‘ರಾನಿ’ ಅವತಾರವೆತ್ತಿದ ‘ಕನ್ನಡತಿ’ ಹೀರೊ ಕಿರಣ್ ರಾಜ್: ಮಾಸ್ ಲುಕ್ ರಿವೀಲ್ ಮಾಡೋಕೆ ಮುಹೂರ್ತ ಫಿಕ್ಸ್ | Kannadathi Serial actor Kiran Raj New Movie Ronny teaser releasing on July 5th

bredcrumb

News

oi-Muralidhar S

|

ಕಿರುತೆರೆಯಲ್ಲಿ
ಹೆಚ್ಚಾಗಿ
ಗಮನ
ಸೆಳೆದಿದ್ದ
ನಟ
ಕಿರಣ್
ರಾಜ್.
ಇತ್ತೀಚೆಗೆ
ಸಿನಿಮಾಗಳಲ್ಲೂ
ಬ್ಯುಸಿಯಾಗಿದ್ದಾರೆ.
‘ಕನ್ನಡತಿ’
ಧಾರಾವಾಹಿಯಲ್ಲಿ
ಪ್ರಮುಖ
ಪಾತ್ರದಲ್ಲಿ
ನಟಿಸುತ್ತಿದ್ದ
ಕಿರಣ್
ರಾಜ್
ಈಗ
ಬ್ಯಾಕ್
ಟು
ಬ್ಯಾಕ್
ಸಿನಿಮಾಗಳಲ್ಲಿ
ನಟಿಸುತ್ತಿದ್ದಾರೆ.

ಕಿರಣ್
ರಾಜ್
ಗ್ರೀನ್
ಸಿಗ್ನಲ್
ಕೊಟ್ಟಿರೋ
ಸಿನಿಮಾಗಳು
ಬಿಡುಗಡೆಗೆ
ಮುಂದಾಗುತ್ತಿವೆ.
ಅದರಲ್ಲೊಂದು
‘ರಾನಿ’.
‘ಕನ್ನಡತಿ’ಯಲ್ಲಿ
ಸಾಫ್ಟ್
ಲುಕ್
ಕೊಟ್ಟಿದ್ದ
ಕಿರಣ್
ರಾಜ್

ಮಾಸ್
ಅವತಾರದಲ್ಲಿ
ಅಬ್ಬರಿಸಲಿದ್ದಾರೆ.

Kannadathi Serial actor Kiran Raj New Movie Ronny teaser releasing on July 5th

ಕಿರುತೆರೆಯಲ್ಲಿ
ಸಾಕಷ್ಟು
ಜನಪ್ರಿಯತೆಯನ್ನು
ಗಳಿಸಿರೋ
ಕಿರಣ್
ರಾಜ್,
ಈಗ
ಸಿನಿಮಾಗಳಲ್ಲಿ
ಗೆಲ್ಲುವುದಕ್ಕೆ
ಮುಂದಾಗಿದ್ದಾರೆ.
ಅದಕ್ಕೆ
ತಕ್ಕಂತೆ
ಮಾಸ್
ಸ್ಕ್ರಿಪ್ಟ್
ಸಿಕ್ಕಿದ್ದು,
ಖಡಕ್
ರೋಲ್‌ನಲ್ಲಿ
ತೆರೆಮೇಲೆ
ಕಾಣಿಸಿಕೊಳ್ಳಲಿದ್ದಾರೆ.
ಸದ್ಯ
ಖುಷಿ
ವಿಷಯ
ಏನಂದ್ರೆ,

ಮಾಸ್
ಸಿನಿಮಾ
ಝಲಕ್
ಮುಂಬರುವ
ಜುಲೈ
5ರಂದು
ರಿಲೀಸ್
ಮಾಡಲಾಗುತ್ತಿದೆ.

ಜುಲೈ
5ರಂದು
‘ರಾನಿ’
ಹೀರೊ
ಕಿರಣ್
ರಾಜ್
ಹುಟ್ಟುಹಬ್ಬ.

ಕಾರಣಕ್ಕಾಗಿ
ತಮ್ಮ
ಹೀರೊಗೆ
ಒಲವಿನ
ಉಡುಗೊರೆ
ನೀಡುವುದಕ್ಕೆ
ಸಕಲ
ಸಿದ್ಧತೆಗಳನ್ನು
ಮಾಡಿಕೊಂಡಿದೆ.
ಇದೂವರೆಗೂ
ಟೈಟಲ್
ಹಾಗೂ
ಪೋಸ್ಟರ್‌ನಿಂದ
ಸಿನಿ
ಪ್ರಿಯರಲ್ಲಿ
ಕುತೂಹಲ
ಹುಟ್ಟಿಸಿತ್ತು.

‘ರಾನಿ’
ಸಿನಿಮಾದ
ಟೀಸರ್
ನಾಯಕ
ನಟ
ಕಿರಣ್
ರಾಜ್
ಹುಟ್ಟುಹಬ್ಬದ
ದಿನ
ಅಂದ್ರೆ
ಜುಲೈ
5
ರಂದು
ರಿಲೀಸ್
ಮಾಡಲು
ತೀರ್ಮಾನಿಸಿರುವುದರಿಂದ
ಅವರ
ಅಭಿಮಾನಿಗಳಲ್ಲಿ
ಸಂತಸ
ಮನೆ
ಮಾಡಿದೆ.

‘ರಾನಿ’
ಸಿನಿಮಾಗಾಗಿ​
ಕಿರಣ್
ರಾಜ್
ದುಬೈಗೆ
ಹೋಗಿ
13
ಸಾವಿರ
ಅಡಿ
ಎತ್ತರದಿಂದ
ಸ್ಕೈ
ಡೈವ್
ಮಾಡಿ
ಟೈಟಲ್
ಅನಾವರಣಗೊಳಿಸಿದ್ದರು.
ಅವರ

ಸಾಹಸಕ್ಕೆ
ಇಡೀ
ಚಿತ್ರರಂಗವೇ
ಬೆರಗಾಗಿ
ಮೆಚ್ಚುಗೆ
ವ್ಯಕ್ತಪಡಿಸಿತ್ತು.
ಹೀಗೆ
ಪೋಸ್ಟರ್
ಬಿಡುಗಡೆ
ಮಾಡುವುದರಿಂದಲೇ
ಸಿನಿಮಾ
ತಂಡ
ಪ್ರೇಕ್ಷಕರಲ್ಲಿ
ಕುತೂಹಲ
ಕೆರಳಿಸುವುದಕ್ಕೆ
ಮುಂದಾಗಿದೆ.

‘ರಾನಿ’
ಸಿನಿಮಾವನ್ನು
ಗುರುತೇಜ್
ಶೆಟ್ಟಿ
ನಿರ್ದೇಶನ
ಮಾಡಿದ್ದಾರೆ.
“ಈ
ಬಾರಿ
ಗಟ್ಟಿ
ಕಥೆಯೊಂದಿಗೆ
ಆಕ್ಷನ್-ಕಮರ್ಷಿಯಲ್
ಸಿನಿಮಾ
ಮಾಡಿದ್ದೇನೆ”
ಎಂದು
ನಿರ್ದೇಶಕ
ಗುರುತೇಜ್
ಶೆಟ್ಟಿ
ಹೇಳಿದ್ದಾರೆ.
ಇದೊಂದು
ಗ್ಯಾಂಗ್‌ಸ್ಟರ್
ಸಿನಿಮಾ
ಆದರೂ,
ಕುಟುಂಬ
ಸಮೇತ
ನೋಡುವಂತಹ
ಭಾವನಾತ್ಮಕ
ವಿಷಯಗಳು
ಚಿತ್ರದಲ್ಲಿದೆಯಂತೆ.

‘ರಾನಿ’
ಸಿನಿಮಾದಲ್ಲಿ
ರವಿಶಂಕರ್,
ಮೈಕೋ
ನಾಗರಾಜ್
,ಉಗ್ರಂ
ರವಿ
,
ಉಗ್ರಂ
ಮಂಜು,
ಬಿ
ಸುರೇಶ,
ಮಂಡ್ಯ
ರಮೇಶ್,
ಸುಜಯ್
ಶಾಸ್ತ್ರಿ,
ಸೂರ್ಯ
ಕುಂದಾಪುರ,
ಧರ್ಮಣ್ಣ
ಕಡೂರು,
ಗಿರೀಶ್
ಹೆಗ್ಡೆ
ಹೀಗೆ
ಮುಂತಾದ
ದೊಡ್ಡ
ಕಲಾವಿದರ
ದಂಡೇ
ಇದೆ.

ಹಾಗೇ
ಸಮೀಕ್ಷಾ,
ಅಪೂರ್ವ,
ರಾದ್ಯಾ
ಎಂಬ
ಮೂವರು
ನಾಯಕಿಯರು

ಸಿನಿಮಾದಲ್ಲಿದ್ದಾರೆ.
ಮೂವರು
ವಿಭಿನ್ನ
ಪಾತ್ರದಲ್ಲಿ
ಕಾಣಿಸಿಕೊಂಡಿದ್ದಾರೆ.
ರಾಘವೇಂದ್ರ
ಬಿ
ಕೋಲಾರ್
ಛಾಯಾಗ್ರಹಣ,
ಮಣಿಕಾಂತ್
ಕದ್ರಿ
ಸಂಗೀತ
ಇದೆ.
ಅಲ್ಲದೆ
ಸಚಿನ್
ಬಸ್ರೂರ್

ಸಿನಿಮಾಗೆ
ಹಿನ್ನಲೆ
ಸಂಗೀತ
ನೀಡುತ್ತಿದ್ದಾರೆ.
ಚಂದ್ರಕಾಂತ್
ಪೂಜಾರಿ
,ಉಮೇಶ್
ಹೆಗ್ಡೆ

ಸಿನಿಮಾವನ್ನು
ನಿರ್ಮಾಣ
ಮಾಡುತ್ತಿದ್ದಾರೆ.
ಇದೇ
ವರ್ಷ
ಡಿಸೆಂಬರ್‌ನಲ್ಲಿ
ಸಿನಿಮಾ
ಬಿಡುಗಡೆ
ಮಾಡಲು
ಚಿತ್ರತಂಡ
ಚಿಂತಿಸಿದೆ.

English summary

Kannadathi Serial actor Kiran Raj New Movie Ronny teaser releasing on July 5th,Know More.

Saturday, June 24, 2023, 23:41

Story first published: Saturday, June 24, 2023, 23:41 [IST]

Source link