Karnataka
oi-Reshma P

ಬೆಂಗಳೂರು, ಜೂನ್ 21: ರಾಜ್ಯದಲ್ಲಿ ಈ ಬಾರಿ ಮಳೆ ಕೊರತೆಯನ್ನು ಎದುರಿಸುತ್ತಿರುವ ಕಾರಣ ರಾಜ್ಯ ಸರ್ಕಾರ ಆತಂಕಕ್ಕೆ ಒಳಗಾಗಿದ್ದು, ಜುಲೈ ಮೊದಲ ವಾರದಲ್ಲಿ ಬರಗಾಲ ಘೋಷಣೆ ಮಾಡಬೇಕಾ ಅಥವಾ ಬೇಡ್ವಾ ಎಂದು ತೀರ್ಮಾನ ಮಾಡುತ್ತೇವೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.
ಈ ಕುರಿತು ಜೂನ್ 19 ರಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಾದ್ಯಂತ ಜಿಲ್ಲೆಗಳು ತೀವ್ರ ಮಳೆಯ ಕೊರತೆಯನ್ನು ಎದುರಿಸುತ್ತಿರುವ ಕಾರಣ ರಾಜ್ಯ ಸರ್ಕಾರವು ‘ಭೀತಿ’ಯಲ್ಲಿದೆ. ಮುಂಗಾರು ವಿಫಲವಾದರೆ ಕರ್ನಾಟಕವನ್ನು ಬರಪೀಡಿತ ಎಂದು ಘೋಷಿಸಬೇಕಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೋಮವಾರ ಹೇಳಿದ್ದಾರೆ.

ಎಲ್ಲಾ ಜಿಲ್ಲೆಗಳಲ್ಲಿ ಮಳೆಯ ಕೊರತೆಯಿದೆ. ಯಾವುದೇ ಸುಧಾರಣೆಯಾಗದಿದ್ದರೆ, ಜುಲೈ ಮೊದಲ ವಾರದಲ್ಲಿ ಬರ ಘೋಷಿಸುವ ಸಾಧ್ಯತೆಯ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಹೇಳಿದು, ಸುಮಾರು 10 ದಿನಗಳ ಹಿಂದೆ ನೈಋತ್ಯ ಮುಂಗಾರು ಕರ್ನಾಟಕ ಪ್ರವೇಶಿಸಿದೆ. ಸರ್ಕಾರ ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ಗಮನಿಸುತ್ತಿದೆ. ಹವಾಮಾನ ತಜ್ಞರು ಚೇತರಿಕೆಯ ನಿರೀಕ್ಷೆಯಲ್ಲಿದ್ದಾರೆ. ನಾವು ಪ್ರತಿದಿನ ಮಳೆಯ ಮೇಲೆ ನಿಗಾ ಇಡುತ್ತಿದ್ದೇವೆ ಎಂದು ಕಂದಾಯ ಕೃಷ್ಣಬೈರೇಗೌಡ ಹೇಳಿದ್ದಾರೆ.
ಈ ವರ್ಷ ಕರ್ನಾಟಕದಲ್ಲಿ ಶೇ.96-104ರಷ್ಟು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ಸದ್ಯಕ್ಕೆ ಮೋಡ ಬಿತ್ತನೆ ಕುರಿತು ಸರ್ಕಾರದ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲ. ಕರ್ನಾಟಕಕ್ಕೆ ಮುಂಗಾರು ಪ್ರವೇಶ ಒಂದು ವಾರ ತಡವಾಯಿತು. ಬಿಪರ್‌ಜೋಯ್ ಚಂಡಮಾರುತವು ದಕ್ಷಿಣ ಭಾರತದಿಂದ ತೇವಾಂಶವನ್ನು ಹೀರಿಕೊಂಡಿದೆ ಎಂದು ಮಳೆಯ ಕೊರತೆಗೆ ಕಾರಣವನ್ನು ವಿವರಿಸಿದರು.
ಮುಂಗಾರು ದುರ್ಬಲ: ಮಳೆ ಅಭಾವದಿಂದ ಸರ್ಕಾರಕ್ಕೆ ಕಳವಳ?
ಈಗಾಗಲೇ ಮುಖ್ಯಮಂತ್ರಿಗಳು ಅಧಿಕಾರಿಗಳ ಜೊತೆ ಸಭೆ ನಡೆಸಿ ಅಗತ್ಯ ಸೂಚನೆ ಕೊಟ್ಟಿದ್ದಾರೆ. ಹವಾಮಾನ ಪರಿಸ್ಥಿತಿ ಸುಧಾರಣೆ ಆಗಿಲ್ಲ ಅಂದರೆ ಜುಲೈ ಮೊದಲ ವಾರದಲ್ಲಿ ಬರಗಾಲ ಘೋಷಣೆ ಮಾಡಬೇಕಾ..? ಬೇಡ್ವಾ ಎಂದು ತೀರ್ಮಾನ ಮಾಡ್ತೀವಿ. ಇದುವರೆಗೂ ನಾವು ಸ್ವಲ್ಪ ಆತಂಕದಲ್ಲೇ ಇದ್ದೇವೆ. ಈ ವರ್ಷ ಮಾನ್ಸೂನ್ ರಿಕವರಿ ಆಗುತ್ತದೆ ಎಂಬ ವಿಶ್ವಾಸ ಇದೆ ಎಂದು ಹೇಳಿದರು.
ಕರ್ನಾಟಕದಾದ್ಯಂತ 800 ಕ್ಕೂ ಹೆಚ್ಚು ವಸತಿಗಳು ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿವೆ. ಈ ವಸತಿಗಳು ಕುಡಿಯುವ ನೀರು ಪೂರೈಕೆಗಾಗಿ ಟ್ಯಾಂಕರ್‌ಗಳು ಅಥವಾ ಬಾಡಿಗೆ ಬೋರ್‌ವೆಲ್‌ಗಳ ಮೂಲಕ ನೀರಿನ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗಿದೆ. ಉಡುಪಿಯಲ್ಲಿ 27 ಮಿಮೀ, ದಕ್ಷಿಣ ಕನ್ನಡದಲ್ಲಿ 46 ಮಿಮೀ, ಕಾರವಾರದಲ್ಲಿ 20 ಮಿಮೀ ಮಳೆಯಾಗಿದೆ. ಹವಾಮಾನ ತಜ್ಞರ ಪ್ರಕಾರ, ಜೂನ್ 20 ರಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮುಂಗಾರು ಪ್ರಾರಂಭವಾಗಲಿದೆ. ಈ ಹಿಂದೆ, ವಿಜ್ಞಾನಿಗಳು ಜೂನ್ ಮೂರನೇ ವಾರದಲ್ಲಿ ಮುಂಗಾರು ದುರ್ಬಲವಾಗಿರುತ್ತದೆ ಮತ್ತು ತಿಂಗಳ ಅಂತ್ಯದ ವೇಳೆಗೆ ಚೇತರಿಸಿಕೊಳ್ಳುತ್ತದೆ ಎಂದು ಹೇಳಿದ್ದರು.
English summary
With delayed monsoon and deficit rainfall across Karnataka, the government is gearing up to declare the State as drought hit
Story first published: Wednesday, June 21, 2023, 9:43 [IST]