India
oi-Sunitha B
ಮುಂಬೈ ಜುಲೈ 31: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ-ಬಾಂಬೆ (ಐಐಟಿ-ಬಿ) ನಲ್ಲಿ ಆಹಾರ ತಾರತಮ್ಯದ ವಿರುದ್ಧ ವಿದ್ಯಾರ್ಥಿಗಳು ಮತ್ತೆ ಧ್ವನಿ ಎತ್ತಿದ್ದಾರೆ. ಹಾಸ್ಟೆಲ್ ಒಂದರಲ್ಲಿನ ಕ್ಯಾಂಟೀನ್‌ನ ಗೋಡೆಗಳ ಮೇಲೆ ‘ಸಸ್ಯಾಹಾರಿಗಳಿಗೆ ಮಾತ್ರ’ ಎಂಬ ಪೋಸ್ಟರ್‌ಗಳನ್ನು ಹಾಕಲಾಗಿದೆ ಎಂದು ವಿದ್ಯಾರ್ಥಿ ಪ್ರತಿನಿಧಿಯೊಬ್ಬರು ಭಾನುವಾರ ಹೇಳಿದ್ದಾರೆ.
ಐಐಟಿ ಬಾಂಬೆ ಕಾಂಟೀನ್‌ನಲ್ಲಿ ಈ ರೀತಿ ಪೋಸ್ಟರ್ ಹಾಕಿರುವುದು ಇದೇ ಮೊದಲಲ್ಲ. ಕಳೆದ ವಾರ ಪ್ರತಿಷ್ಠಿತ ಸಂಸ್ಥೆಯ ಹಾಸ್ಟೆಲ್ 12 ರ ಕ್ಯಾಂಟೀನ್‌ನ ಗೋಡೆಗಳ ಮೇಲೆ ‘ಸಸ್ಯಾಹಾರಿಗಳಿಗೆ ಮಾತ್ರ ಇಲ್ಲಿ ಕುಳಿತುಕೊಳ್ಳಲು ಅವಕಾಶವಿದೆ’ ಎಂಬ ಪೋಸ್ಟರ್‌ಗಳನ್ನು ಹಾಕಲಾಗಿತ್ತು. ಅದರ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಈಗ ಮತ್ತೊಂದು ಅದೇ ರೀತಿಯ ಪೋಸ್ಟರ್ ಹಾಕಲಾಗಿದ್ದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಗುರಿಯಾಗಿದೆ.

ಆದರೆ ‘ಪೋಸ್ಟರ್‌ಗಳ ಬಗ್ಗೆ ತಿಳಿದಿದ್ದರೂ, ಕ್ಯಾಂಟೀನ್‌ನಲ್ಲಿ ಯಾರು ಹಾಕಿದ್ದಾರೆ ಎಂಬುದು ನಮಗೆ ತಿಳಿದಿಲ್ಲ’ ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ವಿವಿಧ ವರ್ಗದ ಆಹಾರ ಸೇವಿಸುವ ಜನರಿಗೆ ನಿಗದಿತ ಆಸನಗಳಿಲ್ಲ ಮತ್ತು ಪೋಸ್ಟರ್‌ಗಳನ್ನು ಯಾರು ಹಾಕಿದ್ದಾರೆ ಎಂಬ ಬಗ್ಗೆ ಸಂಸ್ಥೆಗೆ ತಿಳಿದಿಲ್ಲ ಎಂದು ಅವರು ಹೇಳಿದರು.
ವಿದ್ಯಾರ್ಥಿ ಸಮೂಹ ಅಂಬೇಡ್ಕರ್ ಪೆರಿಯಾರ್ ಫುಲೆ ಸ್ಟಡಿ ಸರ್ಕಲ್ (APPSC) ಪ್ರತಿನಿಧಿಗಳು ಘಟನೆಯನ್ನು ಖಂಡಿಸಿದರು ಮತ್ತು ಪೋಸ್ಟರ್‌ಗಳನ್ನು ಹರಿದು ಹಾಕಿದರು.
“ಹಾಸ್ಟೆಲ್‌ನ ಪ್ರಧಾನ ಕಾರ್ಯದರ್ಶಿಗೆ ಆರ್‌ಟಿಐಗಳು ಮತ್ತು ಇಮೇಲ್‌ಗಳು ಇನ್‌ಸ್ಟಿಟ್ಯೂಟ್‌ನಲ್ಲಿ ಆಹಾರ ಪ್ರತ್ಯೇಕತೆಗೆ ಯಾವುದೇ ನೀತಿಯಿಲ್ಲ ಎಂದು ಬಹಿರಂಗಪಡಿಸಿದರೂ, ಕೆಲವು ವ್ಯಕ್ತಿಗಳು ಕೆಲವು ಪ್ರದೇಶಗಳಲ್ಲಿ ‘ಸಸ್ಯಾಹಾರಿಗಳು ಮಾತ್ರ ಕುಳಿತುಕೊಳ್ಳಬೇಕು’ ಎಂದು ಗೊತ್ತುಪಡಿಸಿ, ಇತರ ವಿದ್ಯಾರ್ಥಿಗಳನ್ನು ಆ ಪ್ರದೇಶವನ್ನು ತೊರೆಯುವಂತೆ ಒತ್ತಾಯಿಸಿದ್ದಾರೆ” ಎಂದು AAPSC ಕಿಡಿ ಕಾರಿದೆ.
ಐಐಟಿ ಬಾಂಬೆ ವಿದ್ಯಾರ್ಥಿ ಸಾವು: ತಾಯಿಯಿಂದ ಜಾತಿ ತಾರತಮ್ಯ ಆರೋಪ
ಘಟನೆಯ ನಂತರ, ಹಾಸ್ಟೆಲ್‌ನ ಪ್ರಧಾನ ಕಾರ್ಯದರ್ಶಿ ಎಲ್ಲಾ ವಿದ್ಯಾರ್ಥಿಗಳಿಗೆ ಇಮೇಲ್ ಕಳುಹಿಸಿದರು. “ಹಾಸ್ಟೆಲ್‌ಗಳ ಮೆಸ್‌ನಲ್ಲಿ ಜೈನ್ ವಿತರಣೆಗೆ ಕೌಂಟರ್ ಇದೆ, ಆದರೆ ಜೈನ ಆಹಾರವನ್ನು ಸೇವಿಸುವವರಿಗೆ ಕುಳಿತುಕೊಳ್ಳಲು ಯಾವುದೇ ನಿರ್ಧಿಷ್ಟ ಸ್ಥಳವಿಲ್ಲ.” ಆದರೆ ಕೆಲವು ಪ್ರದೇಶಗಳನ್ನು “ಜೈನ ಸಿಟ್ಟಿಂಗ್ ಸ್ಪೇಸ್” ಎಂದು ಕೆಲ ಕಿಡಿಗೇಡಿಗಳು ಪೋಸ್ಟರ್ ಹಾಕಿದ್ದಾರೆ. ಮಾಂಸಾಹಾರಿ ಆಹಾರವನ್ನು ತರುವ ವ್ಯಕ್ತಿಗಳನ್ನು ಪೋಸ್ಟರ್ ಹಾಕಿದ ಪ್ರದೇಶಗಳಲ್ಲಿ ಕುಳಿತುಕೊಳ್ಳಲು ಅನುಮತಿಸುವುದಿಲ್ಲ ಎಂದು ಬರೆದಿದ್ದಾರೆ.
“ಇಂತಹ ನಡವಳಿಕೆಯು ಸ್ವೀಕಾರಾರ್ಹವಲ್ಲ ಮತ್ತು ನಿರ್ದಿಷ್ಟ ಸಮುದಾಯಕ್ಕೆ ಮೀಸಲಾಗಿದೆ ಎಂಬ ಕಾರಣಕ್ಕಾಗಿ ಯಾವುದೇ ವಿದ್ಯಾರ್ಥಿಯನ್ನು ಯಾವುದೇ ಪ್ರದೇಶದಲ್ಲಿ ಕುಳಿತುಕೊಳ್ಳಬಾರದು ಎನ್ನುವಂತಿಲ್ಲ. ಇಂತಹ ಘಟನೆ ಮರುಕಳಿಸಿದರೆ, ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುವುದು ಎಂದು ಹಾಸ್ಟೆಲ್‌ನ ಪ್ರಧಾನ ಕಾರ್ಯದರ್ಶಿ ಅವರು ಇಮೇಲ್‌ನಲ್ಲಿ ತಿಳಿಸಿದ್ದಾರೆ.
English summary
Students outrage against food discrimination at Indian Institute of Technology-Bombay (IIT-B).
Story first published: Monday, July 31, 2023, 6:36 [IST]