Astrology
oi-Mallika P

ಜೋತಿಷ್ಯದ ಪ್ರಕಾರದ ಪ್ರತಿ ಗ್ರಹದ ಸಂಚಾರವೂ ಅತಿ ಮುಖ್ಯವಾಗಿರುತ್ತದೆ. ಒಂದು ರಾಶಿಯಲ್ಲಿ ಒಂದು ಗ್ರಹದ ಸಂಚಾವು ಇರುವ ೧೨ ರಾಶಿಗಳ ಮೇಲೆ ಪ್ರಭಾವ ಬೀರಿದರೂ, ಕೆಲವೊಂದು ರಾಶಿಗೆ ಅದೃಷ್ಟ ತಂದುಕೊಟ್ಟರೆ, ಇನ್ನು ಕೆಲವು ರಾಶಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹೀಗಾಗಿ ಅದೃಷ್ಟ ಬೀರುವ ರಾಶಿಗಳು ಹೇಗೆ ಸಂತೋಷದಿಂದ ಸ್ವೀಕರಿಸ ಬೇಕೋ ಅದೇ ರೀತಿ ಕೆಟ್ಟ ಪರಿಣಾಮ ಬೀರುವ ರಾಶಿಗಳು ಎಚ್ಚರಿಕೆಯಿಂದ ಇರಬೇಕಾಗುತ್ತದೆ.
ಜೋತಿಷ್ಯ ಪ್ರಕಾರ ಮಂಗಳ ಗ್ರಹವನ್ನು ಧೈರ್ಯ, ಅದೃಷ್ಟ ನೀಡುವ ಗ್ರಹ ಎನ್ನಲಾಗುತ್ತದೆ. ಈ ಗ್ರಹದ ಸಂಚಾರವು ಬಹಳ ಮುಖ್ಯವಾಗುತ್ತದೆ. ಜುಲೈ 1ರಂದು ಮಂಗಳ ಗ್ರಹ ತನ್ನ ರಾಶಿ ಬದಲಾವಣೆ ಮಾಡುತ್ತಿದೆ. ಅಂದು ಇದು ಸಿಂಹ ರಾಶಿಯನ್ನು ಪ್ರವೇಶಿಸಲಿದ್ದು, ಆಗಸ್ಟ್ 17ರವರೆಗೆ ಮಂಗಳ ಈ ರಾಶಿಯಲ್ಲಿ ಇರುತ್ತಾನೆ.
ಮಂಗಳವು ಅಗ್ನಿ ಅಂಶದ ಗ್ರಹವಾಗಿದೆ ಮತ್ತು ಸಿಂಹ ರಾಶಿಯು ಅಗ್ನಿ ಅಂಶದ ಸಂಕೇತವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಸಿಂಹ ರಾಶಿಯಲ್ಲಿ ಬಂದ ನಂತರ ಮಂಗಳನು ಹೆಚ್ಚು ಉಗ್ರನಾಗುತ್ತಾನೆ. ಇದರ ಜೊತೆಗೆ ಶನಿ ಮತ್ತು ಮಂಗಳವು ಸಂಸಪ್ತಕ ಯೋಗವನ್ನು ರೂಪಿಸುತ್ತದೆ. ಶನಿ ಮತ್ತು ಮಂಗಳ ಮುಖಾಮುಖಿಯಾಗುವುದು ಮತ್ತು ಸಂಸಪ್ತಕ ಯೋಗದಿಂದ ಈ ಕೆಳಗಿನ ರಾಶಿಗಳಿಗೆ ಕೆಟ್ಟ ಸಮಯ ಆರಂಭವಾಗಲಿದ್ದು, ಎಚ್ಚರಿಕೆಯಿಂದ ಇರಬೇಕಿದೆ.

ಮೇಷ ರಾಶಿ
ಮೇಷ ರಾಶಿಯವರಿಗೆ ಈ ಸಮಯದಲ್ಲಿ ಆರೋಗ್ಯದ ಬಗ್ಗೆ ಹಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ನಿಮ್ಮ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಗಳಿದ್ದು, ಮುನ್ನೆಚ್ಚರಿಕೆ ಕ್ರಮ ಅಗತ್ಯವಾಗಿದೆ. ಉದರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಇದ್ದು, ವಿಶೇಷವಾಗಿ ಆಹಾರದ ವಿಚಾರದಲ್ಲಿ ಎಚ್ಚರಿಕೆ ವಹಿಸುವುದು ಅಗತ್ಯ. ಹೊರಗಿನ ತಿನಿಸುಗಳನ್ನು ಹಾಗೂ ತಂಪು ಪಾನೀಯಗಳು ಹಾಗೂ ಮಸಾಲೆಯಂತಹ ಆಹಾರವು ಆರೋಗ್ಯವನ್ನು ಕೆಡಿಸಲಿದ್ದು, ಆಹಾರ ಕ್ರಮದಲ್ಲಿ ಸಮತೋಲನತೆ ಇರಲಿ.
ಇನ್ನು ಈ ಸಮಯದಲ್ಲಿ ಮೇಷ ರಾಶಿಯವರು ವಾಹನವನ್ನು ಬಹಳಸುವಾಗ ತೀರಾ ಎಚ್ಚರಿಕೆಯಿಂದ ಇರಬೇಕು. ವೇಗವಾದ ಚಾಲನೆ, ದೂರ ಪ್ರಯಾಣದ ಚಾಲನೆಯನ್ನು ಸದ್ಯಕ್ಕೆ ತಡೆಯುವುದು ಉತ್ತಮ. ಇನ್ನು ವೈಯಕ್ತಿಕವಾಗಿ ಕೂಡ ನಿಮ್ಮ ಸಮಯವಲ್ಲದ ಕಾರಣ ಸಂಗಾತಿ ಅಥವಾ ಪ್ರೀತಿ ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ. ಶನಿ ಮತ್ತು ಮಂಗಳ ನಿಮ್ಮ ವೈಯಕ್ತಿಕ ಜೀವನದ ಮೇಲೆ ಹೆಚ್ಚು ಪರಿಣಾಮ ಬೀರಲಿದ್ದು, ಸಂಬಂಧಗಳನ್ನು ಎಚ್ಚರಿಕೆಯಿಂದ ವ್ಯವಹರಿಸಿ.

ಕಟಕ ರಾಶಿ
ಮಂಗಳ ಮತ್ತು ಶನಿ ಮುಖಾಮುಖಿಯಾದಾಗ ಕಟಕ ರಾಶಿಯವರ ಸಮಯ ಕೆಡಲಿದ್ದು, ಎಲ್ಲಾ ವಿಚಾರದಲ್ಲೂ ಎಚ್ಚರಿಕೆ ಅಗತ್ಯ. ಈ ಸಮಯದಲ್ಲಿ ಕಟಕ ರಾಶಿಯವರ ಮಾತು ವರಟು ಹಾಗೂ ಕಹಿಯಾಗಬಹುದು. ಇದರಿಂದ ದೊಡ್ಡ ಪರಿಣಾಮ ಬೀರಬಹುದು. ಹೀಗಾಗಿ ವಾದಗಳನ್ನು ತಪ್ಪಿಸಿ. ಯಾರೊಂದಿಗಾದರೂ ಮಾತನಾಡುವಾಗ ನಿಮ್ಮ ಮಾತನ್ನು ನಿಯಂತ್ರಿಸಿ. ಇಲ್ಲವಾದರೆ ನಿಮ್ಮ ಹೆಸರು ಹಾಳಾಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ನೀವು ನಿಮ್ಮ ಪ್ರೀತಿ, ಸಂಬಂಧಗಳ ಬಗ್ಗೆ ವಿಶೇಷ ಗಮನ ಹರಿಸಬೇಕು. ಮಾತಿನಿಂದ ಮನೆ ಕೆಟ್ಟಿತು ಎನ್ನುವ ಗಾದೆ ನೆನಪಿರಲಿ. ಹೀಗಾಗಿ ಕೆಲ ಸಮಯದವರೆಗೆ ನಾಲಿಗೆ ಮೇಲಿನ ಹಿಡಿತವೇ ನಿಮ್ಮ ಹಿತವಾಗಿರುತ್ತದೆ.

ಕನ್ಯಾ ರಾಶಿ
ಮಂಗಳ ಮತ್ತು ಶನಿಯ ಪ್ರಭಾವದಿಂದಾಗಿ ಕನ್ಯಾರಾಶಿಯವರ ಆರ್ಥಿಕ ಸ್ಥಿತಿ ಮುಗ್ಗರಿಸಲಿದೆ. ಇದು ಹಣ ನಿಮ್ಮ ಕೈಯಿಂದ ಯತ್ತೇಚ್ಛವಾಗಿ ಖರ್ಚಾಗುವ ಸಮಯ. ಹೀಗಾಗಿ ಈ ಸಮಯದಲ್ಲಿ ಬಹಳ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳಿ. ವಿದೇಶ ಪ್ರವಾಸ ಹಾಗೂ ಹೂಡಿಕೆ ಮಾಡುವವರು ಸ್ವಲ್ಪ ಸಮಯ ಕಾಯುವುದು ಉತ್ತಮ. ಕನ್ಯಾರಾಶಿಯವರಿಗೆ ನಿಮ್ಮ ಖರ್ಚು ವೆಚ್ಚಗಳ ಮೇಲೆ ಹಿಡಿತವರಲಿ.
ಇನ್ನು ಈ ಸಮಯದಲ್ಲಿ ಆರೋಗ್ಯ ಸಮಸ್ಯೆ ಕೂಡ ನಿಮ್ಮನ್ನು ಕಾಡಬಹುದು. ಹೀಗಾಗಿ ಯಾವುದೇ ಕಾರಣಕ್ಕೂ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ಆಹಾರ ಹಾಗೂ ಇತರ ವಿಚಾರಗಳ ಬಗ್ಗೆ ವಿಶೇಷ ಗಮನ ಇರಲಿ. ಇನ್ನು ಯಾವುದೋ ವಿಚಾರದಿಂದ ನಿಮ್ಮ ಮನಃಶಾಂತಿ ಕೆಡಬಹುದು. ಆದರೆ ನೆನಪಿರಲಿ ಒತ್ತಡವು ನಿಮ್ಮನ್ನು ಗಟ್ಟಿ ಮಾಡುತ್ತದೆ.

ಮಕರ ರಾಶಿ
ಮಂಗಳ ಮತ್ತು ಶನಿಯ ಪ್ರಭಾವದಿಂದಾಗಿ ಮಕರ ರಾಶಿಯವರ ಖರ್ಚು ಹೆಚ್ಚಾಗುತ್ತದೆ. ಐಷಾರಾಮಿ ಜೀವನಕ್ಕಾಹಿ ಹೆಚ್ಚು ಹಣ ವ್ಯವಹಿಸುತ್ತೀರಿ. ಹಣದ ಹರಿವಿನ ಬಗ್ಗೆ ಗಮನ ಇರಲಿ. ಈ ಸಮಯದಲ್ಲಿ ವಾಹನ ಸಂಚಾರದ ಬಗ್ಗೆ ಹೆಚ್ಚಿನ ಗಮನ ಇರಲಿ. ಎಚ್ಚರ ತಪ್ಪಿದ್ದಲ್ಲಿ ಅಪಾಯವಿದ್ದು, ದೈಹಿಕವಾಗಿ ನೋವಾಗುವ ಸಾಧ್ಯತೆ ಇದೆ. ಹೀಗಾಗಿ ವಾಹನ ಚಾಲನೆಯನ್ನು ತಡೆಯಿರಿ.
ಇನ್ನು ಮಕರ ರಾಶಿಯವರ ಕುಟುಂಬದಲ್ಲೂ ಅಶಾಂತಿ ಹೆಚ್ಚಾಗಲಿದ್ದು, ಕುಟುಂಬ ಸದಸ್ಯರಲ್ಲಿ ಪರಸ್ಪರ ಪ್ರೀತಿ ಕಡಿಮೆಯಾಗುತ್ತದೆ. ನಿಮ್ಮ ಮನೆಯ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಹೊರಗಿನವರು ಹಸ್ತಕ್ಷೇಪ ಮಾಡಲು ಬಿಡಬೇಡಿ. ಮನೆಯ ವಿಚಾರಗಳನ್ನು ನೀವೇ ವಿಚಾರ ಮಾಡಿ ಬಗೆಹರಿಸಿ. ನಿಮ್ಮ ಅತೀವ ಖರ್ಚಿನಿಂದ ನಿಮ್ಮ ಸಮಸ್ಯೆಗಳು ಹೆಚ್ಚುತ್ತದೆ.

ಮೀನ ರಾಶಿ
ಮಂಗಳ ಮತ್ತು ಶನಿಯ ಸಂಚಾರವು ಮೀನ ರಾಶಿಯವರಿಗೆ ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ. ಈ ಸಮಯದಲ್ಲಿ ನಿಮ್ಮ ಕೆಲಸವನ್ನು ಪೂರ್ಣಗೊಳಿಸಲು ಹೆಚ್ಚಿನ ಶ್ರಮವಹಿಸಬೇಕಾಗುತ್ತದೆ. ಕೆಲಸದ ಸ್ಥಳದಲ್ಲಿ ಎಲ್ಲರೊಂದಿದೆ ಎಚ್ಚರಿಕೆಯಿಂದ ವ್ಯವಹರಿಸಿ. ಆಗ ಮಾತ್ರ ನಿಮಗೆ ಸಹೋದ್ಯೋಗಿಗಳ ಸಹಕಾರ ದೊರೆಯುತ್ತದೆ. ಮಂಗಳ ಗ್ರಹದ ಪ್ರಭಾವದಿಂದ ನಿಮ್ಮಲ್ಲಿ ದುರಹಂಕಾರ ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ ನಿಮ್ಮ ಜೀವನದಲ್ಲಿ ಬಹಳಷ್ಟು ಋಣಾತ್ಮಕ ಪರಿಣಾಮಗಳು ಎದುರಾಗಬಹುದು ಹೀಗಾಗಿ ನಿಮ್ಮ ವರ್ತನೆಯ ಬಗ್ಗೆ ನಿಮಗೆ ಹಿಡಿತವಿರಲಿ.
(ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)
English summary
Mars Transit in Leo July 2023 Causes Shani Mangala Dosha to These 5 Zodiac Signs, Know more.
Story first published: Thursday, June 22, 2023, 9:37 [IST]