Tv
oi-Muralidhar S
By ಅನಿತಾ ಬನಾರಿ
|
ಉದಯ
ಟಿವಿಯಲ್ಲಿ
ಪ್ರಸಾರವಾಗುತ್ತಿರುವ
‘ಅಣ್ಣ
ತಂಗಿ’
ಧಾರಾವಾಹಿಯು
ವಿಭಿನ್ನ
ಕಥೆಯ
ಜೊತೆಗೆ
ಪಾತ್ರವರ್ಗದ
ಮೂಲಕ
ಕಿರುತೆರೆ
ವೀಕ್ಷಕರ
ಮನ
ಸೆಳೆಯುವಲ್ಲಿ
ಯಶಸ್ವಿಯಾಗಿದೆ.
ಇದೀಗ
‘ಅಣ್ಣ
ತಂಗಿ’
ಧಾರಾವಾಹಿಯಲ್ಲಿ
ಪಾತ್ರದ
ಬದಲಾವಣೆ
ಆಗಿದೆ.
‘ಅಣ್ಣ
ತಂಗಿ’ಯಲ್ಲಿ
ಜ್ಯೋತಿಯಾಗಿ
ಅಭಿನಯಿಸುತ್ತಿರುವ
ನಟಿ
ಛಾಯಾಶ್ರೀ
ತಮ್ಮ
ಪಾತ್ರಕ್ಕೆ
ವಿದಾಯ
ಹೇಳಿದ್ದಾರೆ.
ಆ
ಜಾಗಕ್ಕೆ
ನಟಿ
ಅನ್ವಿತಾ
ಸಾಗರ್
ಎಂಟ್ರಿ
ಕೊಟ್ಟಿದ್ದಾರೆ.

ಈ
ಸಂತಸದ
ವಿಚಾರವನ್ನು
ಸ್ವತಃ
ಅನ್ವಿತಾ
ಸಾಗರ್
ಅವರೇ
ತಮ್ಮ
ಇನ್
ಸ್ಟಾಗ್ರಾಂ
ಖಾತೆಯಲ್ಲಿ
ಹಂಚಿಕೊಂಡಿದ್ದಾರೆ.
ಜೊತೆಗೆ
”
ಟೆಕ್ನಿಕಲಿ,
ಇದು
ನನ್ನ
5ನೇ
ಧಾರಾವಾಹಿ:
ಅಣ್ಣ
ತಂಗಿ.
ಸೋಮವಾರದಿಂದ
ಶನಿವಾರದವರೆಗೆ
ರಾತ್ರಿ
7
ಗಂಟೆಗೆ,
ಉದಯ
ಟಿವಿಯಲ್ಲಿ.
ಹರಸಿ,
ಹಾರೈಸಿರಿ
ಮತ್ತು
ನಿಮ್ಮ
ಪ್ರೋತ್ಸಾಹ
ಸದಾ
ಕಾಲ
ಹೀಗೆ
ಇರಲಿ”
ಎಂದು
ಅನ್ವಿತಾ
ಸಾಗರ್
ಬರೆದುಕೊಂಡಿದ್ದಾರೆ
.
ಆದ್ಯಾ
ಆಗಿ
ಕಿರುತೆರೆಯಲ್ಲಿ
ಫೇಮಸ್ಸು!
ಜೀ
ಕನ್ನಡ
ವಾಹಿನಿಯಲ್ಲಿ
ಪ್ರಸಾರವಾಗುತ್ತಿರುವ
ಜನಪ್ರಿಯ
ಧಾರಾವಾಹಿ
‘ಗಟ್ಟಿಮೇಳ’ದಲ್ಲಿ
ನಾಯಕ
ವೇದಾಂತ್
ವಸಿಷ್ಠ
ತಂಗಿ
ಆದ್ಯಾ
ಪಾತ್ರದಲ್ಲಿ
ನಟಿಸಿ
ಸೈ
ಎನಿಸಿಕೊಂಡಿದ್ದರು.
ನಟಿ
ಅನ್ವಿತಾ
ಸಾಗರ್
ಅದ್ಭುತ
ನಟನೆಯ
ಮೂಲಕ
ವೀಕ್ಷಕರ
ಮನ
ಸೆಳೆದ
ಚೆಂದುಳ್ಳಿ
ಚೆಲುವೆ.
ಆದ್ಯಾ
ಪಾತ್ರದ
ಮೂಲಕ
ಕರುನಾಡಿನಾದ್ಯಂತ
ಮನೆ
ಮಾತಾಗಿದ್ದ
ಈಕೆ
ನಂತರ
ಅಶ್ವಿನಿಯಾಗಿಯೂ
ಮೋಡಿ
ಮಾಡಿದ್ದಾರೆ.
‘ಮನಸ್ಸೆಲ್ಲಾ
ನೀನೆ’
ಎಂದ
ಅನ್ವಿತಾ
ಸ್ಟಾರ್
ಸುವರ್ಣದಲ್ಲಿ
ಪ್ರಸಾರವಾಗುತ್ತಿದ್ದ
‘ಮನಸ್ಸೆಲ್ಲಾ
ನೀನೆ’
ಧಾರಾವಾಹಿಯಲ್ಲಿ
ಅಶ್ವಿನಿ
ಆಗಿ
ಕಾಣಿಸಿಕೊಂಡಿದ್ದ
ಅನ್ವಿತಾ
ಸಾಗರ್
ಖಳನಾಯಕಿಯಾಗಿ
ಮಿಂಚಿದ್ದರು.
ಇದೀಗ
ಜ್ಯೋತಿಯಾಗಿ
ಬದಲಾಗಿರುವ
ಅನ್ವಿತಾ
ಸಾಗರ್
ಮತ್ತೊಮ್ಮೆ
ಖಳನಾಯಕಿಯಾಗಿ
ಕಿರುತೆರೆಯಲ್ಲಿ
ಅಭಿನಯಿಸುತ್ತಿದ್ದಾರೆ.

ನಿರೂಪಕಿಯಾಗುವ
ಕನಸಿತ್ತು
ಎಂಬಿಎ
ಪದವೀಧರೆಯಾಗಿರುವ
ಅನ್ವಿತಾ
ಸಾಗರ್‌ಗೆ
ನಿರೂಪಕಿಯಾಗಬೇಕು
ಎಂಬ
ಬಯಕೆಯಿತ್ತು.
ಕಾಲೇಜು
ವಿದ್ಯಾರ್ಥಿನಿಯಾಗಿದ್ದಾಗಲೇ
ಮಂಗಳೂರಿನ
ಖಾಸಗಿ
ವಾಹಿನಿ
ನಮ್ಮ
ಟಿವಿಯಲ್ಲಿ
ನಿರೂಪಕಿಯಾಗಿ
ಸೇರಿಕೊಂಡ
ಆಕೆ
ಮಾತಿನ
ಮೂಲಕ
ವೀಕ್ಷಕರನ್ನು
ಸೆಳೆಯುವಲ್ಲಿ
ಯಶಸ್ವಿಯಾದರು.
ಕೇವಲ
ಟಿವಿ
ಕಾರ್ಯಕ್ರಮಗಳು
ಮಾತ್ರವಲ್ಲದೇ
ಬೇರೆ
ಕಾರ್ಯಕ್ರಮಗಳ
ನಿರೂಪಣೆಯನ್ನು
ಈಕೆ
ಮಾಡುತ್ತಿದ್ದರು.
ಕೋಸ್ಟಲ್‌ವುಡ್
ಮೂಲಕ
ನಟನೆ
ತುಳು
ಸಿನಿಮಾ
‘ದಂಡ್’
ಮೂಲಕ
ನಟನೆಗೆ
ಪಾದಾರ್ಪಣೆ
ಮಾಡಿದ
ಕರಾವಳಿ
ಕುವರಿ
ಅನ್ವಿತಾ
ಸಾಗರ್.
‘ಬಲೆ
ಪುದರ್
ದೀಕ’,
‘ಪೆಟ್
ಕಮ್ಮಿ’
ಸಿನಿಮಾಗಳಲ್ಲಿ
ಅಭಿನಯಿಸಿ
ಸೈ
ಎನಿಸಿಕೊಂಡರು.
ತದ
ನಂತರ
ಕಿರುತೆರೆಗೆ
ಕಾಲಿಟ್ಟು
ವೀಕ್ಷಕರ
ಮನ
ಯಶಸ್ವಿಯಾದ
ಈಕೆ
ಬೆಳ್ಳಿತೆರೆಯಲ್ಲಿಯೂ
ನಟನಾ
ಕಂಪನ್ನು
ಪಸರಿಸಿದ
ಬೆಡಗಿ.
‘ಯಜ್ಞ’
ಸಿನಿಮಾದಲ್ಲಿ
ಬಣ್ಣ
ಹಚ್ಚಿರುವ
ಅನ್ವಿತಾ
ಸಾಗರ್
‘ಮಾಯಾ
ಕನ್ನಡಿ’
ಹಾಗೂ
‘ವಿರಾಟ
ಪರ್ವ’
ಸಿನಿಮಾಗಳಲ್ಲಿ
ಅಭಿನಯಿಸಿದ್ದಾರೆ.
ಇದರ
ಜೊತೆಗೆ
ಕಲರ್ಸ್
ಕನ್ನಡದಲ್ಲಿ
ಪ್ರಸಾರವಾಗುತ್ತಿದ್ದ
ರಿಯಾಲಿಟಿ
ಶೋ
‘ಡ್ಯಾನ್ಸಿಂಗ್
ಚಾಂಪಿಯನ್’ನ
ಸ್ಪರ್ಧಿಯಾಗಿಯೂ
ಈಕೆ
ಕಾಣಿಸಿಕೊಂಡಿದ್ದರು.
English summary
Ashvitha Sagar Replaced Chayashree for Anna Thangi Serial Jyothi Character in Udaya TV, know more.
Tuesday, June 27, 2023, 19:15
Story first published: Tuesday, June 27, 2023, 19:15 [IST]