ಯಾರು ಏನೇ ರಾಜಕೀಯ ಮಾಡಿದರೂ ಟೆಂಡರ್ ಮೂಲಕ ಅಕ್ಕಿ ವಿತರಣೆಗೆ ಕ್ರಮ, ಯೋಜನೆ ಜಾರಿ ಪಕ್ಕಾ: ಖರ್ಚಿನ ಲೆಕ್ಕ ನೀಡಿದ ಸಿದ್ದರಾಮಯ್ಯ | Congress Will Implement Rice Distribution Scheme No Matter Who Does Politics, Says Siddaramaiah

Karnataka

oi-Shankrappa Parangi

|

Google Oneindia Kannada News

ಬೆಂಗಳೂರು, ಜೂನ್ 19: ಅಕ್ಕಿಯ ದಾಸ್ತಾನು ಲಭ್ಯವಿದ್ದರೂ ಕೇಂದ್ರ ಬಿಜೆಪಿ ಸರ್ಕಾರದವರು ಅಕ್ಕಿ ನೀಡಲು ಒಪ್ಪುತ್ತಿಲ್ಲ. ಸಹಕಾರಿ ಒಕ್ಕೂಟದ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪದೇ ಪದೇ ಹೇಳುತ್ತಾರೆ. ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ಕೇಂದ್ರ ಸರ್ಕಾರಕ್ಕೆ ತೆರಿಗೆ ಬರುವುದು ರಾಜ್ಯಗಳಿಂದ ಎನ್ನುತ್ತಾರೆ. ಹೀಗಾಗಿ ಅವರು ಒಕ್ಕೂಟ ಧರ್ಮ ಪಾಲನೆ ಮಾಡುವ ಮೂಲಕ ರಾಜ್ಯಗಳಿಗೆ ಅಗತ್ಯ ಸಹಕಾರ ನೀಡಬೇಕು ಎಂದು ತಿಳಿಸಿರುವ ಸಿಎಂ ಸಿದ್ದರಾಂಯ್ಯನವರು ಅಕ್ಕಿ ವಿತರಣೆ, ಸಾಗಾಣೆ, ದಾಸ್ತಾನು ಕುರಿತು ನಾಡಿಗೆ ಲೆಕ್ಕ ನೀಡಿದ್ದಾರೆ.

ಕಾಂಗ್ರೆಸ್ ಭರವಸೆಯಲ್ಲಿನ ತಲಾ 10ಕೇಜಿ ಅಕ್ಕಿ ವಿತರಣೆ ಜುಲೈ 1ರಿಂದ ಲಭ್ಯವಾಗಲು ಕೇಂದ್ರ ಸರ್ಕಾರ ಸಹಕರಿಬೇಕು. ಇಲ್ಲವಾದರೂ ವಿತರಣೆಗೆ ರಾಜ್ಯ ಸರ್ಕಾರ ಯೋಜನೆಯನ್ನು ಜಾರಿಗೆ ತರಲು ಸಿದ್ಧವಿದೆ ಎಂದು ಸರಣಿ ಟ್ವೀಟ್ ಮೂಲಕ ಕೇಂದ್ರ ಸರ್ಕಾರದ ಧೋರಣೆ ಕುರಿತು ದೂರಿದ್ದಾರೆ. ಅಕ್ಕಿ ಸಾಗಾಟ, ಮಾಸಿಕ ಮತ್ತು ವಾರ್ಷಿಕ ಖರ್ಚಿನ ಲೆಕ್ಕ ಸಹಿತ ಸಿಎಂ ಸಿದ್ದರಾಮಯ್ಯ ಅವರು ವಿವರಿಸಿದ್ದಾರೆ.

ಯಾವುದಾದರೂ ಕೋ-ಆಪರೇಟಿವ್ ಕನ್ಸೂಮರ್ಸ್ ಫೆಡರೇಶನ್ (NCCF), ಅಗ್ರಿಕಲ್ಚರಲ್ ಕೋ-ಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ (ನಾಫೆಡ್) ಹಾಗೂ ಕೇಂದ್ರೀಯ ಭಂಡಾರ, ಈ ಮೂರು ಸಂಸ್ಥೆಗಳು ಭಾರತಕ್ಕೆ ಸೇರಿದವು. ಈ ಮೂರು ಸಂಸ್ಥೆಗಳಿಂದ ಅಕ್ಕಿ ಪಡೆಯಲು ದರಪಟ್ಟಿಗಳನ್ನು ಕರೆಯುವ ಕ್ರಮವನ್ನು ಕೈಗೊಳ್ಳಲಾಗುತ್ತದೆ.

Congress Will Implement Rice Distribution Scheme No Matter Who Does Politics, Says Siddaramaiah

ಟೆಂಡರ್ ಮೂಲಕ ಅಕ್ಕಿ ವಿತರಣೆಗೆ ಕ್ರಮ

ಭಾರತೀಯ ಆಹಾರ ಮಂಡಳಿ (FCI) ನಿಂದ ಕೆಜಿಗೆ 34 ರೂ. ಅಕ್ಕಿ ಪಡೆದು 2.60 ರೂ. ಸಾಗಾಣಿಕೆ ಸೇರಿ ಒಂದು ಕೆ.ಜಿ. ಅಕ್ಕಿಗೆ ಒಟ್ಟು 36.40 ರೂ. ವೆಚ್ಚ ತಗಲುತ್ತದೆ. NCCF ನಾಫೆಡ್ ಹಾಗೂ ಕೇಂದ್ರೀಯ ಭಂಡಾರ ಈ ಮೂರು ಸಂಸ್ಥೆಗಳು ನಮೂದಿಸುವ ದರ, ಸರಬರಾಜು ಮಾಡುವ ಪ್ರಮಾಣಗಳ ವಿವರಗಳನ್ನು ಪಡೆಯಲಾಗುತ್ತದೆ. ಟೆಂಡರ್ ಮೂಲಕ ಅಕ್ಕಿ ಪಡೆಯಲೂ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಅನ್ನಭಾಗ್ಯ ಯೋಜನೆಡಿ 10 ಕೆಜಿ ಅಕ್ಕಿ ವಿತರಿಸಲು ಒಂದು ತಿಂಗಳಿಗೆ 840 ಕೋಟಿ ರೂ. ವೆಚ್ಚ ತಗುಲಲಿದೆ. ವರ್ಷಕ್ಕೆ ರೂ. 10,092 ಕೋಟಿ ವೆಚ್ಚವಾಗಲಿದೆ. ಬಡ ಜನರ ಹಸಿವು ನೀಗಿಸಲು ಸರ್ಕಾರ ಈ ವೆಚ್ಚವನ್ನು ಭರಿಸಿ ಅಕ್ಕಿಯನ್ನು ವಿತರಿಸಲು ಸಿದ್ಧವಿದೆ ಎನ್ನುವ ಮೂಲಕ ವಿಪಕ್ಷಗಳ ಟೀಕೆಗೆ ಅವರು ತಿರುಗೇಟು ನೀಡಿದರು.

ಅಕ್ಕಿಯ ದಾಸ್ತಾನು ಲಭ್ಯವಿದ್ದರೂ ಕೇಂದ್ರ ಬಿಜೆಪಿ ಸರ್ಕಾರದವರು ಅಕ್ಕಿ ನೀಡಲು ಒಪ್ಪುತ್ತಿಲ್ಲ. ರಾಜ್ಯ ಬಿಜೆಪಿ ಪಕ್ಷದವರು ರಾಜ್ಯದ ಬಡವರಿಗೆ ಅನುಕೂಲವಾಗಲು ಅಕ್ಕಿಯನ್ನು ವಿತರಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಬಹುದಲ್ಲವೇ? ಎಂದು ಅವರು ಪ್ರಶ್ನಿಸಿದರು.

ಜುಲೈ 1ರಿಂದಲೇ ಅಕ್ಕಿ ವಿತರಣೆ?

ಕರ್ನಾಟಕದಲ್ಲಿ ರಾಗಿ, ಜೋಳವನ್ನು 6 ತಿಂಗಳವರೆಗೆ ತಲಾ 2 ಕೆಜಿ ಕೊಡುವಷ್ಟು ದಾಸ್ತಾನು ಲಭ್ಯವಿದೆ. ಹಳೇ ಮೈಸೂರು ಭಾಗದ ಜನರಿಗೆ 2 ಕೆಜಿ ರಾಗಿ ಹಾಗೂ ಹೈದರಾಬಾದ್ ಕರ್ನಾಟಕ ಹಾಗೂ ಮುಂಬೈ ಕರ್ನಾಟಕದ ಭಾಗದ ಜನರಿಗೆ 2 ಕೆಜಿ ಜೋಳ ನೀಡಬಹುದು. ಇನ್ನುಳಿದ 3 ಕೆಜಿಯಷ್ಟು ಪ್ರಮಾಣದ ಅಕ್ಕಿಯನ್ನು ನೀಡಬಹುದು ಎಂದು ಅವರು ಹೇಳಿದರು.

Congress Will Implement Rice Distribution Scheme No Matter Who Does Politics, Says Siddaramaiah

ಜುಲೈ 1ರಿಂದ ರಾಜ್ಯದ ಜನರಿಗೆ ಅಕ್ಕಿ ನೀಡಲು ಸರ್ಕಾರ ಪ್ರಮಾಣಿಕವಾಗಿ ಪ್ರಯತ್ನಿಸುತ್ತಿದೆ. ಕೇಂದ್ರ ಬಿಜೆಪಿ ಸರ್ಕಾರದಲ್ಲಿ ಅಕ್ಕಿ ದಾಸ್ತಾನು ಲಭ್ಯವಿದೆ. ಆದರೆ ಅವರು ರಾಜ್ಯಕ್ಕೆ ಅಕ್ಕಿ ನೀಡಲು ಮನಸ್ಸು ಮಾಡಬೇಕಾಗಿದೆ. ಎಂಎಸ್‌ಪಿ ಮೂಲಕ ಅಕ್ಕಿ ಖರೀದಿಸಬೇಕಾಗಿದೆ. ಬಡವರಿಗೆ ಅಕ್ಕಿ ನೀಡುವ ವಿಷಯದಲ್ಲಿ ಯಾರೇ ರಾಜಕಾರಣ ಮಾಡಿದರೂ, ನಮ್ಮ ಸರ್ಕಾರಕ್ಕೆ ಅನ್ನಭಾಗ್ಯ ಖಂಡಿತ ಜಾರಿಗೆ ತರುತ್ತದೆ ಎಂದರು.

ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ ಎನ್ನುವ ಪ್ರಧಾನಮಂತ್ರಿಗಳೇ ಕೇಂದ್ರ ಸರ್ಕಾರಕ್ಕೆ ತೆರಿಗೆ ಬರುವುದು ರಾಜ್ಯಗಳಿಂದ ಎಂದುಹೇಳುತ್ತಾರೆ. ಹೀಗಿದ್ದರು ಸಹ ಅವರು ಒಕ್ಕೂಟ ಧರ್ಮ ಪಾಲನೆ ಮಾಡುವ ಮೂಲಕ ರಾಜ್ಯಗಳಿಗೆ ಸಹಕಾರ ನೀಡಬೇಕಿದೆ ಎಂದು ಸಿದ್ದರಾಮಯ್ಯ ಮನವಿ ಮಾಡಿದರು.

English summary

Congress will implement rice distribution scheme no matter who does politics, says Siddaramaiah, Govt How many will spent for rice distribution? know more details,

Story first published: Monday, June 19, 2023, 15:29 [IST]

Source link