ಮದ್ರಾಸ್ ಐಗೆ ಚಿಕಿತ್ಸೆ; ಧಾರವಾಡ ಜಿಲ್ಲಾಸ್ಪತ್ರೆ ಮಾದರಿ ಕ್ರಮ | Separate Unit At Dharwad District Hospital To Treat Madras Eye Patients

Dharwad

oi-Gururaj S

|

Google Oneindia Kannada News

ಧಾರವಾಡ, ಜುಲೈ 30; ಕರ್ನಾಟಕದಲ್ಲಿನ ಹವಾಮಾನ ವ್ಯತ್ಯಾಸದಿಂದ ಮತ್ತು ನಿರಂತರವಾಗಿ ಸುರಿಯುತ್ತಿರುವ ಮಳೆಯ ಕಾರಣ ಕಣ್ಣಿನ ಸಮಸ್ಯೆ ಹೆಚ್ಚಾಗುತ್ತಿವೆ. ಕೆಲವು ಜನರಲ್ಲಿ ‘ಮದ್ರಾಸ್ ಐ’ ಸಮಸ್ಯೆ ಕಂಡು ಬರುತ್ತಿದೆ. ಇದರ ಲಕ್ಷಣ, ಮುನ್ನೆಚ್ಚರಿಕೆ ಕ್ರಮಗಳನ್ನು ಈಗಾಗಲೇ ಜನರ ಮಾಹಿತಿಗಾಗಿ ಹಂಚಿಕೊಳ್ಳಲಾಗುತ್ತಿದೆ.

ಧಾರವಾಡ ಜಿಲ್ಲೆಯಲ್ಲಿ ಅಡಿನೊ ವೈರಾಣುವಿನಿಂದ ಹರಡುವ ‘ಮದ್ರಾಸ್ ಐ’ ರೋಗ ಬಾಧೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಎಲ್ಲಾ ವಯಸ್ಸಿನ ಜನರು ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ಆಗಮಿಸುವುದರಿಂದ ಇದು ಪರಸ್ಪರಿಗೆ ಹರಡದಂತೆ ಮುನ್ನಚರಿಕೆಯಾಗಿ ಜಿಲ್ಲಾಸ್ಪತ್ರೆ ಮಾದರಿಯಾಗುವ ಕ್ರಮವನ್ನು ಕೈಗೊಂಡಿದೆ.

ಮದ್ರಾಸ್ ಐ ಪ್ರಕರಣ ಹೆಚ್ಚಳ; ರೋಗ ಲಕ್ಷಣ, ಮುನ್ನೆಚ್ಚರಿಕೆ ಕ್ರಮಗಳು ಮದ್ರಾಸ್ ಐ ಪ್ರಕರಣ ಹೆಚ್ಚಳ; ರೋಗ ಲಕ್ಷಣ, ಮುನ್ನೆಚ್ಚರಿಕೆ ಕ್ರಮಗಳು

Separate Unit At Dharwad District Hospital To Treat Madras Eye Patients

ಜಿಲ್ಲಾ ಆಸ್ಪತ್ರೆಯ ಮುಖ್ಯ ಕಟ್ಟಡದಲ್ಲಿ ಕಣ್ಣಿನ ಚಿಕಿತ್ಸಾ ವಿಭಾಗದಲ್ಲಿ, ‘ಮದ್ರಾಸ್ ಐ’ ಸೋಂಕು ಪೀಡಿತರ ಚಿಕಿತ್ಸೆಗಾಗಿ ಪ್ರತ್ಯೇಕ ಸಿಬ್ಬಂದಿ ಹಾಗೂ ಕೊಠಡಿ ವ್ಯವಸ್ಥೆಯನ್ನು ಮಾಡಿದೆ. ಈ ಕುರಿತು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಂಗಪ್ಪ ಗಾಬಿ ಮಾಹಿತಿಯನ್ನು ನೀಡಿದ್ದಾರೆ.

ದಾವಣಗೆರೆಯಲ್ಲಿ ಹೆಚ್ಚಿದ ಮದ್ರಾಸ್ ಐ: ವಿದ್ಯಾರ್ಥಿಗಳಲ್ಲಿ ವೇಗವಾಗಿ ಹರಡುತ್ತಿದೆ ವೈರಾಣುದಾವಣಗೆರೆಯಲ್ಲಿ ಹೆಚ್ಚಿದ ಮದ್ರಾಸ್ ಐ: ವಿದ್ಯಾರ್ಥಿಗಳಲ್ಲಿ ವೇಗವಾಗಿ ಹರಡುತ್ತಿದೆ ವೈರಾಣು

ಬೇರೆ ರೋಗಿಗಳಿಗೆ ಸಮಸ್ಯೆ ಆಗಬಾರದು; ಧಾರವಾಡದ ಸರ್ಕಾರಿ ಆಸ್ಪತ್ರೆಗೆ ಮುಖ್ಯವಾಗಿ ಗ್ರಾಮೀಣ ಜನರು, ಆರ್ಥಿಕವಾಗಿ ಹಿಂದುಳಿದವರು, ಗರ್ಭಿಣಿ ಮಹಿಳೆಯರು, ಸಣ್ಣ ಮಕ್ಕಳು, ಇತರ ರೋಗಿಗಳು ಚಿಕಿತ್ಸೆಗಾಗಿ ದಿನ ನಿತ್ಯ ಆಗಮಿಸುತ್ತಾರೆ. ಅವರಿಗೆ ‘ಮದ್ರಾಸ್ ಐ’ ಕಣ್ಣಿನ ಉರಿ ಊತವಾಗಿ ಸಮಸ್ಯೆ ಆಗಬಾರದು. ಅದಕ್ಕಾಗಿ ‘ಮದ್ರಾಸ್ ಐ’ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಆಗಮಿಸುವವರಿಗೆ ಪ್ರತ್ಯೇಕವಾಗಿ ನೋಂದಣಿ ಕೌಂಟರ್, ದಾಖಲಾತಿ ಕೇಂದ್ರ ಹಾಗೂ ಚಿಕಿತ್ಸಾ ಕೊಠಡಿಯನ್ನು ಮಾಡಲಾಗಿದೆ.

 Karnataka Rain: ವಾರಂತ್ಯದಲ್ಲಿ ಈ 10 ಜಿಲ್ಲೆಗಳಲ್ಲಿ ಭಾರಿ ಮಳೆ Karnataka Rain: ವಾರಂತ್ಯದಲ್ಲಿ ಈ 10 ಜಿಲ್ಲೆಗಳಲ್ಲಿ ಭಾರಿ ಮಳೆ

“ಮದ್ರಾಸ್ ಐ ಚಿಕಿತ್ಸೆಗೆ ಆಗಮಿಸುವರಿಗೆ ಚಿಕಿತ್ಸೆ ನೀಡಲು ಪ್ರತ್ಯೇಕ ವೈದ್ಯಕೀಯ ಸಿಬ್ಬಂದಿ, ವೈದ್ಯರನ್ನು ನೇಮಿಸಲಾಗಿದ್ದು, ರಜಾ ದಿನಗಳಲ್ಲಿ ಬೆಳಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆವರೆಗೆ ಹಾಗೂ ಉಳಿದಂತೆ ಎಲ್ಲ ದಿನಗಳಲ್ಲಿ ಬೆಳಗ್ಗೆ 9 ರಿಂದ ಸಂಜೆ 4.30ರ ವರೆಗೆ ಚಿಕಿತ್ಸೆಗೆ ಲಭ್ಯವಿರುತ್ತಾರೆ. ಚಿಕಿತ್ಸೆ ನಂತರ ಅಲ್ಲಿಯೇ ಅಗತ್ಯ ಔಷಧಿ ನೀಡಲು ವ್ಯವಸ್ಥೆ ಮಾಡಲಾಗಿದೆ” ಎಂದು ಡಾ. ಸಂಗಪ್ಪ ಗಾಬಿ ತಿಳಿಸಿದ್ದಾರೆ.

ಜುಲೈ 24ರ ಸೋಮವಾರದಿಂದ ಜಿಲ್ಲಾ ಆಸ್ಪತ್ರೆಯಲ್ಲಿ ‘ಮದ್ರಾಸ್ ಐ’ ಚಿಕಿತ್ಸೆಗೆ ಪ್ರತ್ಯೇಕವಾಗಿ ಕ್ರಮ ಕೈಗೊಂಡಿದ್ದು, ಪ್ರತಿದಿನ ಸರಿಸುಮಾರು 60 ರಿಂದ 80 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ, ಕಳೆದ ಆರು ದಿನಗಳಲ್ಲಿ 240ಕ್ಕೂ ಹೆಚ್ಚು ಜನ ಚಿಕಿತ್ಸೆ ಪಡೆದುಕೊಂಡಿದ್ದಾರೆ. ‘ಮದ್ರಾಸ್ ಐ’ಗೆ ಚಿಕಿತ್ಸೆ ನೀಡುವ ವೈದ್ಯರಿಗೆ ಮತ್ತು ಸಿಬ್ಬಂದಿಗಳ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

‘ಮದ್ರಾಸ್ ಐ’ ವೈರಾಣು ರೋಗ 20 ರಿಂದ 35 ವಯೋಮಾನದವರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಅದರಲ್ಲೂ ವಿಶೇಷವಾಗಿ ಹಾಸ್ಟೆಲ್, ಪಿಜಿಗಳಲ್ಲಿ ವಾಸಿಸುವ ಯುವಕ/ ಯುವತಿಯರಲ್ಲಿ ಇದು ಹೆಚ್ಚು ಕಾಣುತ್ತಿದೆ. ಇಂತವರು ವಾಸ ಸ್ಥಳದಲ್ಲಿ ಇತರರೊಂದಿಗೆ ಸುರಕ್ಷಿತ ಅಂತರ, ನೈರ್ಮಲ್ಯ, ಸ್ವಚ್ಛತೆ ಕಾಪಾಡಿಕೊಂಡು, ಆಗಾಗ ಕೈ ತೊಳೆದು ಕೊಳ್ಳಬೇಕು ಎಂದು ಕರೆ ನೀಡಲಾಗಿದೆ.

ಮದ್ರಾಸ್ ಐ ರೋಗ ಲಕ್ಷಣಗಳು: ಹವಾಮಾನ ವೈಪರೀತ್ಯಗಳಿಂದ ಮತ್ತು ನಿರಂತರ ಮಳೆಯಿಂದಾಗಿ ಕಣ್ಣಿನ‌ಉರಿ ಊತದ ಸಮಸ್ಯೆ ಕಂಡು ಬರುತ್ತಿದೆ. ಕಣ್ಣಿನಿನ ಬಿಳಿ ಭಾಗ ಕೆಂಪಾಗುವುದು, ಕಣ್ಣುಗಳಲ್ಲಿ ಉರಿ ಮತ್ತು ಊತ ಬರುವುದು, ಕಣ್ಣುಗಳಿಂದ ನಿರಂತರವಾಗಿ ನೀರು ಬರುವುದು, ಕಣ್ಣಲ್ಲಿ ಪಿಚ್ಚು ಬರುವುದು ಮತ್ತು ಕಣ್ಣು ಊದಿಕೊಳ್ಳುವುದು ‘ಮದ್ರಾಸ್ ಐ’ನ ಮುಖ್ಯ ಲಕ್ಷಣಗಳಾಗಿವೆ.

‘ಮದ್ರಾಸ್ ಐ’ ಪೀಡಿತ ಜನರಿಗೆ ನೋವು ನಿವಾರಕ ಮಾತ್ರೆ, ಕಣ್ಣಿನ ಡ್ರಾಪ್ಸ್ ನೀಡುವುದು ಮತ್ತು ಕಣ್ಣಿಗೆ ಕೂಲಿಂಗ್ ಗ್ಲಾಸ್ ಅಥವಾ ಕಪ್ಪು ಕನ್ನಡಕ ಧರಿಸಲು ಸೂಚಿಸಲಾಗುತ್ತದೆ. ಆಗಾಗ ಕೈ ತೊಳೆಯುವುದು, ಅನಗತ್ಯವಾಗಿ ಇತರ, ಇತರರ ವಸ್ತು ಮುಟ್ಟದಿರುವುದು, ಕಣ್ಣು ಒರೆಸಲು ಪ್ರತ್ಯೇಕ ವಸ್ತ್ರ ಅಥವಾ ಮೆತ್ತನೆಯ ಬಟ್ಟೆ ಬಳಸುವುದು ಹಾಗೂ ಆದಷ್ಟು ಜನನಿಬಿಡ ಸ್ಥಳದಿಂದ ದೂರವಿರುವುದು ಉತ್ತಮ.

ಕಣ್ಣು ಕೆಂಪಾದಾಗ ಆ್ಯಂಟಿಬಯಾಟಿಕ್ ಔಷಧಿ ಬಳಸಬೇಕು. ಕಣ್ಣನ್ನು ಆಗಾಗ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಬೇಕು. ‘ಮದ್ರಾಸ್ ಐ’ ವೈರಾಣು ರೋಗವಾಗಿದ್ದು, ಇದು ಗಾಳಿ ಮೂಲಕ ಹರಡುವದಿಲ್ಲ. ಸ್ವಚ್ಚತೆ ಮತ್ತು ವೈದ್ಯರ ಸಲಹೆಗಳನ್ನು ಪಾಲಿಸಿದರೆ, ರೋಗ ನಿರೋಧಕ ಶಕ್ತಿಗೆ ಅನುಗುಣವಾಗಿ 3 ರಿಂದ 6 ದಿನಗಳಲ್ಲಿ ಕಡಿಮೆ ಆಗುತ್ತದೆ.

ನಿರ್ಲಕ್ಷ್ಯ ಮಾಡಿದರೆ ಕಣ್ಣಿನ ದೃಷ್ಟಿಗೆ ತೊಂದರೆ ಆಗಬಹುದು. ಮುಂಜಾಗೃತೆ ವಹಿಸಿ ನಿಮ್ಮ ಆರೋಗ್ಯದೊಂದಿಗೆ ಇತರರ ಆರೋಗ್ಯವನ್ನು ರಕ್ಷಿಸಿ ಎಂದು ಡಾ. ಸಂಗಪ್ಪ ಗಾಬಿ ಕರೆ ನೀಡಿದ್ದಾರೆ.

English summary

Dharwad district hospital set up separate unit to treat the people who come to hospital with madras eye issue.

Source link