿದ್ದಾರೆ. ಇಲ್ಲಿ ಸಣ್ಣ ಮಕ್ಕಳು ಮತ್ತು ವೃದ್ಧರು ಓಡಾಡಲು ಭಯಪಡುತ್ತಿದ್ದಾರೆ. ರಸ್ತೆ ಇಲ್ಲದೇ ಇಲ್ಲಿನ ನಿವಾಸಿಗಳು ಗೋಳಾಡುತ್ತಿದ್ದಾರೆ. ಈ ಬಗ್ಗೆ ಪಾಲಿಕೆ ಅಧಿಕಾರಿಗಳಿಗೆ, ಪಾಲಿಕೆ ಸದಸ್ಯೆ ಸುಮಿತ್ರಾ ಗುಂಜಾಳ ಈ ವಿಷಯದ ಬಗ್ಗೆ ತಿಳಿಸಿದರೂ ಕ್ಯಾರೆ ಎನ್ನುತ್ತಿಲ್ಲವಂತೆ. ಕೂಡಲೇ ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಅವರು ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎನ್ನುವುದು ಅಕ್ಕಸಾಲಿಗರ ಓಣಿಯ ನಿವಾಸಿಗಳ ಆಗ್ರಹವಾಗಿದೆ.
English summary
A huge iron pillar falls near the Hubballi railway station, luckily, there were no casualties Know more
Story first published: Tuesday, June 27, 2023, 18:28 [IST]