ಮಕಾಡೆ ಮಲಗಿದ ಆದಿಪುರುಷ್; 10 ದಿನ ಕಳೆದ್ರೂ ಬರಲಿಲ್ಲ ಬಜೆಟ್‌ನಷ್ಟು ಕಲೆಕ್ಷನ್! | Adipurush collects 450 crores from 10 days in worldwide box office

bredcrumb

Bollywood

oi-Srinivasa A

|

ರೆಬೆಲ್
ಸ್ಟಾರ್
ಪ್ರಭಾಸ್
ಲಕ್
ಬಾಹುಬಲಿ
ಚಿತ್ರ
ಸರಣಿಯ
ಬಳಿಕ
ಕೈಕೊಟ್ಟಿದೆ
ಎಂದರೆ
ತಪ್ಪಾಗಲಾರದು.
ಹೌದು,
ಬಾಹುಬಲಿ
ಬಳಿಕ
ಬಂದ
ಸಾಹೋ
ಹಾಗೂ
ರಾಧೆ
ಶ್ಯಾಮ್
ಚಿತ್ರಗಳು
ಫ್ಲಾಪ್
ಆಗಿದ್ದವು.
ಸಾಹೋ
ತುಸು
ಸಮಾಧಾನಕರ
ಕಲೆಕ್ಷನ್
ಮಾಡಿದರೆ,
ರಾಧೆ
ಶ್ಯಾಮ್
ಬರೋಬ್ಬರಿ
100
ಕೋಟಿ
ನಷ್ಟವನ್ನು
ಮಾಡಿತ್ತು.

ಹೀಗೆ
ಬಾಹುಬಲಿ
ಬಳಿಕ
ಬಿಡುಗಡೆಗೊಂಡ
ಸತತ
ಎರಡು
ಚಿತ್ರಗಳ
ಮೂಲಕ
ಹಿನ್ನಡೆ
ಅನುಭವಿಸಿದ್ದ
ಪ್ರಭಾಸ್
ನಟನೆಯ
ಮೂರನೇ
ಚಿತ್ರ
ಆದಿಪುರುಷ್
ಮೇಲೆ
ದೊಡ್ಡ
ಮಟ್ಟದ
ನಿರೀಕ್ಷೆ
ಇತ್ತು.
ಪ್ರಭಾಸ್
ನಟನೆಯ
ಮೊದಲ
ಹಿಂದಿ
ಚಿತ್ರ
ಇದಾಗಿದ್ದು,

ಚಿತ್ರ
ಸಹ
ರೆಬೆಲ್
ಸ್ಟಾರ್‌
ಕೈಹಿಡಿಯಲಿಲ್ಲ.

Adipurush collects 450 crores from 10 days in worldwide box office

ಹೌದು,
ಆದಿಪುರುಷ್
ಚಿತ್ರ
ಮಕಾಡೆ
ಮಲಗಿದೆ.
ಕಳೆದ
ವಾರ
ಜೂನ್
16ರಂದು
ಬಿಡುಗಡೆಗೊಂಡಿದ್ದ
ಆದಿಪುರುಷ್
ತೆರೆ
ಕಾಣುವ
ಮುನ್ನ
ಕುತೂಹಲ
ಸೃಷ್ಟಿಸಿತ್ತು
ಹಾಗೂ
ಟೀಸರ್‌ನಲ್ಲಿದ್ದ
ಕಳಪೆ
ವಿಎಫ್ಎಕ್ಸ್
ಕಾರಣದಿಂದಾಗಿ
ಹೀನಾಯವಾಗಿ
ಟ್ರೋಲ್‌ಗೂ
ಸಹ
ಒಳಗಾಗಿತ್ತು.

ಹೀಗೆ
ಬಿಡುಗಡೆಗೂ
ಮುನ್ನವೇ
ಮಿಶ್ರ
ಪ್ರತಿಕ್ರಿಯೆ
ಪಡೆದುಕೊಂಡಿದ್ದ
ಆದಿಪುರುಷ್
ಚಿತ್ರ
ಬಿಡುಗಡೆಯಾದ
ನಂತರವೂ
ಸಹ
ಅದೇ
ರೀತಿಯ
ವಿಮರ್ಶೆಗಳನ್ನು
ಪಡೆದುಕೊಂಡಿದೆ.
ಹೌದು,
ಆದಿಪುರುಷ್
ತನ್ನ
ಕಳಪೆ
ವಿಎಫ್ಎಕ್ಸ್
ಕಾರಣಕ್ಕೆ
ಕೆಟ್ಟ
ಟೀಕೆಗಳನ್ನು
ಪಡೆದುಕೊಳ್ತಿದೆ.
ಚಿತ್ರ
ನೋಡಿ
ಹೊರಬಂದ
ಸಿನಿ
ರಸಿಕರು
ಇದು
ರಾಮಾಯಣ
ಅಲ್ಲ,
ಮಾಡರ್ನ್
ಅಪ್‌ಡೇಟೆಡ್
ರಾಮಾಯಣ
ಎಂದು
ಅಸಮಾಧಾನ
ಹೊರಹಾಕಿದ್ದರು.
ಚಿತ್ರದ
ಮೊದಲ
ಪ್ರದರ್ಶನ
ಮುಗಿಯುತ್ತಿದ್ದಂತೆಯೇ
ಚಿತ್ರದ
ವಿರುದ್ಧ
ದೊಡ್ಡ
ಮಟ್ಟದಲ್ಲಿ
ನೆಗೆಟಿವ್
ವಿಮರ್ಶೆಗಳು
ಕೇಳಿಬಂದವು.

ಹೀಗೆ
ಮಿಶ್ರ
ಪ್ರತಿಕ್ರಿಯೆ
ಎಂಬ
ಹಿನ್ನಡೆ
ಒಂದೆಡೆಯಾದರೆ,
ಮತ್ತೊಂದೆಡೆ
ಚಿತ್ರ
ಹತ್ತು
ದಿನಗಳ
ಪ್ರದರ್ಶನವನ್ನು
ಪೂರೈಸಿದರೂ
ಸಹ
ತನ್ನ
ಬಜೆಟ್‌ಗಿಂತ
ಹೆಚ್ಚು
ಗಳಿಕೆ
ಮಾಡುವಲ್ಲಿ
ವಿಫಲಗೊಂಡಿದೆ.
ಹೌದು,
ನಿನ್ನೆಗೆ
(
ಜೂನ್
25
)
ಆದಿಪುರುಷ್
ಚಿತ್ರ
ಹತ್ತು
ದಿನಗಳ
ಪ್ರದರ್ಶನವನ್ನು
ಪೂರೈಸಿದ್ದು,
ಚಿತ್ರತಂಡ
ಸಿನಿಮಾ
450
ಕೋಟಿ
ಗ್ರಾಸ್
ಕಲೆಕ್ಷನ್
ಅನ್ನು
ಮಾಡಿದೆ
ಎಂಬುದನ್ನು
ಅಧಿಕೃತವಾಗಿ
ಘೋಷಿಸಿದೆ.
500
ಕೋಟಿ
ಬಜೆಟ್‌ನಲ್ಲಿ
ತಯಾರಾಗಿರುವ
ಆದಿಪುರುಷ್
ಇನ್ನೂ
ಸಹ
ತನ್ನ
ಬಜೆಟ್‌ಗಿಂತ
ಹೆಚ್ಚು
ಗಳಿಸಲಾಗದೇ
ಒದ್ದಾಡುತ್ತಿದೆ.

ಬಾಕ್ಸ್
ಆಫೀಸ್‌ನಲ್ಲಿ
ಗಳಿಕೆ
ಮಾಡಲಾಗದೇ
ಒದ್ದಾಡುತ್ತಿರುವ
ಆದಿಪುರುಷ್
ವಿರುದ್ಧ
ಆಫ್‌ಲೈನ್‌ನಲ್ಲಿಯೂ
ಸಹ
ಅಸಮಾಧಾನ
ಭುಗಿಲೆದ್ದಿದೆ.
ನೇಪಾಳದಲ್ಲಿ
ಮೊದಲಿಗೆ
ಚಿತ್ರವನ್ನು
ಬ್ಯಾನ್
ಮಾಡಲು
ಅಲ್ಲಿನ
ಕಠ್ಮಂಡುವಿನ
ಮೇಯರ್
ಕರೆ
ನೀಡಿದ್ದರು.
ಬಳಿಕ
ಭಾರತದ
ಛತ್ತೀಸಘಡದ
ಮುಖ್ಯಮಂತ್ರಿಗಳೂ
ಸಹ
ರಾಮಾಯಣದ
ಹೆಸರನ್ನು
ಹಾಳು
ಮಾಡುತ್ತಿರುವ
ಆದಿಪುರುಷ್
ಚಿತ್ರವನ್ನು
ಬ್ಯಾನ್
ಮಾಡಿ
ಎಂದು
ಅಮಿತ್
ಶಾಗೆ
ಮನವಿ
ಮಾಡಿಕೊಂಡಿದ್ದರು.
ಒಟ್ಟಿನಲ್ಲಿ
ಬೃಹತ್
ವೆಚ್ಚದಲ್ಲಿ
ತಯಾರಾದ
ಆದಿಪುರುಷ್
ಎಲ್ಲಾ
ಆಯಾಮದಿಂದಲೂ
ಹೀನಾಯವಾದ
ಫಲಿತಾಂಶ
ಪಡೆದುಕೊಂಡು

ವರ್ಷ
ಅತಿಹೆಚ್ಚು
ಟ್ರೋಲ್
ಆದ
ಸಿನಿಮಾ
ಎನಿಸಿಕೊಂಡಿದೆ.

English summary

Adipurush collects 395 crores from 5 days in worldwide box office. Read on

Monday, June 26, 2023, 18:13

Story first published: Monday, June 26, 2023, 18:13 [IST]

Source link