ಪಾಕಿಸ್ತಾನ ಕ್ರಿಕೆಟ್ ಮಂಡಳಿ ದೇಶೀಯ ಕ್ರಿಕೆಟ್ ಆಟಗಾರರ ಪಂದ್ಯದ ಶುಲ್ಕದ ಜೊತೆಗೆ ಸೌಲಭ್ಯಗಳನ್ನು ಕಡಿಮೆ ಮಾಡುತ್ತಿದೆ ಎಂದು ವರದಿಯಾಗಿದೆ. ಪಿಟಿಐ ವರದಿ ಪ್ರಕಾರ, ಮುಂಬರುವ ರಾಷ್ಟ್ರೀಯ ಟಿ 20 ಚಾಂಪಿಯನ್ಶಿಪ್ನಲ್ಲಿ ಭಾಗವಹಿಸುವ ಕ್ರಿಕೆಟಿಗರ ಪಂದ್ಯದ ಶುಲ್ಕವನ್ನು ಪಿಸಿಬಿ ಪ್ರತಿ ಪಂದ್ಯಕ್ಕೆ 100,000 ಪಾಕಿಸ್ತಾನಿ ರೂಪಾಯಿಗಳಿಂದ 10,000ಕ್ಕೆ ಇಳಿಸುವ ಮೂಲಕ ದೇಶೀಯ ಆಟಗಾರರ ಹೊಟ್ಟೆಗೆ ಕಲ್ಲು ಹಾಕಿದೆ. ಮಾರ್ಚ್ 14ರಿಂದ ದೇಶೀಯ ಟೂರ್ನಿ ಆರಂಭವಾಗಲಿದೆ.