Karnataka
oi-Gururaj S

ಬೆಂಗಳೂರು, ಜೂನ್ 27; ಭಾರತೀಯ ಅಂಚೆ ಇಲಾಖೆಯು ಮತ್ತಷ್ಟು ಜನಸ್ನೇಹಿಯಾಗುವತ್ತ ಹೆಜ್ಜೆ ಹಾಕಿದೆ. ಆರ್‌ಎಂಎಸ್ ಸೇವೆಗಳನ್ನು ನೀಡುವ ಕಚೇರಿಗಳ ಕಾರ್ಯ ನಿರ್ವಹಣೆಯನ್ನು ಪರಿಷ್ಕರಣೆ ಮಾಡಿದೆ. ಇದರಿಂದಾಗಿ ಈ ಕೌಂಟರ್‌ಗಳು ರಾತ್ರಿ 11ರ ತನಕ ತೆರೆದಿರುತ್ತವೆ.
ಅಂಚೆ ಇಲಾಖೆಯು RMS (Railway Mail Service) ಕಚೇರಿಗಳ ಸಮಯ ಪರಿಷ್ಕರಣೆ ಮಾಡಿದೆ. ಇದರಿಂದಾಗಿ ಆರ್‌ಎಂಎಸ್ ಕಚೇರಿ ಕೌಂಟರ್‌ಗಳು ಸಂಜೆ 6 ರಿಂದ ರಾತ್ರಿ 11 ಗಂಟೆಯವರೆಗೆ ತ್ವರಿತ ಅಂಚೆ ಸೇವೆಯ ಜೊತೆಗೆ ನೋಂದಾಯಿತ ಅಂಚೆ ಸೇವೆಯನ್ನು ಒದಗಿಸಲಾಗುತ್ತವೆ.
ಭಾರತೀಯ ಅಂಚೆ ಪಾರ್ಸೆಲ್ ಸೇವೆ, ಮನೆಯಿಂದ ಬುಕ್ ಮಾಡುವುದು ಹೇಗೆ?

ಈ ಕೌಂಟರ್‌ಗಳಲ್ಲಿ ಸ್ಪೀಡ್ ಪೋಸ್ಟ್, ರಿಜಿಸ್ಟರ್ ಪೋಸ್ಟ್, ಪಾರ್ಸೆಲ್ ಸೇರಿದಂತೆ ಕೆಲವು ನೋಂದಾಯಿತ ಸೇವೆಗಳು ಲಭ್ಯವಿದೆ. ಇದಲ್ಲದೇ ಪೋಸ್ಟಲ್ ಸ್ಟಾಂಪ್‌ಗಳನ್ನು ಪಡೆಯುವ ಸಮಯವನ್ನು ಸಹ ಪರಿಷ್ಕರಣೆ ಮಾಡಲಾಗಿದೆ. ಇದರಿಂದಾಗಿ ಜನರಿಗೆ ಸಹಕಾರಿಯಾಗಿದೆ.
Post Service: ಬೆಂಗಳೂರಿನಲ್ಲಿ ಮನೆ ಬಾಗಿಲಿಗೆ ಅಂಚೆ ಸೇವೆ ವಿಸ್ತರಣೆ, ವಿವರ
ಆರ್‌ಎಂಎಸ್ ಕಚೇರಿ ಕೌಂಟರ್‌ಗಳಲ್ಲಿ ಅಂಚೆ ಚೀಟಿಗಳು ಕೂಡಾ ಲಭ್ಯವಿದ್ದು, ಎಲ್ಲಾ ಸೇವೆಗಳ ಶುಲ್ಕವನ್ನು ಗ್ರಾಹಕರು ಡಿಜಿಟಲ್ ಪಾವತಿ ಅಥವಾ ಕ್ಯೂ ಆರ್ ಕೋಡ್ ಮೂಲಕ ಪಾವತಿಸಬಹುದು ಎಂದು ಇಲಾಖೆ ಹೇಳಿದೆ.
Mobile Post Office: ಬೆಂಗಳೂರಿನಲ್ಲಿ ಮೊಬೈಲ್ ಪೋಸ್ಟ್ ಆಫೀಸ್ ಸೇವೆ: ಉಚಿತ ಪಾರ್ಸೆಲ್ ಪಿಕಪ್
ರೈಲು ಟಿಕೆಟ್ ಕಚೇರಿಯಲ್ಲಿ ಲಭ್ಯ; ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಕೆಲವು ದಿನಗಳ ಹಿಂದೆ ಘೋಷಣೆಯೊಂದನ್ನು ಮಾಡಿದ್ದರು. ರೈಲಿನಲ್ಲಿ ಸಂಚಾರ ನಡೆಸಬೇಕಾದ ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲ ಮಾಡಿಕೊಡುವ ಘೋಷಣೆ ಇದಾಗಿತ್ತು. ದೇಶಾದ್ಯಂತ 45,000 ಅಂಚೆ ಕಚೇರಿಗಳಲ್ಲಿ ರೈಲ್ವೆ ಟಿಕೆಟ್ ಪಡೆಯಲು ವ್ಯವಸ್ಥೆ ಮಾಡಿದ್ದು, ಪ್ರಯಾಣಿಕರು ಯಾವುದೇ ತೊಂದರೆಯಿಲ್ಲದೆ ಇಲ್ಲಿಂದ ಟಿಕೆಟ್ ತೆಗೆದುಕೊಳ್ಳಬಹುದು ಎಂದು ಸಚಿವರು ಹೇಳಿದ್ದರು.
ಅಂಚೆ ಕಚೇರಿಗಳಲ್ಲಿಯೂ ರೈಲ್ವೆ ಟಿಕೆಟ್ ಬುಕ್ಕಿಂಗ್ ಮಾಡಲು ವ್ಯವಸ್ಥೆ ಮಾಡುವ ಮೂಲಕ ಸರ್ಕಾರ ಒಂದು ಕಡೆ ಅಂಚೆ ಕಚೇರಿಗಳಲ್ಲಿ ವಹಿವಾಟು ಹೆಚ್ಚಿಸಲು ಸಹ ಮುಂದಾಗಿದೆ. ಅಲ್ಲದೇ ಜನರು ಸುಲಭವಾಗಿ ರೈಲು ಟಿಕೆಟ್ ಬುಕ್ ಮಾಡಲು ಇದು ಸಹಕಾರಿಯಾಗಿದೆ.
ಜನರಿಗೆ ಅನುಕೂಲ; ಭಾರತೀಯ ಅಂಚೆ ಇಲಾಖೆಯ ಸೇವೆಗಳನ್ನು ಜನರಿಗೆ ಇನ್ನಷ್ಟು ಹತ್ತಿರವಾಗಿಸಲು ಕೇಂದ್ರ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. 2018ರಲ್ಲಿ ಶ್ರೀಸಾಮಾನ್ಯನಿಗೆ ಕೈಗೆಟಕುವ ದರದಲ್ಲಿ, ವಿಶ್ವಾಸಾರ್ಹ ಬ್ಯಾಂಕಿಗ್ ಸೇವೆ ಒದಗಿಸಲು ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತೀಯ ಅಂಚೆ ಪಾವತಿ ಬ್ಯಾಂಕ್ (ಐಪಿಪಿಬಿ)ಗಳ ಸ್ಥಾಪನೆಯ ಯೋಜನಾ ಗಾತ್ರವನ್ನು 800 ಕೋಟಿ ರೂಪಾಯಿಗಳಿಂದ 1435 ಕೋಟಿ ರೂಪಾಯಿಗಳಿಗೆ ಪರಿಷ್ಕರಿಸಲು ಅನುಮೋದನೆ ನೀಡಿತ್ತು.
English summary
Indian postal department extended working hours of the counter in RMS (Railway Mail Service) till 11 pm.