ಬಿಜೆಪಿಯಿಂದ ರಾಹುಲ್ ಗಾಂಧಿಯನ್ನು ತಪ್ಪಾಗಿ ಬಿಂಬಿಸುವ ವಿಡಿಯೋ: ಕಾಂಗ್ರೆಸ್‌ ದೂರು | Video of BJP misrepresenting Rahul Gandhi: Priyank Kharge complains

Karnataka

oi-Punith BU

|

Google Oneindia Kannada News

ಬೆಂಗಳೂರು, ಜೂನ್‌ 20: ಕರ್ನಾಟಕ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ಸೋಮವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಮತ್ತು ಬಿಜೆಪಿ ಚಂಡೀಗಢ ಅಧ್ಯಕ್ಷ ಅರುಣ್ ಸೂದ್ ವಿರುದ್ಧ ದೂರು ದಾಖಲಿಸಿದ್ದಾರೆ.

ರಾಹುಲ್ ಗಾಂಧಿ ವಿರುದ್ಧ ದುರುದ್ದೇಶಪೂರಿತ ವಿಶೇಷವಾಗಿ ಅನಿಮೇಟೆಡ್ ಮಾಡಿದ ವೀಡಿಯೊವನ್ನು ಹಾಗೂ ಕಾಂಗ್ರೆಸ್ ನಾಯಕರ ಭಾಷಣಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿದ್ದವು.

Video of BJP misrepresenting Rahul Gandhi: Priyank Kharge complains

ಅಮಿತ್ ಮಾಳವೀಯ ಅವರು ಹಂಚಿಕೊಂಡ ವೀಡಿಯೊದಲ್ಲಿ ರಾಹುಲ್ ಗಾಂಧಿಯನ್ನು ದುರುದ್ದೇಶಪೂರಿತ 3ಡಿ ಅನಿಮೇಟೆಡ್ ವೀಡಿಯೊ ಮೂಲಕ ಅವಮಾನಿಸಲಾಗಿದೆ. ಇದನ್ನು ಬಿಜೆಪಿಯ ಪ್ರಮುಖ ನಾಯಕರಾದ ಜೆಪಿ ನಡ್ಡಾ ಮತ್ತು ಅರುಣ್ ಸೂದ್ ಅನುಮೋದಿಸಿದ್ದಾರೆ ಎಂದು ಖರ್ಗೆ ಆರೋಪಿಸಿದ್ದಾರೆ.

ಈ ವಿಡಿಯೋವನ್ನು ಜೂನ್ 17, 2023 ರಂದು ಮಾಳವೀಯಾ ಅವರ ಟ್ವಿಟರ್‌ ಖಾತೆಯಲ್ಲಿ ರಾಹುಲ್ ಗಾಂಧಿ ಮತ್ತು INCಯ ಪ್ರತಿಷ್ಠೆಗೆ ಕಳಂಕ ತರುವ ಉದ್ದೇಶದಿಂದ ಅಪಲೋಡ್‌ ಮಾಡಲಾಗಿದೆ. ಕೋಮು ವೈಷಮ್ಯವನ್ನು ಪ್ರಚೋದಿಸಲು ಮತ್ತು ಪಕ್ಷ ಮತ್ತು ಅದರ ನಾಯಕರ ವ್ಯಕ್ತಿತ್ವವನ್ನು ತಪ್ಪಾಗಿ ನಿರೂಪಿಸಲು ಈ ವಿಡಿಯೋದಲ್ಲಿ ಕಾಂಗ್ರೆಸ್ ಮತ್ತು ಅದರ ನಾಯಕರನ್ನು ದೇಶವಿರೋಧಿ ಎಂದು ಬಿಂಬಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಈ ವಿಡಿಯೋದಲ್ಲಿ ರಾಹುಲ್ ಗಾಂಧಿ ಭಾಷಣದ ಬದಲಾದ ಆವೃತ್ತಿಗಳಿದ್ದು, ಸುಳ್ಳು ನಿರೂಪಣೆಗಳನ್ನು ಪ್ರಚಾರ ಮಾಡಲಾಗಿದೆ. ವೀಡಿಯೊದ ಆತಂಕಕಾರಿ ಅಂಶವೆಂದರೆ ಇಸ್ಲಾಮಿಕ್ ನಂಬಿಕೆಯುಳ್ಳ ಜನರೊಂದಿಗೆ ರಾಹುಲ್ ಗಾಂಧಿಯವರ ಸಂವಹನದ ಅನಿಮೇಟೆಡ್ ವಿಡಿಯೋವನ್ನು ತಪ್ಪಾಗಿ ನಿರೂಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ವಿಡಿಯೋದಿಂದ ವಿವಿಧ ಧರ್ಮಗಳ ಜನರ ನಡುವೆ ದ್ವೇಷವನ್ನು ಉಂಟುಮಾಡುತ್ತದೆ. ಅಲ್ಲದೆ ಕೋಮು ಸೌಹಾರ್ದತೆಯನ್ನು ಹಾಳು ಮಾಡುತ್ತದೆ. ಅಮಿತ್‌ ಮಾಳವೀಯ ರಾಹುಲ್ ಗಾಂಧಿ ಅವರನ್ನು ಕಪಟ ಆಟ ಆಡುತ್ತಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಮರುದಿನ ಅದೇ ವೀಡಿಯೊವನ್ನು ಹಿಂದಿ ಉಪಶೀರ್ಷಿಕೆಗಳೊಂದಿಗೆ ಮರು ಪೋಸ್ಟ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಸಂವಹನ ವಿಭಾಗದ ಕರ್ನಾಟಕ ಘಟಕದ ಮುಖ್ಯಸ್ಥರೂ ಆಗಿರುವ ಪ್ರಿಯಾಂಕ್‌ ಖರ್ಗೆ ಅವರು ಇಲ್ಲಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಮೂವರು ನಾಯಕರು ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುತ್ತಿದ್ದಾರೆ ಮತ್ತು ಸಮಾಜದಲ್ಲಿ ದ್ವೇಷವನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

English summary

Karnataka Information Technology and Biotechnology Minister Priyank Kharge on Monday filed a complaint against BJP national president JP Nadda, BJP IT cell chief Amit Malaviya and BJP Chandigarh president Arun Sood.

Story first published: Tuesday, June 20, 2023, 11:48 [IST]

Source link