ತೃತೀಯ ಲಿಂಗಿ ಮಹಿಳೆಯಿಂದಾಗಿ ಪದಕ ಕಳ್ಕೊಂಡೆ; ಹೊಸ ವಿವಾದ ಎಬ್ಬಿಸಿದ ಅಥ್ಲೀಟ್ ಸ್ವಪ್ನಾ ಬರ್ಮನ್

ಕ್ರೀಡೆ ಮುಗಿದು ಒಂದು ದಿನದ ಬಳಕ ಬರ್ಮನ್ ಅವರು ಸೋಷಿಯಲ್‌ ಮೀಡಿಯಾ ಪೋಸ್ಟ್‌ನಲ್ಲಿ ಹೊಸ ವಿವಾದ ಹುಟ್ಟುಹಾಕಿದ್ದಾರೆ. ಟ್ರಾನ್ಸ್‌ಜೆಂಡರ್ ಅಥ್ಲೀಟ್‌ನಿಂದಾಗಿ ತಾನು ಪದಕ ಕಳೆದುಕೊಂಡೆ ಎಂದು ಅವರು ಹೇಳಿದ್ದಾರೆ. “ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ 19ನೇ ಏಷ್ಯನ್ ಗೇಮ್ಸ್‌ನಲ್ಲಿ ನಾನು ನನ್ನ ಏಷ್ಯನ್ ಗೇಮ್ಸ್ ಕಂಚಿನ ಪದಕವನ್ನು ಮಂಗಳಮುಖಿಯಿಂದಾಗಿ ಕಳೆದುಕೊಂಡಿದ್ದೇನೆ. ಇದು ನಮ್ಮ ಅಥ್ಲೆಟಿಕ್ಸ್ ನಿಯಮಗಳಿಗೆ ವಿರುದ್ಧವಾಗಿರುವುದರಿಂದ, ನನ್ನ ಪದಕವನ್ನು ನನಗೆ ಮರಳಿಸಬೇಕೆಂದು ಬಯಸುತ್ತೇನೆ. ದಯವಿಟ್ಟು ನನಗೆ ಸಹಾಯ ಮಾಡಿ, ಹಾಗೆಯೇ ನನಗೆ ಎಲ್ಲರೂ ಬೆಂಬಲ ಕೊಡಿ,” ಎಂದು ಅವರು ಪೋಸ್ಟ್ ಮಾಡಿದ್ದಾರೆ. ಅದರ ಬೆನಲ್ಲೇ ಆ ಪೋಸ್ಟ್‌ ಅನ್ನು ಅಳಿಸಿದ್ದಾರೆ.

Source link