ಭಾರತಕ್ಕೆ ಬರುತ್ತಾ ಟೆಸ್ಲಾ? ಪ್ರಧಾನಿ ಮೋದಿ ಭೇಟಿ ಬಳಿಕ ಎಲಾನ್ ಮಸ್ಕ್ ಏನಂದ್ರು ಗೊತ್ತಾ? | PM Modi Meets Elon Musk on US Visit, Tesla India Entry Confidently Expected

International

oi-Naveen Kumar N

|

Google Oneindia Kannada News

ವಿಶ್ವದ ಅತ್ಯಂತ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಕಾರುಗಳಾದ ಟೆಸ್ಲಾ ಅತಿ ಶೀಘ್ರದಲ್ಲೇ ಭಾರತಕ್ಕೆ ಬರಲಿವೆ ಎಂದು ಟೆಸ್ಲಾ ಸಿಇಒ ಎಲಾನ್ ಮಸ್ಕ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಭೇಟಿ, ಮಾರುಕತೆ ಬಳಿಕ ಮಾತನಾಡಿದ ಮಸ್ಕ್ ಭಾರತಕ್ಕೆ ಟೆಸ್ಲಾ ಕಾರುಗಳನ್ನು ಪರಿಚಯಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮೂರು ದಿನಗಳ ಅಮೆರಿಕ ಪ್ರವಾಸದಲ್ಲಿದ್ದು, ಇದು ಐತಿಹಾಸಿಕ ಭೇಟಿ ಎಂದು ಪರಿಗಣಿಸಲಾಗಿದೆ. ಭಾರತದಲ್ಲಿ ಹೂಡಿಕೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಎಲಾನ್ ಮಸ್ಕ್ ಅವರಿಗೆ ಆಹ್ವಾನ ನೀಡಿದ್ದಾರೆ, ಇದಕ್ಕೆ ಎಲಾನ್ ಮಸ್ಕ್ ಕೂಡ ಸಕಾರತ್ಮಕವಾಗಿ ಸ್ಪಂದಿಸಿರುವುದಾಗಿ ವರದಿಯಾಗಿದೆ.

PM Modi Meets Elon Musk

ಮೋದಿ ಜೊತೆ ಭೇಟಿ ಮಾಡಿದ ಬಳಿಕ ಮಾತನಾಡಿದ ಎಲಾನ್ ಮಸ್ಕ್, “ನಾನು ನರೇಂದ್ರ ಮೋದಿಯವರ ಅಭಿಮಾನಿ, ಇದು ಅವರ ಜೊತೆ ಅದ್ಭುತ ಸಭೆ ನಡೆಯಿತು, ನಾನು ಅವರನ್ನು ತುಂಬಾ ಇಷ್ಟಪಡುತ್ತೇನೆ. ಮೋದಿಯವರು ಕೆಲವು ವರ್ಷಗಳ ಹಿಂದೆ ನಮ್ಮ ಕಾರ್ಖಾನೆಗೆ ಭೇಟಿ ನೀಡಿದ್ದರು, ನಮ್ಮಿಬ್ಬರಿಗೂ ಪರಿಚಯ ಇದೆ.” ಎಂದು ಹೇಳಿದರು. ಈ ಹಿಂದೆ 2015 ರಲ್ಲಿ ಕ್ಯಾಲಿಫೋರ್ನಿಯಾದ ಟೆಸ್ಲಾ ಮೋಟಾರ್ಸ್ ಕಾರ್ಖಾನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ಮೋದಿ ಎಲಾನ್ ಮಸ್ಕ್ ಅವರನ್ನು ಭೇಟಿಯಾಗಿದ್ದರು.

ಶೀಘ್ರದಲ್ಲೇ ಭಾರತಕ್ಕೆ ಟೆಸ್ಲಾ!

“ಭಾರತದ ಭವಿಷ್ಯದ ಬಗ್ಗೆ ನಾನು ಸಾಕಷ್ಟು ಉತ್ಸುಕನಾಗಿದ್ದೇನೆ. ಪ್ರಪಂಚದ ಯಾವುದೇ ದೊಡ್ಡ ದೇಶಕ್ಕಿಂತ ಭಾರತವು ಹೆಚ್ಚಿನ ಭರವಸೆಯನ್ನು ಹೊಂದಿದೆ ಎಂದು ನಾನು ಭಾವಿಸುತ್ತೇನೆ.” ಎಂದು ಮಸ್ಕ್ ಹೇಳಿದರು. ಭಾರತಕ್ಕೆ ಬರುವ ಟೆಸ್ಲಾ ಕುರಿತು ಟೈಮ್‌ಲೈನ್‌ನ ಕುರಿತು ಕೇಳಿದಾಗ, “ಸಾಧ್ಯವಾದಷ್ಟು ಬೇಗ ಟೆಸ್ಲಾ ಭಾರತದಲ್ಲಿರಲಿದೆ, ಮಾನವ ಚಾಲಿತ ಕಾರುಗಳನ್ನು ಆದಷ್ಟು ಬೇಗ ಬಿಡುಗಡೆ ಮಾಡುವುದಾಗಿ ವಿಶ್ವಾಸವಿದೆ” ಎಂದು ಮಸ್ಕ್ ಹೇಳಿದರು.

 ನಾನು ನರೇಂದ್ರ ಮೋದಿಯವರ ದೊಡ್ಡ ಅಭಿಮಾನಿ ಎಂದ ಎಲಾನ್ ಮಸ್ಕ್: ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡುವ ಭರವಸೆ ನಾನು ನರೇಂದ್ರ ಮೋದಿಯವರ ದೊಡ್ಡ ಅಭಿಮಾನಿ ಎಂದ ಎಲಾನ್ ಮಸ್ಕ್: ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡುವ ಭರವಸೆ

ಹೂಡಿಕೆ ಮಾಡುವಂತೆ ಮೋದಿ ಆಹ್ವಾನ

“ಪ್ರಧಾನಿ ನರೇಂದ್ರ ಮೋದಿ ಭಾರತದ ಬಗ್ಗೆ ಕಾಳಜಿ ಹೊಂದಿದ್ದಾರೆ, ಭಾರತದಲ್ಲಿ ಹೂಡಿಕೆ ಮಾಡುವಂತೆ ನಮ್ಮನ್ನು ಒತ್ತಾಯಿಸುತ್ತಿದ್ದಾರೆ, ನಾವು ಕೂಡ ಅದರ ಬಗ್ಗೆ ಆಸಕ್ತಿ ಹೊಂದಿದ್ದೇವೆ. ಆದರೆ ಸರಿಯಾದ ಸಮಯ ನೋಡಿಕೊಂಡು ಹೂಡಿಕೆ ಮಾಡಬೇಕಾಗುತ್ತದೆ” ಎಂದು ಮಸ್ಕ್ ಹೇಳಿದರು.

“ಮೋದಿ ನಿಜವಾಗಿಯೂ ಭಾರತಕ್ಕಾಗಿ ಉತ್ತಮ ಕೆಲಸವನ್ನು ಮಾಡಲು ಬಯಸುತ್ತಾರೆ. ಮುಕ್ತವಾಗಿರಲು ಬಯಸುತ್ತಾರೆ, ಹೊಸ ಕಂಪನಿಗಳಿಗೆ ಬೆಂಬಲ ನೀಡುತ್ತಾರೆ ಮತ್ತು ಅದರಿಂದಾಗಿ ಭಾರತಕ್ಕೆ ಪ್ರಯೋಜನವಾಗುತ್ತದೆ ಎಂದು ಖಚಿತಪಡಿಸಿಕೊಳ್ಳುತ್ತಾರೆ” ಎಂದು ಹೇಳಿದರು.

ವರ್ಷಾಂತ್ಯಕ್ಕೆ ಸ್ಥಳ ಅಂತಿಮಗೊಳಿಸುವ ಸಾಧ್ಯತೆ

ದಿ ವಾಲ್ ಸ್ಟ್ರೀಟ್ ಜರ್ನಲ್‌ನ ಸಂದರ್ಶನದಲ್ಲಿ, ಎಲಾನ್‌ ಮಸ್ಕ್ ಅವರಿಗೆ ಭಾರತೀಯ ಮಾರುಕಟ್ಟೆಯಲ್ಲಿ ಆಸಕ್ತಿ ಹೊಂದಿದ್ದಾರೆಯೇ ಎಂದು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅವರು, ಖಂಡಿತವಾಗಿ ಆಸಕ್ತಿ ಹೊಂದಿದ್ದೇವೆ, ಈ ವರ್ಷದ ಅಂತ್ಯದ ವೇಳೆಗೆ ಟೆಸ್ಲಾ ತನ್ನ ಇಂಡಿಯಾ ಕಾರ್ಖಾನೆಯನ್ನು ಸ್ಥಾಪಿಸಲು ಸ್ಥಳವನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.

ಮಂಗಳವಾರ ರಾತ್ರಿ ನ್ಯೂಯಾರ್ಕ್‌ಗೆ ಬಂದಿಳಿದ ನಂತರ ಪ್ರಧಾನಿ ಅವರು ವಿವಿಧ ಕ್ಷೇತ್ರಗಳ ಸುಮಾರು 12 ಚಿಂತಕ-ನಾಯಕರನ್ನು ಭೇಟಿಯಾಗಿದ್ದಾರೆ. ಈ ನಾಯಕರು ನೊಬೆಲ್ ಪ್ರಶಸ್ತಿ ವಿಜೇತರು, ಅರ್ಥಶಾಸ್ತ್ರಜ್ಞರು, ಕಲಾವಿದರು, ವಿಜ್ಞಾನಿಗಳು, ವಿದ್ವಾಂಸರು, ವಾಣಿಜ್ಯೋದ್ಯಮಿಗಳು, ಶಿಕ್ಷಣ ತಜ್ಞರು ಮತ್ತು ಆರೋಗ್ಯ ಕ್ಷೇತ್ರದ ತಜ್ಞರಾಗಿದ್ದಾರೆ. ಎಲಾನ್ ಮಸ್ಕ್ ಭೇಟಿಯ ಬಳಿಕ ಪ್ರಧಾನಮಂತ್ರಿ ಅವರು ಲೇಖಕ ರಾಬರ್ಟ್ ಥರ್ಮನ್ ಮತ್ತು ಸಂಖ್ಯಾಶಾಸ್ತ್ರಜ್ಞ ನಿಕೋಲಸ್ ನಾಸಿಮ್ ತಾಲೆಬ್ ಅವರನ್ನು ಭೇಟಿಯಾದರು.

ಭಾರತೀಯ-ಅಮೆರಿಕನ್ ಗಾಯಕ ಫಾಲು ಶಾ, ಲೇಖಕ ಮತ್ತು ಸಂಶೋಧಕ ಜೆಫ್ ಸ್ಮಿತ್, ಮಾಜಿ ಯುಎಸ್ ವ್ಯಾಪಾರ ಪ್ರತಿನಿಧಿ ಮೈಕೆಲ್ ಫ್ರೊಮನ್, ರಾಜತಾಂತ್ರಿಕ ಡೇನಿಯಲ್ ರಸೆಲ್ ಮತ್ತು ರಕ್ಷಣಾ ತಜ್ಞ ಎಲ್ಬ್ರಿಡ್ಜ್ ಕಾಲ್ಬಿ ಕೂಡ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಲಿರುವ ಗಣ್ಯರ ಪಟ್ಟಿಯಲ್ಲಿದ್ದಾರೆ.

English summary

Prime Minister Narendra Modi met Tesla CEO Elon Musk during his significant US state visit, where Musk expressed his admiration for Modi. When asked about Tesla’s timeline for entering India, Musk expressed confidence that it would happen as soon as possible.

Source link