ಬೆಂಗಳೂರಿನ CTR ಹೊಟೇಲ್‌ನಲ್ಲಿ ದೋಸೆ ಸವಿದ ತೆಲುಗು ನಟ:’ಸ್ಪೈ’ ಭರ್ಜರಿ ಪ್ರಚಾರ | Nikhil Siddharth tastedCTR Dosa in Bengaluru while doing Spy Movie promotion

bredcrumb

Telugu

oi-Muralidhar S

|

ಟಾಲಿವುಡ್‌ನ
ಮತ್ತೊಬ್ಬ
ಪ್ಯಾನ್
ಇಂಡಿಯಾ
ಸ್ಟಾರ್
ನಿಖಿಲ್
ಸಿದ್ಧಾರ್ಥ್.
ಇವರೇ
ನಟಿಸಿದ
‘ಕಾರ್ತಿಕೇಯ
2’
ಭಾರತದಾದ್ಯಂತ
ಸದ್ದು
ಮಾಡುತ್ತಿದ್ದಂತೆ
ನಿಖಿಲ್
ವೃತ್ತಿ
ಬದುಕೇ
ಬದಲಾಗಿದೆ.

‘ಕಾರ್ತಿಕೇಯ
2’
ಸಿನಿಮಾಗೂ
ಮುನ್ನ
ನಿಖಿಲ್
ಸಿದ್ಧಾರ್ಥ್
ಆಯ್ಕೆ
ಮಾಡಿಕೊಂಡ
ಸಿನಿಮಾಗಳು
ಬಾಕ್ಸಾಫೀಸ್‌ನಲ್ಲಿ
ಸೋತಿದ್ದವು.
ಇನ್ನೇ
ತೆಲುಗು
ಚಿತ್ರರಂಗದಲ್ಲಿ
ಇವರ
ಕಥೆ
ಮುಗೀತು
ಅನ್ನುವಾಗಲೇ
‘ಕಾರ್ತಿಕೇಯ
2’
ಕೈ
ಹಿಡೀತು.
ಅದೇ
ಸಿನಿಮಾ
ಯಶಸ್ಸಿನ
ಹುಮ್ಮಸ್ಸಿನಲ್ಲೇ
ಮತ್ತೊಂದು
ಸಿನಿಮಾ
ಸೆಟ್ಟೇರಿದೆ.
ಅದುವೇ
‘ಸ್ಪೈ’.

Nikhil Siddharth tastedCTR Dosa in Bengaluru while doing Spy Movie promotion

‘ಸ್ಪೈ’
ಸಿನಿಮಾ
ಕೂಡ
ಪ್ಯಾನ್
ಇಂಡಿಯಾ
ಸಿನಿಮಾವೇ.
ಹೀಗಾಗಿ
ಭರ್ಜರಿಯಾಗಿ
ಪ್ರಚಾರ
ಶುರುವಾಗಿದೆ.

ಸಂಬಂಧ
ಸಿನಿಮಾದ
ನಾಯಕ
ನಟ
ನಿಖಿಲ್
ಸಿದ್ಧಾರ್ಥ್
ಹಾಗೂ
ನಟಿ
ಐಶ್ವರ್ಯಾ
ಮೆನನ್
ಬೆಂಗಳೂರಿಗೆ
ಬಂದಿದ್ದಾರೆ.
ಸಿನಿಮಾ
ಪ್ರಚಾರಕ್ಕೂ
ಮುನ್ನ
ಹೊಟೇಲ್‌ನಲ್ಲಿ
ದೋಸೆ
ಸವೆದಿದ್ದಾರೆ.

CTR
ಹೊಟೇಲ್‌ನಲ್ಲಿ
ದೋಸೆ

ಬೆಂಗಳೂರಿನ
CTR
ಹೊಟೇಲ್‌ನಲ್ಲಿ
ದೋಸೆ
ತುಂಬಾನೇ
ಫೇಮಸ್.
ಬೆಂಗಳೂರಿಗೆ
ಬರೋ
ಸೆಲೆಬ್ರೆಟಿಗಳು

ಹೊಟೇಲ್‌ನ
ದೋಸೆಯನ್ನು
ಸವಿಯದೆ
ಮುಂದೆ
ಸಾಗುವುದೇ
ಇಲ್ಲ.
ತೆಲುಗು
ನಟ
ನಿಖಿಲ್
ಸಿದ್ಧಾರ್ಥ್
ಕೂಡ

ಹೊಟೇಲ್‌
ದೋಸೆ
ಸವಿದು
ಎಂಜಾಯ್
ಮಾಡಿದ್ದಾರೆ.

CTR
ಹೊಟೇಲ್‌ನಲ್ಲಿ
ದೋಸೆ
ತಿಂದಿದ್ದಷ್ಟೇ
ಅಲ್ಲ,
ಇಲ್ಲಿಗೆ
ಬಂದಿದ್ದ
ಗ್ರಾಹಕರೊಂದಿಗೆ
ಕೆಲ
ಹೊತ್ತು
ಕಾಲ
ಕಳೆದಿದ್ದಾರೆ.
ಅವರಿಗೆ
ಸೆಲ್ಫಿ
ಕೊಟ್ಟಿದ್ದಾರೆ.
ಜನರು
ಕೂಡ
‘ಸ್ಪೈ’
ನಟನನ್ನು
ನೋಡಿ
ಖುಷಿ
ಪಟ್ಟು
ಫೋಟೊ
ತೆಗೆಸಿಕೊಂಡಿದ್ದಾರೆ.

Nikhil Siddharth tastedCTR Dosa in Bengaluru while doing Spy Movie promotion

‘ಸ್ಪೈ’
ಸಿನಿಮಾ
ಇದೇ
ವಾರ
ರಿಲೀಸ್

ಟಾಲಿವುಡ್‌ನ
ಪ್ರತಿಭಾವಂತ
ನಟ
ನಿಖಿಲ್
ಸಿದ್ಧಾರ್ಥ್
ಅಭಿನಯದ
ಬಹು
ನಿರೀಕ್ಷಿತ
ಸಿನಿಮಾ
‘ಸ್ಪೈ’.
ಈಗಾಗಲೇ
ಟೀಸರ್
ಹಾಗೂ
ಟ್ರೈಲರ್
ಮೂಲಕ
ಪ್ರೇಕ್ಷಕರ
ಗಮನ
ಸೆಳೆದಿದ್ದಾರೆ.
ಸಿನಿಮಾ
ಇದೇ
ಜೂನ್
29ರಂದು
ರಿಲೀಸ್
ಆಗುತ್ತಿರೋದ್ರಿಂದ
ಕೊನೆಯ
ಹಂತದ
ಪ್ರಚಾರದಲ್ಲಿ
ಭಾಗಿಯಾಗಿದ್ದಾರೆ.


ಸಂಬಂಧ
ಮುಂಬೈನಲ್ಲಿ
ಸಿನಿಮಾದ
ಪ್ರಮೋಷನ್
ಮುಗಿಸಿ
ಈಗ
ಬೆಂಗಳೂರಿಗೆ
ಬಂದಿಳಿದಿದೆ.
ನಾಯಕ
ನಿಖಿಲ್
ಸಿದ್ಧಾರ್ಥ್,
ನಾಯಕಿ
ಐಶ್ವರ್ಯ
ಮೆನನ್
ಬೆಂಗಳೂರಿನಲ್ಲಿ
ಪ್ರಚಾರ
ಮಾಡುತ್ತಿದ್ದಾರೆ.

ಸಿನಿಮಾದಲ್ಲಿ
ಸುಭಾಷ್
ಚಂದ್ರ
ಬೋಸ್
ಸಾವಿನ
ರಹಸ್ಯ

‘ಕಾರ್ತಿಕೇಯ
2’
ಸಿನಿಮಾ
ಕೂಡ
ಸಸ್ಪೆನ್ಸ್
ಥ್ರಿಲ್ಲರ್
ಶೈಲಿಯ
ಸಿನಿಮಾ
ಆಗಿತ್ತು.
‘ಸ್ಪೈ’
ಕೂಡ
ಇಂತಹದ್ದೇ
ಶೈಲಿಯ
ಸಿನಿಮಾ.
ನೇತಾಜಿ
ಸುಭಾಷ್
ಚಂದ್ರ
ಬೋಸ್
ಸಾವಿನ
ರಹಸ್ಯದ
ಹಿನ್ನೆಲೆಯುಳ್ಳ
ಸಿನಿಮಾ
ಇದಾಗಿದೆ.
‘ಸ್ಪೈ’ಸಿನಿಮಾಗೆ
ಗ್ಯಾರಿ
ಬಿ
ಹೆಚ್‌
ಆಕ್ಷನ್
ಕಟ್
ಹೇಳಿದ್ದಾರೆ.

‘ಎವರು’
ಮತ್ತು’ಹಿಟ್’
ಅಂತಹ
ಸಿನಿಮಾಗಳನ್ನು
ನಿರ್ಮಾಣ
ಮಾಡಿರುವ‌
ನಿರ್ಮಾಪಕ
ಕೆ.ರಾಜಶೇಖರ್‌
ರೆಡ್ಡಿ,
ಚರಣ್‌
ರಾಜ್‌
ಉಪ್ಪಲಪತಿ

ಸಿನಿಮಾವನ್ನು
ನಿರ್ಮಿಸಿದ್ದಾರೆ.
ಸನ್ಯಾ
ಠಾಕೂರ್‌
ಪ್ರಮುಖ
ಪಾತ್ರದಲ್ಲಿ
ನಟಿಸಿದ್ದು,
ಸ್ಪೆಷಲ್‌
ರೋಲ್‌
ನಲ್ಲಿ
ರಾಣಾ
ದಗ್ಗುಭಾಟಿ
ಕೂಡ
ಕಾಣಿಸಿಕೊಂಡಿದ್ದಾರೆ.
ಅಭಿನವ್‌
ಗೌತಮ್,
ಮಕರಂದ್‌
ದೇಶಪಾಂಡೆ,
ನಿತಿನ್‌
ಮೆಹ್ತಾ,
ರವಿವರ್ಮ,
ಕೃಷ್ಣ
ತೇಜ,
ಪ್ರಿಶಾ
ಸಿಂಗ್‌,
ಸೋನಿಯಾ
ನರೇಶ್‌
ಹಲವು
ಕಲಾವಿದರ
ನಟಿಸಿದ್ದಾರೆ.
ಈಗಾಗಲೇ
‘ಕಾರ್ತಿಕೇಯ’
ಹಾಗೂ
‘ಕಾರ್ತಿಕೇಯ-2’
ನಂತಹ
ಮೆಗಾ
ಬ್ಲಾಕ್
ಬಸ್ಟರ್
ಹಿಟ್
ಕೊಟ್ಟಿರುವ
ನಿಖಿಲ್
ಸಿದ್ಧಾರ್ಥ್
‘ಸ್ಪೈ’
ಮೇಲೆ
ಇಡೀ
ಭಾರತೀಯ
ಚಿತ್ರರಂಗ
ಕಣ್ಣಿಟ್ಟಿದೆ.

English summary

Nikhil Siddharth tasted CTR Dosa in Bengaluru while doing Spy Movie promotion, know more.

Monday, June 26, 2023, 23:35

Story first published: Monday, June 26, 2023, 23:35 [IST]

Source link