ಪ್ರಧಾನಿ ನರೇಂದ್ರ ಮೋದಿ ಮೆಂಟಲಿ ವೀಕ್‌ ಇದ್ದಾರೆ ಎಂದ ಅಬಕಾರಿ ಸಚಿವ ತಿಮ್ಮಾಪುರ | Prime Minister Narendra Modi is in mentally weak: Excise Minister Thimmapura

Karnataka

oi-Punith BU

|

Google Oneindia Kannada News

ಬೆಂಗಳೂರು, ಜೂನ್‌ 26: ಪ್ರಧಾನಿ ನರೇಂದ್ರ ಮೋದಿ ಅವರು ಮೆಂಟಲಿ ವೀಕ್‌ ಇದ್ದಾರೆ. ದೇಶದಲ್ಲಿ ಅವರೊಬ್ಬರೇ ದುರ್ಬಲ ಪ್ರಧಾನಿಯಾಗಿದ್ದಾರೆ ಎಂದು ಅಬಕಾರಿ ಸಚಿವ ಆರ್‌ಬಿ ತಿಮ್ಮಾಪುರ ಹೇಳಿದ್ದಾರೆ.

ದೇಶದಲ್ಲಿ ಇಷ್ಟೊಂದು ದುರ್ಬಲ ಪ್ರಧಾನಿ ಮೋದಿ ಅವರೊಬ್ಬರೆ ಎಂದ ಅವರು ಮೋದಿ ಯಾವತ್ತಾದರೂ ಪತ್ರಕರ್ತರ ಪ್ರಶ್ನೆಗಳನ್ನು ಎದುರಿಸಿದ್ದಾರಾ? ಪ್ರೆಸ್‌ ಮೀಟ್‌ ಮಾಡಿದ್ದಾರಾ? ಯಾಕೆಂದರೆ ಅವರಿಗೆ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರ ಕೊಡುವ ಶಕ್ತಿ ಇಲ್ಲ ಎಂದು ಹೇಳಿದ್ದಾರೆ.

Excise Minister Thimmapura

ಮೋದಿ ಅವರ ಇಮೇಜ್‌ ಡೆವಲಪ್‌ ಮಾಡಲು ಕಸರತ್ತು ನಡೆಯುತ್ತಲೇ ಇದೆ, ಆದರೆ ಅವರ ಇಮೇಜ್‌ ಬಹಳ ಕುಗ್ಗಿದೆ. ಇದು ಕರ್ನಾಟಕದ ಬಿಜೆಪಿಯವರಿಗೆ ಇನ್ನೂ ಗೊತ್ತಾಗುತ್ತಿಲ್ಲ. ಯಾವಾಗ ಬಡವರ ಅನ್ನಕ್ಕೆ ಕನ್ನ ಹಾಕಿದರೂ, ಯಾವಾಗ ಬಡವರ ಅನ್ನಕ್ಕೆ ತಡೆಯೊಡ್ಡಿದರೂ, ಯಾವಾಗ ಅಂಬಾನಿ, ಅದಾನಿ ಸಾಲ ಮನ್ನಾ ಆಯಿತು. ಚೀನಾ ನಮ್ಮ ಅಕ್ರಮಣ ಮಾಡಿದಾಗಲೇ ಅವರ ಇಮೇಜ್‌ ಕುಸಿಯುತ್ತಾ ಬಂದಿತು. ಈ ಚುನಾವಣೆಯಲ್ಲಿ ಅವರು ಎಷ್ಟು ಓಡಾಡಿದರು. ಆದರೆ ಕೊನೆ ಏನಾಯಿತು ನೀವು ನೋಡಬಹುದು ಎಂದು ಹೇಳಿದರು.

ಇನ್ನು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಶಿವರಾಜ್‌ ತಂಗಡಗಿ ಕೂಡ ಪ್ರಧಾನಿ ಮೋದಿಯವರನ್ನು ತರಾಟೆಗೆ ತೆಗೆದುಕೊಂಡಿದ್ದು, ಮೋದಿ ಅವರು ಇನ್ನು ಎಷ್ಟು ದಿನ ಅಂತ ಈ ದೇಶದ ಜನತೆ ಸುಳ್ಳು ಹೇಳುತ್ತಾರೆ. ಎಲ್ಲೆಲ್ಲಿ ಮೋದಿ ಅವರು ಭಾಷಣ ಮಾಡಿ ಹೋಗಿದ್ದಾರೋ ಅಲ್ಲೆಲ್ಲ ಕಾಂಗ್ರೆಸ್‌ ಪಕ್ಷ ಜಯ ಗಳಿಸಿದ. ಅವರದು ಐರನ್‌ ಲೆಗ್‌. ಅದು ಸಿಂಧನೂರು ಬಂದರು. ನಾವು ರಾಯಚೂರು ಮತ್ತು ಕೊಪ್ಪಳ ಎರಡು ಜಿಲ್ಲೆಗಳನ್ನು ಗೆದ್ದೆವು. ಮೋದಿ ಚಿತ್ರದುರ್ಗಕ್ಕೂ ಹೋದರು ಅಲ್ಲೂ ನಾವು ಗೆಲುವು ಸಾಧಿಸಿದೆವು ಎಂದು ಹೇಳಿದರು.

ಸ್ಕ್ಯಾಮ್ ಗಳು ಬಿಜೆಪಿಯಲ್ಲಿದೆ, ಸ್ಕೀಮ್ ಗಳು ಕಾಂಗ್ರೆಸ್ ನಲ್ಲಿದೆ; ಸಿ ಟಿ ರವಿಗೆ ತಿರುಗೇಟು ಕೊಟ್ಟ ತಿಮ್ಮಾಪುರಸ್ಕ್ಯಾಮ್ ಗಳು ಬಿಜೆಪಿಯಲ್ಲಿದೆ, ಸ್ಕೀಮ್ ಗಳು ಕಾಂಗ್ರೆಸ್ ನಲ್ಲಿದೆ; ಸಿ ಟಿ ರವಿಗೆ ತಿರುಗೇಟು ಕೊಟ್ಟ ತಿಮ್ಮಾಪುರ

ಅವರೂ ಬಳ್ಳಾರಿಗೂ ಹೋಗಿ ಪ್ರಚಾರ ಮಾಡಿದರೂ ಆದರೆ ಅಲ್ಲೂ ನಾವು ಪೂರ್ಣ ಗೆದ್ದೆವು. ಕಲಬುರಗಿ, ಹೈದರಾಬಾದ್‌ ಕರ್ನಾಟಕ, ಮೈಸೂರು, ದಾವಣಗೆರೆ ಇಲ್ಲೆಲ್ಲಾ ಅವರು ಹೋಗಿದ್ದರು. ಆದರೆ ಅಲ್ಲೆಲ್ಲಾ ನಾವು ಗೆಲುವು ಕಂಡಿದ್ದೇವೆ, ಕಳೆದ 9 ವರ್ಷಗಳಿಂದ ಅವರು ಸುಳ್ಳನ್ನೇ ಸತ್ಯವೆಂದು ಹೇಳುತ್ತಾ ಬಂದಿದ್ದಾರೆ. ಚುನಾವಣೆಯಲ್ಲಿ ಚಾಣಕ್ಯನ ತಂತ್ರ ಏನಾಯಿತು. ಬಹಳಷ್ಟು ದಿನ ಇದೆಲ್ಲಾ ನಡೆಯಲ್ಲ ಎಂದರು.

English summary

Excise Minister RB Thimmapura said that Prime Minister Narendra Modi is on mentally weak. he is the only weak Prime Minister in the country.

Story first published: Monday, June 26, 2023, 16:57 [IST]

Source link