International
oi-Malathesha M

ಕೀವ್: ರಷ್ಯಾ ಪರಿಸ್ಥಿತಿ ಮುಳ್ಳಿನ ಮೇಲೆ ಬಿದ್ದಿರುವ ಬಟ್ಟೆಯಾಗಿದೆ. ಜೋರಾಗಿ ಎಳೆದರೂ ಕಷ್ಟ, ಸುಮ್ಮನೆ ಬಿಟ್ಟರೂ ಪರದಾಟ. ಆದ್ರೆ ರಷ್ಯಾ ಖಾಸಗಿ ಸೇನೆ ಮತ್ತು ಸರ್ಕಾರಿ ಸೇನಾ ಪಡೆಗಳ ಮಧ್ಯೆ ನಡೆದ ಭೀಕರ ಕಾಳಗ ಉಕ್ರೇನ್‌ಗೆ ವರವಾಗಿ ಪರಿಣಮಿಸಿದೆ. 10 ವರ್ಷಗಳ ಹಿಂದೆ ಕಳೆದುಕೊಂಡಿದ್ದ ಜಾಗವನ್ನ ರಷ್ಯಾದಿಂದ ಉಕ್ರೇನ್ ಕಿತ್ತುಕೊಂಡಿದೆ ಅನ್ನೋ ಸುದ್ದಿ ಸಂಚಲನ ಸೃಷ್ಟಿಸಿದೆ (Russia Ukraine War).
ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಆರಂಭವಾಗಿ ಇನ್ನೇನು 500 ದಿನ ಪೂರ್ಣವಾಗಿ, ಯುದ್ಧ ಮತ್ತಷ್ಟು ಭೀಕರತೆಗೆ ಮರಳುವ ಅಪಾಯವಿದೆ. ಇದೇ ಸಂದರ್ಭದಲ್ಲಿ ರಷ್ಯಾದ ಒಳಗೆ ಕಿತ್ತಾಟ ಶುರುವಾಗಿದ್ದು, ಪುಟಿನ್ ಕಟ್ಟಿ ಬೆಳೆಸಿದ್ದ ಖಾಸಗಿ ಸೇನೆ ಹಾಗೂ ಸರ್ಕಾರಿ ಪಡೆಗಳ ನಡುವೆ ಕಿತ್ತಾಟ ಬಲು ಜೋರಾಗಿದೆ. ಈ ನಡುವೆ ಕ್ರಾಸ್ನೋಹೋರಿವ್ಕಾ ಸಮೀಪ ರಷ್ಯಾ ಪಡೆಗಳು ಮತ್ತು ಉಕ್ರೇನ್ ಸೇನೆ ಮಧ್ಯೆ ಭೀಕರ ಕಾಳಗ ನಡೆದಿದೆ. ಇದೇ ಸಂದರ್ಭ ಬಳಸಿಕೊಂಡ ಉಕ್ರೇನ್ ಸೈನಿಕರು, 10 ವರ್ಷದ ಹಿಂದೆ ಕಳೆದುಕೊಂಡ ಜಾಗವನ್ನು ಮತ್ತೆ ತಮ್ಮ ದೇಶಕ್ಕೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾದರೆ ಯಾವುದು ಆ ಜಾಗ? ಈ ಘಟನೆ ರಷ್ಯಾ ಸೇನೆಗೆ ಎಷ್ಟು ಎಫೆಕ್ಟ್ ಕೊಡುತ್ತೆ? ಸಂಪೂರ್ಣ ಮಾಹಿತಿ ಇಲ್ಲಿದೆ.

ವ್ಲಾದಿಮಿರ್ ಪುಟಿನ್ ಪಡೆಗೆ ಸೋಲಿನ ರುಚಿ?
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಒಂದೂವರೆ ವರ್ಷದ ಹಿಂದೆ ಶತ್ರು ಉಕ್ರೇನ್ ವಿರುದ್ಧ ಯುದ್ಧ ಸಾರಿದ್ದರು. ಅಂದಿನಿಂದ ಇಂದಿನ ತನಕ ಒಂದಲ್ಲ ಒಂದು ಸಮಸ್ಯೆ ವ್ಲಾದಿಮಿರ್ ಪುಟಿನ್‌ಗೆ ಕಾಡುತ್ತಿದೆ. ಈಗಲೂ ಅಷ್ಟೇ ರಷ್ಯಾ ಖಾಸಗಿ ಸೇನೆಯ ಆಂತರಿಕ ಕಿತ್ತಾಟ ಕೂಡ ಪುಟಿನ್‌ಗೆ ತಲೆನೋವು ತರಿಸಿದೆ. ಆದರೆ ಇದೇ ಸಂದರ್ಭ ಬಳಸಿಕೊಂಡ ಉಕ್ರೇನ್ ಸೈನಿಕರು ಕ್ರಾಸ್ನೋಹೋರಿವ್ಕಾ ಸಮೀಪದ ಹಳ್ಳಿಗಳನ್ನು ತಮ್ಮ ವಶಕ್ಕೆ ಪಡೆದಿದ್ದಾರಂತೆ. ಈ ಕುರಿತು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. 2014ರಲ್ಲಿ ದಾಳಿ ಮಾಡಿದ್ದ ರಷ್ಯಾದ ಪಡೆಗಳು, ಕ್ರಿಮಿಯಾ ಸೇರಿದಂತೆ ಈ ಪ್ರದೇಶದ ಹಲವು ಭಾಗಗಳನ್ನ ವಶಕ್ಕೆ ಪಡೆದಿದ್ದವು.
ಶತ್ರು ಪಡೆ ವಿರುದ್ಧ ಉಕ್ರೇನ್ ವಿಜಯ!
ಇನ್ನು ರಷ್ಯಾ ವಿರುದ್ಧ ಹೋರಾಡಿ, ತಮ್ಮದೇ ಜಾಗವನ್ನು ವಾಪಸ್ ಪಡೆದ ಬಗ್ಗೆ ಉಕ್ರೇನ್ ಅಧ್ಯಕ್ಷ ಝಲೆನ್ಸ್ಕಿ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಆದರೆ ಯಾವ ಜಾಗ ಎಂಬುದನ್ನು ಉಕ್ರೇನ್ ಸೇನೆ ಬಾಯಿಬಿಟ್ಟಿಲ್ಲ. ಈ ನಡುವೆ ಉಕ್ರೇನಿಗರು ಖುಷಿ ಹಂಚಿಕೊಂಡು, ಸಂಭ್ರಮಿಸಿದ್ದಾರೆ ಎನ್ನಲಾಗಿದೆ. ಆದರೆ ರಷ್ಯಾ ಮಾತ್ರ ಘಟನೆಯ ಬಗ್ಗೆ ಯಾವುದೇ ಮಾಹಿತಿ ಹೊರಹಾಕಿಲ್ಲ. ಏಕೆಂದರೆ ರಷ್ಯಾ ಒಳಗೆ ಬೆಂಕಿ ಹೊತ್ತಿಕೊಂಡಿದ್ದು, ಯಾವ ಪರಿಸ್ಥಿತಿಯಲ್ಲಿ ಏನಾಗುತ್ತೋ? ಎಂಬಂತಾಗಿದೆ. ಇದೇ ಪರಿಸ್ಥಿತಿಯ ಲಾಭ ಪಡೆಯುತ್ತಿರುವ ಉಕ್ರೇನ್ ಸೇನೆ, ರಷ್ಯಾ ಗಡಿಗೆ ನುಗ್ಗಿನ ತನ್ನ ಜಾಗಗಳನ್ನು ಮರಳಿ ಪಡೆಯುತ್ತಿದೆ.
ಖಾಸಗಿ ಸೇನೆ ದಂಗೆ ಬಗ್ಗೆ ಪುಟಿನ್ ಕೆಂಡ
ಪುಟಿನ್ ವ್ಯಾಗ್ನರ್ ಪಡೆ ಅಂದ್ರೆ ರಷ್ಯಾದ ಖಾಸಗಿ ಸೇನೆ ಮುಖ್ಯಸ್ಥ ಯೆವ್ಗೆನಿ ಪ್ರಿಗೊಝಿನ್‌ನ ವಿರುದ್ಧ ಪರೋಕ್ಷವಾಗಿ ಕುಟುಕಿದ್ದಾರೆ. ಖಾಸಗಿ ಸೇನೆ ರಷ್ಯಾದಲ್ಲಿ ರಕ್ತ ಹರಿಸಲು ಬಂದಿತ್ತು ಎಂಬುದನ್ನೂ ಹೇಳಿದ್ದಾರೆ. ರಷ್ಯಾ ಜನ ಇಂತಹ ಸ್ಥಿತಿಯಲ್ಲಿ ಒಗ್ಗಟ್ಟಿನಿಂದ ಇರಬೇಕೆಂದು ಪುಟಿನ್ ಮನವಿ ಮಾಡಿದ್ದಾರೆ. ಮತ್ತೊಂದ್ಕಡೆ ಯೆವ್ಗೆನಿ ಪ್ರಿಗೊಝಿನ್ ಆಡಿಯೋ ಸಂದೇಶ ಕಳುಹಿಸಿ ತನ್ನ ತಪ್ಪಿನ ಬಗ್ಗೆ ಮಾತನಾಡಿದ್ದಾನೆ. ರಷ್ಯಾ ಖಾಸಗಿ ಸೇನೆಯ ಟಾರ್ಗೆಟ್ ಪುಟಿನ್‌ರ ಸರ್ಕಾರ ಆಗಿರಲಿಲ್ಲ, ಸಂಕಷ್ಟ ಹೇಳಿಕೊಳ್ಳಲು ಅನಿವಾರ್ಯವಾಗಿ ಅಟ್ಯಾಕ್ ಮಾಡಿದ್ದೇವೆ ಎಂದಿದ್ದಾನೆ. ರಷ್ಯಾದಲ್ಲಿ ಭುಗಿಲೆದ್ದಿರುವ ಜನರ ಆಂತರಿಕ ದಂಗೆ ಬಗ್ಗೆ ಯೆವ್ಗೆನಿ ಮಾತನಾಡಿ, ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ಘೋಷಿಸಿದ್ದಾನೆ.

ಇದಕ್ಕೆ ಅಲ್ವಾ ಹೇಳೋದು, ಇಬ್ಬರ ಜಗಳದಲ್ಲಿ 3ನೇ ವ್ಯಕ್ತಿಗೆ ಲಾಭ ಅಂತಾ? ರಷ್ಯಾದಲ್ಲಿ ಎಲ್ಲವೂ ಸರಿ ಇಲ್ಲ ಅಂತಾ ಹೇಳಬಹುದು. ಏಕೆಂದರೆ ಖಾಸಗಿ ಸೇನೆ ಸೈನಿಕರ ದಂಗೆಯ ಪರಿಣಾಮ ಪರಿಸ್ಥಿತಿ ಸೂಕ್ಷ್ಮವಾಗಿದೆ. ಜನರು ಕೂಡ ಪುಟಿನ್ ಸರ್ಕಾರದ ವಿರುದ್ಧ ಹಿಂಸೆಗೆ ಇಳಿಯುವ ಸಾಧ್ಯತೆ ಇದೆ. ಆದರೆ ಇದೆಲ್ಲಾ ಅಮೆರಿಕದ ಕುತಂತ್ರ ಎಂದು ರಷ್ಯಾ ಸರ್ಕಾರ ಆರೋಪ ಮಾಡುತ್ತಿದೆ. ಈ ಆರೋಪ ಮತ್ತು ಪ್ರತ್ಯಾರೋಪದ ನಡುವೆ ಪರಿಸ್ಥಿತಿ ಇನ್ನಷ್ಟು ಕೈಮೀರಿ ಹೋಗುತ್ತಿರುವುದು ದುರಂತವೇ ಸರಿ. ಇದರ ಜೊತೆ ಮೆಲ್ಲಗೆ ರಷ್ಯಾ & ಉಕ್ರೇನ್ ವಾರ್ 500 ದಿನಗಳನ್ನ ಪೂರೈಸುತ್ತಿದೆ.
English summary
Ukraine troops most active in Russian border after coup.
Story first published: Tuesday, June 27, 2023, 19:29 [IST]