Telugu
oi-Narayana M
ಮೆಗಾಸ್ಟಾರ್
ಚಿರಂಜೀವಿ
ಮನೆಗೆ
ಹೊಸ
ಅತಿಥಿಯ
ಆಗಮನವಾಗಿದೆ.
ರಾಮ್‌ಚರಣ್
ಪತ್ನಿ
ಉಪಾಸನಾ
ಮುದ್ದಾದ
ಹೆಣ್ಣು
ಮಗುವಿಗೆ
ಜನ್ಮ
ನೀಡಿದ್ದಾರೆ.
ಮದುವೆಯಾಗಿ
11
ವರ್ಷಗಳ
ನಂತರ
ರಾಮ್‌ಚರಣ್-
ಉಪಾಸನಾ
ದಂಪತಿ
ಮಡಲಲ್ಲಿ
ಕಂದಮ್ಮ
ಕಿಲಕಿಲ
ನಗು
ಬೀರಿದೆ.
ಈ
ಸುದ್ದಿ
ಕೇಳಿ
ಮೆಗಾ
ಫ್ಯಾಮಿಲಿ
ಅಭಿಮಾನಿಗಳು
ಖುಷಿಯಾಗಿದ್ದಾರೆ.
ಸೋಶಿಯಲ್
ಮೀಡಿಯಾ
ಮೂಲಕ
ಅಭಿನಂದನೆ
ತಿಳಿಸುತ್ತಿದ್ದಾರೆ.
ಟಾಲಿವುಡ್
ಲವ್ಲಿ
ಕಪಲ್
ಇದೀಗ
ತಂದೆ
ತಾಯಿಯಾಗಿ
ಪ್ರಮೋಷನೆ
ಪಡೆದಿದ್ದಾರೆ.
ಜೋಡಿಗೆ
ಮಂಗಳವಾರ
ಬೆಳ್ಳಂ
ಬೆಳಗ್ಗೆ
ಹೆಣ್ಣೂ
ಮಗು
ಹುಟ್ಟಿರುವುದಾಗಿ
ಆಸ್ಪತ್ರೆ
ಮೂಲಗಳು
ತಿಳಿಸಿವೆ.
ಹೆರಿಗೆಗೆ
ಉಪಾಸನಾ
ಅಪೋಲೊ
ಆಸ್ಪತ್ರೆಗೆ
ದಾಖಲಾಗಿದ್ದಾರೆ.
ನಿನ್ನೆ
ರಾಮ್‌ಚರಣ್
ಸೇರಿದಂತೆ
ಕುಟುಂಬ
ಸದಸ್ಯರ
ಜೊತೆ
ಉಪಾಸನಾ
ಆಸ್ಪತ್ರೆಗೆ
ದಾಖಲಾಗಿದ್ದ
ವಿಡಿಯೋ
ವೈರಲ್
ಆಗಿತ್ತು.
ಮೆಗಾ
ಪವರ್
ಸ್ಟಾರ್
ದಂಪತಿಗೆ
ಹೆಣ್ಣು
ಮಗು
ಹುಟ್ಟಿರ
ಬಗ್ಗೆ
ಆಸ್ಪತ್ರೆ
ಮೆಡಿಕಲ್
ಬುಲೆಟಿನ್
ಬಿಡುಗಡೆ
ಮಾಡಿದೆ.

ಕೊನಿದೇಲ
ಹಾಗೂ
ಕಮಿನೇನಿ
ಫ್ಯಾಮಿಲಿಯಲ್ಲಿ
ಸಂಭ್ರಮ
ಮುಗಿಲು
ಮುಟ್ಟಿದೆ.
ಮೆಗಾ
ಪ್ರಿನ್ಸೆಸ್
ಆಗಮನದಿಂದ
ಅಭಿಮಾನಿಗಳಲ್ಲೂ
ಸಂಭ್ರಮ
ಮನೆಮಾಡಿದೆ.
ಸದ್ಯ
ರಾಮ್‌ಚರಣ್
‘ಗೇಮ್
ಚೇಂಜರ್’
ಸಿನಿಮಾದಲ್ಲಿ
ನಟಿಸುತ್ತಿದ್ಧಾರೆ.
ಆದರೆ
ಕಳೆದ
ಕೆಲ
ದಿನಗಳಿಂದ
ಶೂಟಿಂಗ್‌ನಿಂದ
ಬಿಡುವು
ಪಡೆದು
ಉಪಾಸನಾ
ಜೊತೆ
ಕಾಲ
ಕಳೆಯುತ್ತಿದ್ಧಾರೆ.
ಇನ್ನು
ಎರಡು
ತಿಂಗಳು
ಚಿತ್ರೀಕರಣಕ್ಕೆ
ಹೋಗದಿರಲು
ತೀರ್ಮಾನಿಸಿದ್ದಾರೆ.
ಕಳೆದ
ಡಿಸೆಂಬರ್‌ನಲ್ಲಿ
ಚಿರಂಜೀವಿ
ಸೊಸೆ
ಉಪಾಸನಾ
ಗರ್ಭಿಣಿ
ಆಗಿರುವ
ವಿಚಾರವನ್ನು
ಸೋಶಿಯಲ್
ಮೀಡಿಯಾದಲ್ಲಿ
ಹಂಚಿಕೊಂಡಿದ್ದರು.
ನಂತರ
ವಿದೇಶಗಳಲ್ಲಿ
‘RRR’
ಸಿನಿಮಾ
ಪ್ರಶಸ್ತಿ
ಗಳಿಸಿದಾಗ
ರಾಮ್‌ಚರಣ್
ಜೊತೆ
ಉಪಾಸನಾ
ಕೂಡ
ಹೋಗಿ
ಸಂಭ್ರಮಿಸಿದರು.
ಆಸ್ಕರ್
ಪ್ರಶಸ್ತಿ
ಪ್ರದಾನ
ಸಮಾರಂಭದಲ್ಲೂ
ಭಾಗಿ
ಆಗಿ
ಖುಷಿಪಟ್ಟಿದ್ದರು.
ಈ
ವೇಳೆ
ಪೋಷಕರಾಗುತ್ತಿರುವ
ಬಗ್ಗೆ
ಹಾಲಿವುಡ್
ಮಾಧ್ಯಮಗಳ
ಜೊತೆ
ಸಂತಸ
ಹಂಚಿಕೊಂಡಿದ್ದರು.
ದುಬೈನಲ್ಲಿ
ಆಪ್ತರ
ಜೊತೆ
ಅದ್ಧೂರಿಯಾಗಿ
ಸೀಮಂತ
ಕಾರ್ಯಕ್ರಮ
ಹಮ್ಮಿಕೊಂಡಿದ್ದರು.
ಇತ್ತೀಚೆಗೆ
ಫ್ಯಾಮಿಲಿ
ಸದಸ್ಯರು
ಹಾಗೂ
ಸ್ನೇಹಿತರಿಗಾಗಿ
ಹೈದರಾಬಾದ್‌ನಲ್ಲಿ
ಮತ್ತೊಂದು
ಸೀಮಂತ
ಕಾರ್ಯಕ್ರಮ
ನಡೆದಿತ್ತು.
ಭರ್ಜರಿ
ಪಾರ್ಟಿ
ಮಾಡಿ
ಮೆಗಾ
ಫ್ಯಾಮಿಲಿ
ಖುಷಿಪಟ್ಟಿತ್ತು.
ಇದೀಗ
ಮಹಾಲಕ್ಷ್ಮಿ
ಆಗಮನದಿಂದ
ಮನೆಯಲ್ಲಿ
ಸಂಭ್ರಮ
ಮನೆ
ಮಾಡಿದೆ.
English summary
Ramcharan And Upasana have been blessed with a baby girl. Ram Charan and Upasana married on June 14, 2012. know more.
Tuesday, June 20, 2023, 7:41