ಪ್ರಚೋದನಕಾರಿ ಭಾಷಣ: ಪ್ರಮೋದ್ ಮುತಾಲಿಕ್‌ಗೆ ಬಿಗ್ ರಿಲೀಫ್ | Defamatory Speech: HC Quashes Case Against Pramod Muthalik

India

oi-Gururaj S

By ಎಸ್‌ಎಸ್‌ಎಸ್

|

Google Oneindia Kannada News

ಬೆಂಗಳೂರು, ಜೂನ್ 28: ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ವಿರುದ್ಧ ದಾಖಲಾಗಿದ್ದ ಪ್ರಚೋದನಕಾರಿ ಭಾಷಣ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್‌ ರದ್ದುಪಡಿಸಿದೆ. ಇದರಿಂದಾಗಿ 6 ವರ್ಷದ ಹಿಂದೆ ವಿಜಯಪುರ ಜಿಲ್ಲೆಯ ಬಬಲೇಶ್ವರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ರದ್ದಾಗಿದ್ದು, ಮುತಾಲಿಕ್‌ಗೆ ಬಿಗ್ ರಿಲೀಫ್ ಸಿಕ್ಕಿದೆ.

ಪ್ರಕರಣ ರದ್ದು ಕೋರಿ ಪ್ರಮೋದ್ ಸಲ್ಲಿಸಿದ್ದ ಅರ್ಜಿಯನ್ನು ಕಲಬುರಗಿ ಹೈಕೋರ್ಟ್‌ ಪೀಠದಲ್ಲಿ ಆಲಿಸಿದ ನ್ಯಾ. ಹೇಮಂತ್‌ ಚಂದನಗೌಡರ್‌ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ. ಪ್ರಕರಣ ರದ್ದಾಗಿದ್ದರಿಂದ ಮುತಾಲಿಕ್‌ಗೆ ರಿಲೀಫ್ ಸಿಕ್ಕಿದೆ. ಇಲ್ಲವಾದರೆ ಅವರು ಪ್ರಕರಣದ ಸಲುವಾಗಿ ಕೋರ್ಟ್‌ನಿಂದ ಕೋರ್ಟ್‌ಗೆ ಅಲೆಯಬೇಕಿತ್ತು.

ಗೋಹತ್ಯೆ ನಿಷೇಧ ಕಾಯ್ದೆಯನ್ನು ವಾಪಸ್ ಪಡೆಯದಂತೆ ರಾಜ್ಯಪಾಲರಿಗೆ ಒತ್ತಾಯ: ಪ್ರಮೋದ್ ಮುತಾಲಿಕ್ಗೋಹತ್ಯೆ ನಿಷೇಧ ಕಾಯ್ದೆಯನ್ನು ವಾಪಸ್ ಪಡೆಯದಂತೆ ರಾಜ್ಯಪಾಲರಿಗೆ ಒತ್ತಾಯ: ಪ್ರಮೋದ್ ಮುತಾಲಿಕ್

Defamatory Speech: HC Quashes Case Against Pramod Muthalik

ಪೂರ್ವಾನುಮತಿ ಇಲ್ಲ: ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಈ ಪ್ರಕರಣದಲ್ಲಿ ಮ್ಯಾಜಿಸ್ಪ್ರೇಟ್‌ ಸರ್ಕಾರದ ಅನುಮೋದನೆ ಇಲ್ಲದೆ ದೂರನ್ನು ಮಾನ್ಯ ಮಾಡಿದ್ದಾರೆ. ನಿಯಮದಲ್ಲಿ ಹಾಗೆ ಮಾಡಲು ಅವರಿಗೆ ಅವಕಾಶವಿಲ್ಲ. ಹಾಗಾಗಿ ಪ್ರಕರಣ ಕಾನೂನಿನಡಿ ಊರ್ಜಿತವಾಗುವುದಿಲ್ಲಎಂದು ನ್ಯಾಯಾಲಯ ಹೇಳಿದೆ.

ಲವ್ ಜಿಹಾದ್: 10 ಮುಸ್ಲಿಂ ಹುಡುಗಿಯರನ್ನು ಬಲೆಗೆ ಬೀಳಿಸಿ: ಪ್ರಮೋದ್ ಮುತಾಲಿಕ್ ಕರೆಲವ್ ಜಿಹಾದ್: 10 ಮುಸ್ಲಿಂ ಹುಡುಗಿಯರನ್ನು ಬಲೆಗೆ ಬೀಳಿಸಿ: ಪ್ರಮೋದ್ ಮುತಾಲಿಕ್ ಕರೆ

ಭಾರತೀಯ ದಂಡ ಸಂಹಿತೆ (ಐಪಿಸಿ)ಸೆಕ್ಷನ್‌ 295(ಎ) ಅಡಿ ಕೇಸ್‌ ದಾಖಲಿಸಲು ಸರಕಾರದ ಪೂರ್ವಾನುಮತಿ ಅಗತ್ಯವಿದೆ. ಅದು ಇಲ್ಲದಿದ್ದರೆ ಕೇಸನ್ನು ಪರಿಗಣಿಸಲೇಬಾರದು. ಆದರೆ ಈ ಪ್ರಕರಣದಲ್ಲಿಪೂರ್ವಾನುಮತಿ ಪಡೆಯದ ಹಿನ್ನೆಲೆಯಲ್ಲಿಕೇಸ್‌ ರದ್ದುಪಡಿಸಲಾಗುತ್ತಿದೆ ಎಂದು ನ್ಯಾಯಪೀಠ ಹೇಳಿದೆ.

ಗೋಹಂತಕರೊಂದಿಗೆ ನಾವು ಹೊಂದಾಣಿಕೆ ಮಾಡಿಕೊಳ್ಳುವ ಮಾತೇ ಇಲ್ಲ: ಪ್ರಮೋದ್ ಮುತಾಲಿಕ್ಗೋಹಂತಕರೊಂದಿಗೆ ನಾವು ಹೊಂದಾಣಿಕೆ ಮಾಡಿಕೊಳ್ಳುವ ಮಾತೇ ಇಲ್ಲ: ಪ್ರಮೋದ್ ಮುತಾಲಿಕ್

ಅಲ್ಲದೆ, ಪೊಲೀಸರು ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಯಾವುದೇ ಹುರುಳಿಲ್ಲ, ಆರೋಪವನ್ನು ಸಾಬೀತುಪಡಿಸುವ ಅಂಶಗಳಿಲ್ಲ. ಪೊಲೀಸ್‌ ಸಿಬ್ಬಂದಿಯ ಹೇಳಿಕೆಗಳನ್ನು ಬಿಟ್ಟರೆ ಬೇರೆ ಯಾವುದೇ ಸಾಕ್ಷ್ಯವಿಲ್ಲ. ಸ್ವತಂತ್ರ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳಿಲ್ಲ. ಆರೋಪಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆನ್ನಲಾದ ವಿಡಿಯೋ ಕೂಡ ಇಲ್ಲ. ಹಾಗಾಗಿ ಆರೋಪಗಳನ್ನು ಪುರಸ್ಕರಿಸಲಾಗದು ಎಂದು ನ್ಯಾಯಪೀಠ ಹೇಳಿದೆ.

ಪ್ರಕರಣವೇನು?; 2017ರ ಫೆಬ್ರವರಿ 25ರಂದು ಶಿವಾಜಿ ಮಹಾರಾಜ ಜಯಂತಿಯಂದು ಶ್ರೀರಾಮಸೇನೆ ಮುಖ್ಯಸ್ಥರಾಗಿದ್ದ ಪ್ರಮೋದ್‌ ಮುತಾಲಿಕ್‌ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಆಗ ಮಾಡಿದ ಭಾಷಣದಲ್ಲಿ ಪ್ರಮೋದ್‌ ಮುತಾಲಿಕ್‌, “ಗೋವಿನ ಹತ್ಯೆ ಮಾಡಿದವರ ಕೈ ಕಡಿಯಬೇಕೆಂದು” ಪ್ರಚೋದನಕಾರಿ ಹೇಳಿಕೆ ನೀಡಿದ್ದರೆಂದು ಬಬಲೇಶ್ವರ ಪೊಲೀಸ್‌ ಠಾಣೆಯಲ್ಲಿಕೇಸ್‌ ದಾಖಲಾಗಿತ್ತು.

ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌ ಸಮಕ್ಷಮದಲ್ಲೇ ಹೇಳಿಕೆ ನೀಡಿದ್ದಾರೆಂದು ಆರೋಪಿಸಲಾಗಿತ್ತು, ಆ ಬಗ್ಗೆ ಪೊಲೀಸರು ತನಿಖೆ ನಡೆಸಿ ಆರೋಪ ಪಟ್ಟಿಯನ್ನೂ ಸಹ ಸಲ್ಲಿಸಿದ್ದರು. ಹಾಗಾಗಿ ಪ್ರಕರಣ ರದ್ದು ಕೋರಿ ಮುತಾಲಿಕ್‌ ಕರ್ನಾಟಕ ಹೈಕೋರ್ಟ್‌ ಮೊರೆ ಹೋಗಿದ್ದರು.

English summary

Karnataka high court quashed the defamatory speech case against Sri Rama Sene chief Pramod Muthalik. Case registered in Babaleshwar police station, Vijayapura.

Source link