ಭಾರತದ ಷೇರು ಮಾರುಕಟ್ಟೆ ಈಗ ರೇಸ್ ಕುದುರೆ: ಹೂಡಿಕೆ ಮಾಡಿದವರಿಗೆ ಕೈತುಂಬಾ ಕಾಸು! | Indian Stock Market crosses another all time high

India

oi-Malathesha M

|

Google Oneindia Kannada News

ಮುಂಬೈ: ಕಳೆದ 1 ವಾರದಿಂದ ಷೇರು ಮಾರುಕಟ್ಟೆಯಲ್ಲಿ ಭರ್ಜರಿ ಲಾಭ ಮಾಡುತ್ತಿದ್ದಾರೆ ಹೂಡಿಕೆದಾರರು. ಅದರಲ್ಲೂ ಎಚ್‌ಡಿಎಫ್‌ಸಿ & ಎಚ್‌ಡಿಎಫ್‌ಸಿ ಬ್ಯಾಂಕ್ ವಿಲೀನ ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾದ ಹೊತ್ತಲ್ಲೆ, ಭಾರತದ ಷೇರು ಮಾರುಕಟ್ಟೆ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಇಂದು ಒಂದೇ ದಿನ ಸೆನ್ಸೆಕ್ಸ್ ಏರಿಕೆಯಾಗಿದ್ದು ಎಷ್ಟು ಅಂಕ ಗೊತ್ತಾ? ಅದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಭಾರತದ ಬಂಡವಾಳ ಮಾರುಕಟ್ಟೆಯಲ್ಲಿ ಪ್ರಮುಖ ಸೂಚ್ಯಂಕಗಳಾದ ಬಿಎಸ್​ಇ ಸೆನ್ಸೆಕ್ಸ್ (BSE Sensex) ಹಾಗೂ ಎನ್​ಎಸ್​ಇ ನಿಫ್ಟಿ (ನಿಫ್ಟಿ 50 ಎಂದು ಕೂಡ ಕರೆಯಲಾಗುತ್ತದೆ) ದಾಖಲೆ ಬರೆದಿವೆ. ಬಿಎಸ್​ಇ ಸೆನ್ಸೆಕ್ಸ್ 803 ಅಂಕ ಏರಿಕೆ ಕಂಡು 64,718 ತಲುಪಿದರೆ, ಎನ್​ಎಸ್​ಇ ನಿಫ್ಟಿ ಅಥವಾ ನಿಫ್ಟಿ-50 216 ಅಂಕ ಗಳಿಸಿ 19,189 ಅಂಕದಲ್ಲಿ ವಹಿವಾಟು ಮುಗಿಸಿದೆ. ಅಲ್ಲದೆ ಬ್ಯಾಂಕ್ ನಿಫ್ಟಿ ಸುಮಾರು 419 ಅಂಕಗಳ ಏರಿಕೆಯೊಂದಿಗೆ 44,747ರ ಗಡಿಯನ್ನ ದಾಟಿದೆ. ಎಚ್‌ಡಿಎಫ್‌ಸಿ & ಎಚ್‌ಡಿಎಫ್‌ಸಿ ಬ್ಯಾಂಕ್ ವಿಲೀನ ಪ್ರಕ್ರಿಯೆ ಕೂಡ ಸಕಾರಾತ್ಮಕ ಪರಿಣಾಮ ಬೀರಿದೆ ಎಂದು ತಜ್ಞರು ಹೇಳುತ್ತಿದ್ದಾರೆ.

Indian Stock Market

19,000ದ ಗಡಿ ದಾಟಿತು ನಿಫ್ಟಿ!

ಭಾರತದ ಷೇರು ಮಾರುಕಟ್ಟೆಯಲ್ಲಿ ನಿಫ್ಟಿ 50 ಗ್ರೇಟ್ ವಾಲ್ ಇದ್ದಂತೆ. ಏಕೆಂದರೆ ಷೇರು ಪೇಟೆಯಲ್ಲಿ ಏನೇ ಹೆಚ್ಚು ಅಥವಾ ಕಮ್ಮಿ ಆದರೂ ನಿಫ್ಟಿ 50ಯ ಪರಿಣಾಮವೇ ಹೆಚ್ಚು. ನಿಫ್ಟಿ 50ಯಲ್ಲಿ ಬಲಿಷ್ಠವಾದ ಷೇರು ಸಂಸ್ಥೆಗಳು ನೊಂದಾಯಿಸಿಕೊಂಡಿವೆ. ಈ ಕಾರಣಕ್ಕೆ ಇಂದು ನಿಫ್ಟಿ 50 ಭರ್ತಿ 200ಕ್ಕೂ ಹೆಚ್ಚು ಅಂಕ ಪಡೆಯುವ ಮೂಲಕ ಕೊನೆಗೂ 19,000 ಗಡಿ ದಾಟಿ ಮುನ್ನುಗ್ಗಿದೆ. ಇದುವರೆಗೂ ನಿಫ್ಟಿ-50 19,000ದ ಗಡಿ ದಾಟಿರಲಿಲ್ಲ. ಇಂದು ನಿಫ್ಟಿ 50ಯ ಬಹುತೇಕ ಷೇರುಗಳು ಭರ್ಜರಿ ಲಾಭ ಗಳಿಸಿವೆ. ಹಾಗೇ ಸೋಮವಾರ ಕೂಡ ಇದೇ ರೀತಿಯ ಬಹುದೊಡ್ಡ ಬದಲಾವಣೆ ನಿರೀಕ್ಷೆ ಮಾಡಲಾಗುತ್ತಿದೆ.

ಎಚ್‌ಡಿಎಫ್‌ಸಿ ಷೇರುಗಳ ವಿಲೀನ ಪ್ರಕ್ರಿಯೆ

ಇನ್ನು ವಿಲೀನಕ್ಕೆ ಸಿದ್ಧವಾಗಿರುವ ಎಚ್‌ಡಿಎಫ್‌ಸಿ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್ ಕಂಪನಿಗಳ ಷೇರುಗಳಿಗೆ ಭರ್ಜರಿ ಡಿಮ್ಯಾಂಡ್ ಸೃಷ್ಟಿಯಾಗಿದೆ. ಈ ಪರಿಣಾಮ ಕೂಡ ಇಂದು ಷೇರುಪೇಟೆ ಮೇಲೆ ಆಗಿದ್ದು, ಭಾರತದ ಬಂಡವಾಳ ಮಾರುಕಟ್ಟೆ ಇಂದು ಹೊಸ ಇತಿಹಾಸವನ್ನೇ ಬರೆದಿದೆ. ಕಳೆದ ಜನವರಿ ಅಂತ್ಯದಲ್ಲಿ ಕೆಲವೊಂದು ಆಘಾತ ಎದುರಾಗಿ ಷೇರು ಮಾರುಕಟ್ಟೆಯಲ್ಲಿ ತಲ್ಲಣ ಉಂಟಾಗಿತ್ತು. ಆ ಘಟನೆಯ ಬಳಿಕ ನಿಧಾನವಾಗಿ ಸುಧಾರಿಸುತ್ತಾ ಬಂದಿದೆ ಷೇರು ಪೇಟೆಯ ಪರಿಸ್ಥಿತಿ. ಕಳೆದ 1 ವಾರದಲ್ಲಿ ಸ್ಥಿತಿಗತಿ ಸಂಪೂರ್ಣವಾಗಿ ಬದಲಾಗಿದ್ದು, ಭಾರಿ ಲಾಭ ಗಳಿಸುತ್ತಿದೆ ಭಾರತದ ಬಂಡವಾಳ ಮಾರುಕಟ್ಟೆ.

ಅಬ್ಬಬ್ಬಾ ಲಾಟರಿ.. ಸಾರ್ವಕಾಲಿಕ ದಾಖಲೆ ಬರೆದ ಷೇರು ಮಾರುಕಟ್ಟೆ: ಹೂಡಿಕೆದಾರರಿಗೆ ಭರ್ಜರಿ ಲಾಭ!ಅಬ್ಬಬ್ಬಾ ಲಾಟರಿ.. ಸಾರ್ವಕಾಲಿಕ ದಾಖಲೆ ಬರೆದ ಷೇರು ಮಾರುಕಟ್ಟೆ: ಹೂಡಿಕೆದಾರರಿಗೆ ಭರ್ಜರಿ ಲಾಭ!

ಎಚ್‌ಡಿಎಫ್‌ಸಿ & ಎಚ್‌ಡಿಎಫ್‌ಸಿ ಬ್ಯಾಂಕ್ ವಿಲೀನ

1) ಎಚ್‌ಡಿಎಫ್‌ಸಿ & ಎಚ್‌ಡಿಎಫ್‌ಸಿ ಬ್ಯಾಂಕ್ ವಿಲೀನದ ಬಗ್ಗೆ 2022ರ ಏಪ್ರಿಲ್ 4ರಂದು ಘೋಷಣೆ.

2) ವಿಲೀನ ಪ್ರಕ್ರಿಯೆ ಮೂಲಕ ಶೇಕಡಾ 41ರಷ್ಟು ಪಾಲು ಪಡೆಯಲಿದೆ ಎಚ್‌ಡಿಎಫ್‌ಸಿ.

3) ವಿಲೀನದ ನಂತರ ಸಂಯೋಜಿತ ಕಂಪನಿ ಷೇರುಗಳು ಜುಲೈ 17ರಿಂದ ವಹಿವಾಟು ಆರಂಭ ಮಾಡಲಿವೆ.

4) ವಿಲೀನದ ನಂತರ ಎಚ್‌ಡಿಎಫ್‌ಸಿ ಬ್ಯಾಂಕ್‌ನ 42 ಷೇರುಗಳಿಗೆ ಸಿಗಲಿದೆ ಎಚ್‌ಡಿಎಫ್‌ಸಿಯ 25 ಷೇರುಗಳು.

5) ಜುಲೈ 1ರಿಂದ ಎಚ್‌ಡಿಎಫ್‌ಸಿ ವಿಲೀನ ಜಾರಿಗೆ ಬರುವ ಕುರಿತು ಸಮೂಹದ ಅಧ್ಯಕ್ಷರಿಂದ ಮಾಹಿತಿ.

ಎಚ್‌ಡಿಎಫ್‌ಸಿ & ಎಚ್‌ಡಿಎಫ್‌ಸಿ ಬ್ಯಾಂಕ್ ವಿಲೀನ ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲಿ ಭಾರತದ ಷೇರು ಮಾರುಕಟ್ಟೆ ಕೂಡ ಹೊಸ ಇತಿಹಾಸ ಸೃಷ್ಟಿ ಮಾಡಿದೆ. ಹಾಗೇ ಎಚ್‌ಡಿಎಫ್‌ಸಿ ವಿಲೀನ ಜುಲೈ 1ರಿಂದ ಜಾರಿಗೆ ಬರುವ ನಿರೀಕ್ಷೆಯಿದೆ. ಈ ಮೂಲಕ ಎಚ್‌ಡಿಎಫ್‌ಸಿ ಬ್ಯಾಂಕ್‌ ಘಟಕ 12 ಕೋಟಿ ಗ್ರಾಹಕರನ್ನು ಹೊಂದಿರಲಿದೆ. ಇದರಿಂದ ಬ್ಯಾಂಕ್‌ನ ಶಾಖೆಯ ನೆಟ್‌ವರ್ಕ್‌ 8,300ಕ್ಕಿಂತ ಹೆಚ್ಚಿರಲಿದೆ. ಒಟ್ಟು 1,77,000ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರಲಿದೆ. ಈ ಮೂಲಕ ಜಗತ್ತಿನ ಅತಿಮೌಲ್ಯಯುತ ಬ್ಯಾಂಕ್‌ಗಳ ಸಾಲಿಗೆ ಎಚ್‌ಡಿಎಫ್‌ಸಿ ಸೇರ್ಪಡೆಯೂ ಆಗಲಿದೆ. ಒಟ್ನಲ್ಲಿ ಭಾರತದ ಷೇರು ಪೇಟೆ ಇದೀಗ ಹೂಡಿಕೆದಾರರಿಗೆ ಭರ್ಜರಿ ಲಾಭ ತಂದುಕೊಡುತ್ತಿದೆ.

 • ಒಂದು ವಾರದಲ್ಲಿ ಅದಾನಿ ಕಳೆದುಕೊಂಡಿದ್ದು ಎಷ್ಟು ಲಕ್ಷ ಕೋಟಿ? ಬಾಂಡ್‌ ಪಡೆಯದ ಬ್ಯಾಂಕರ್‌ಗಳು, ಕುಸಿದ ಷೇರುಗಳು-ಮಂದೇನು ಕಾದಿದೆ?
 • ಅದಾನಿ ಗ್ರೂಪ್ ಸಂಸ್ಥೆಗಳಿಗೆ SBI ನೀಡಿರುವ ಸಾಲ ಎಷ್ಟು ಗೊತ್ತೇ? ಅಂಕಿಅಂಶ, ಮಾಹಿತಿ ಹೊಂದಿರುವ ಈ ವರದಿ ನೋಡಿ
 • ವಿಶ್ವದ ಟಾಪ್ 10 ಶ್ರೀಮಂತರ ಪಟ್ಟಿಯಿಂದ ಗೌತಮ್ ಅದಾನಿ ಔಟ್‌: ಮುಂದುವರಿದ ಷೇರು ಕುಸಿತ- ಇಲ್ಲಿದೆ ಮಾಹಿತಿ
 • ಹಿಂಡೆನ್‌ಬರ್ಗ್ ವರದಿಯನ್ನು ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಹೋಲಿಸಿದ ಅದಾನಿ ಗ್ರೂಪ್ ಸಿಎಫ್‌ಒ- ಕಾರಣ ಇಲ್ಲಿದೆ
 • ರಾಷ್ಟ್ರವಾದದ ಮೂಲಕ ವಂಚನೆಯನ್ನು ಮುಚ್ಚಿಹಾಕಲು ಸಾಧ್ಯವಿಲ್ಲ: ಅದಾನಿಗೆ ಹಿಂಡೆನ್‌ಬರ್ಗ್‌ ತಿರುಗೇಟು- ಷೇರುಗಳಲ್ಲಿ ಮತ್ತೆ ಕುಸಿತ
 • ನಾವು ಜಾಗರೂಕರಾಗಿದ್ದೇವೆ: ಅದಾನಿ ಗ್ರೂಪ್‌ ವಿರುದ್ಧದ ಆರೋಪಗಳ ಕುರಿತು ಉನ್ನತ ಬ್ಯಾಂಕ್‌ಗಳು ಹೇಳಿದ್ದೇನು?
 • ಮುಳುಗುತ್ತಿದೆ ಅದಾನಿ ಹಡಗು: 2 ದಿನಗಳಲ್ಲಿ ₹18,000 ಕೋಟಿ ಕಳೆದುಕೊಂಡ LIC- ಗ್ರಾಹಕರೇ, ಎಚ್ಚರಿಕೆಯಿಂದ ಈ ವರದಿ ನೋಡಿ
 • ಹಿಂಡೆನ್‌ಬರ್ಗ್ ವರದಿ: ಅದಾನಿ ಮೇಲೆ ತೂಗುಕತ್ತಿ, ಅವ್ಯವಹಾರಗಳ ತನಿಖೆಗೆ ಹೆಚ್ಚಿದ ಒತ್ತಡ, SEBI ಪರಿಶೀಲನೆ- ಮಾಹಿತಿ, ವಿವರ
 • ದುರ್ಬಲಗೊಳ್ಳಲಿವೆ ಅದಾನಿ ಪೋರ್ಟ್ಸ್, ಅಂಬುಜಾ ಸಿಮೆಂಟ್‌: ಇಲ್ಲಿದೆ ಕಾರಣ
 • ಅದಾನಿ ಗ್ರೂಪ್‌ ವಿರುದ್ಧ ಭಾರೀ ವಂಚನೆ ಆರೋಪ: ₹ 46,000 ಕೋಟಿ ಷೇರು ನಷ್ಟ- ಮಾಹಿತಿ, ವರದಿ, ವಿವರ ಇಲ್ಲಿದೆ
 • ಐನಾಕ್ಸ್ ಗ್ರೀನ್ ಎನರ್ಜಿ ಷೇರು ಬೆಲೆಯಲ್ಲಿ ಶೇ.8ರಷ್ಟು ರಿಯಾಯಿತಿ
 • ಎಲೋನ್ ಮಸ್ಕ್ V/s ಟ್ವಿಟ್ಟರ್: ಟೆಸ್ಲಾ ಸಿಇಒ ವಿರುದ್ಧ ಫೆಡರಲ್ ತನಿಖೆ

English summary

Indian Stock Market crosses another all time high.

Story first published: Friday, June 30, 2023, 16:31 [IST]

Source link