Telugu
oi-Narayana M
‘RRR’
ಸಕ್ಸಸ್
ಬಳಿಕ
ನಿರ್ದೇಶಕ
ರಾಜಮೌಳಿ,
ಮಹೇಶ್
ಬಾಬು
ಜೊತೆ
ಸಿನಿಮಾ
ಪ್ಲ್ಯಾನ್
ಮಾಡುತ್ತಿದ್ದಾರೆ.
ಆದರೆ
ಹೊಸ
ಸಿನಿಮಾ
ಆರಂಭಿಸುವ
ಮುನ್ನ
ಫ್ಯಾಮಿಲಿ
ಜೊತೆ
ಸುಂದರ
ತಾಣಕ್ಕೆ
ಪ್ರವಾಸ
ಹೋಗಿದ್ದಾರೆ.
ಪತ್ನಿ
ರಮಾ,
ಪುತ್ರ
ಕಾರ್ತಿಕೇಯ
ಹಾಗೂ
ಮಗಳು
ಸೇರಿದಂತೆ
ಫ್ಯಾಮಿಲಿ
ಜೊತೆ
ಜಕ್ಕಣ್ಣನ
ಪ್ರವಾಸದ
ಫೋಟೊಗಳು
ಸೋಶಿಯಲ್
ಮೀಡಿಯಾದಲ್ಲಿ
ವೈರಲ್
ಆಗ್ತಿದೆ.
ಪ್ರತಿಬಾರಿ
ಒಂದು
ಸಿನಿಮಾ
ಮುಗಿದ
ಬಳಿಕ
ಫ್ಯಾಮಿಲಿ
ಜೊತೆ
ರಜೆಯ
ಮಜೆ
ಸವಿದು
ಮತ್ತೆ
ಹೊಸ
ಸಿನಿಮಾ
ಬಗ್ಗೆ
ರಾಜಮೌಳಿ
ಕೈ
ಹಾಕುತ್ತಾರೆ.
ಈ
ವಿಚಾರವನ್ನು
ಸಾಕಷ್ಟು
ಸಂದರ್ಶನಗಳಲ್ಲಿ
ಹೇಳಿಕೊಂಡಿದ್ದಾರೆ.
ಹೇಳಿದಂತೆಯೇ
ಈ
ಬಾರಿ
‘RRR’
ರಿಲೀಸ್
ಆಗಿ
ವರ್ಷದ
ನಂತರ
ಮೌಳಿ
ಫ್ಯಾಮಿಲಿ
ತಮಿಳುನಾಡಿನ
ತೂತುಕುಡಿಗೆ
ಹೋಗಿ
ಎಂಜಾಯ್
ಮಾಡುತ್ತಿದೆ.
ಸದ್ಯ
ಜಕ್ಕಣ್ಣನ
ಫ್ಯಾಮಿಲಿ
ರೆಸಾರ್ಟ್‌ವೊಂದರಲ್ಲಿ
ಬೀಡುಬಿಟ್ಟಿದೆ.
ಅಲ್ಲಿ
ಗಿಡಗಳನ್ನು
ನೆಟ್ಟಿರುವ
ಫೋಟೊ,
ತೂಗುಯ್ಯಾಲೆಯಲ್ಲಿ
ಫ್ಯಾಮಿಲಿ
ಜೊತೆ
ಜಕ್ಕಣ್ಣ
ಇರುವ
ಮತ್ತೊಂದು
ಫೋಟೂ
ವೈರಲ್
ಆಗ್ತಿದೆ.

ಮತ್ತೊಂದು
ಕಡೆ
ಮಹೇಶ್
ಬಾಬು
ಕಾಂಬಿನೇಷನ್‌ನಲ್ಲಿ
ಜಕ್ಕಣ್ಣ
ಮಾಡಲಿರುವ
ಸಿನಿಮಾ
ಪ್ರೀ
ಪ್ರೊಡಕ್ಷನ್
ಕೆಲಸ
ನಡೀತಿದೆ.
ಇತ್ತೀಚೆಗೆ
ಮೌಳಿ
ತಂದೆ
ಕಥೆಗಾರ
ವಿಜಯೇಂದ್ರ
ಪ್ರಸಾದ್
ಮಾತನಾಡಿ
ಜುಲೈ
ಅಂತ್ಯದ
ವೇಳೆಗೆ
ಸ್ಪ್ರಿಪ್ಟ್
ರಾಜಮೌಳಿ
ಕೈಗೆ
ಕೊಡುತ್ತೇನೆ
ಎಂದಿದ್ದಾರೆ.
ಸದ್ಯ
ಜಕ್ಕಣ್ಣ
ವಕೇಷನ್‌ಗೆ
ಹೋಗಿರುವುದು
ನೋಡಿದರೆ
ಶೀಘ್ರದಲ್ಲೇ
ಸಿನಿಮಾ
ಕೆಲಸ
ಆರಂಭಿಸುವ
ಸುಳಿವು
ಸಿಕ್ತಿದೆ.
ಅವರಿಗೆ
ಕೋಟಿ
ಕೋಟಿ
ಕೊಟ್ರೆ
ಮತ್ತೇನಾಗುತ್ತೆ?
ಬಾಲಿವುಡ್
ಚಿತ್ರಗಳ
ಸೋಲಿಗೆ
ಅದೇ
ಕಾರಣ:
ರಾಜಮೌಳಿ
ಚಿಕ್ಕಮಗಳೂರು
ಮೌಳಿ
ನೆಚ್ಚಿನ
ಪ್ರವಾಸಿ
ತಾಣ
ಸಾಮಾನ್ಯವಾಗಿ
ಸ್ಟಾರ್
ನಟ,
ನಟಿಯರು,
ನಿರ್ದೇಶಕರು
ವಕೇಷನ್
ಅಂದರೆ
ಮಾಲ್ಡೀವ್ಸ್
ಸೇರಿದಂತೆ
ಬೇರೆ
ಬೇರೆ
ದೇಶಗಳಿಗೆ
ಹೋಗುತ್ತಾರೆ.
ಆದರೆ
ರಾಜಮೌಳಿಗೆ
ಸೌತ್
ಇಂಡಿಯಾದ
ಹಿಲ್
ಸ್ಟೇಷನ್ಸ್
ಅಂದ್ರೆ
ಅಚ್ಚುಮೆಚ್ಚು.
ಅದರಲ್ಲೂ
ಚಿಕ್ಕಮಗಳೂರು
ಜಕ್ಕಣ್ಣನ
ನೆಚ್ಚಿನ
ಪ್ರವಾಸಿ
ತಾಣ.
ಈ
ಬಗ್ಗೆ
ಸಂದರ್ಶನಗಳಲ್ಲೂ
ಹೇಳಿಕೊಂಡಿದ್ದಾರೆ.
ಸಾಕಷ್ಟು
ಬಾರಿ
ಕಾಫಿನಾಡಿಗೆ
ಪ್ರವಾಸ
ಬಂದಿದ್ದಾರೆ.
ಆದರೆ
ಈ
ಬಾರಿ
ತೂತುಕುಡಿಯನ್ನು
ಆಯ್ಕೆ
ಮಾಡಿಕೊಂಡಿದ್ದಾರೆ.
ನಿರೀಕ್ಷೆ
ಹುಟ್ಟಾಕ್ಕಿದ
SSMB29
ಮೌಳಿ
ನಿರ್ದೇಶನದ
‘RRR’
ಸಿನಿಮಾ
ಹಾಲಿವುಡ್‌ನಲ್ಲೂ
ಸದ್ದು
ಮಾಡಿದ್ದು
ಗೊತ್ತೇಯಿದೆ.
ಜೇಮ್ಸ್
ಕ್ಯಾಮರೂನ್
ಸೇರಿದಂತೆ
ಹಾಲಿವುಡ್
ದಿಗ್ಗಜರೇ
ಸಿನಿಮಾ
ನೋಡಿ
ಕೊಂಡಾಡಿದ್ದರು.
ಇದೀಗ
ಏಕಾಏಕಿ
ಹಾಲಿವುಡ್
ರೇಂಜ್
ಚಿತ್ರವನ್ನೇ
ರಾಜಮೌಳಿ
ಮಾಡೋಕೆ
ಮುಂದಾಗಿದ್ದಾರೆ.
ಇದೊಂದು
ಜಂಗಲ್
ಆಕ್ಷನ್
ಅಡ್ವೆಂಚರಸ್
ಡ್ರಾಮಾ
ಸಿನಿಮಾ
ಎನ್ನಲಾಗ್ತಿದೆ.
ಬಹುಕೋಟಿ
ವೆಚ್ಚದಲ್ಲಿ
ನಿರ್ಮಾಣವಾಗುವ
ಚಿತ್ರದಲ್ಲಿ
ಹಾಲಿವುಡ್
ಕಲಾವಿದರು,
ತಂತ್ರಜ್ಞರು
ಕೆಲಸ
ಮಾಡಲಿದ್ದಾರೆ.
‘ಇಂಡಿಯಾನಾ
ಜಾನ್ಸ್’
ಮಾದರಿ
ಚಿತ್ರದಲ್ಲಿ
ಮಹೇಶ್
ಬಾಬು
ಕಾಣಿಸಿಕೊಳ್ಳಲಿದ್ದಾರೆ.

1250
ಕೋಟಿ
ಗಳಿಸಿದ್ದ
‘RRR’
ಕಳೆದ
ವರ್ಷ
ಮಾರ್ಚ್
25ಕ್ಕೆ
ತೆರೆಕಂಡಿದ್ದ
‘RRR’
ಸಿನಿಮಾ
ಬಾಕ್ಸಾಫೀಸ್
ಶೇಕ್
ಮಾಡಿತ್ತು.
ರಾಮ್‌ಚರಣ್-
ಜ್ಯೂ.
ಎನ್‌ಟಿಆರ್
ಲೀಡ್
ರೋಲ್‌ಗಳಲ್ಲಿ
ನಟಿಸಿ
ಗೆದ್ದರು.
ಇಬ್ಬರು
ಸ್ವಾತಂತ್ರ್ಯ
ಹೋರಾಟಗಾರರ
ಪಾತ್ರಗಳನ್ನಿಟ್ಟುಕೊಂಡು
ಒಂದು
ಕಾಲ್ಪನಿಕ
ಕಥೆ
ಮಾಡಿ
ಜಕ್ಕಣ್ಣ
ಸಕ್ಸಸ್
ಕಂಡಿದ್ದರು.
ಸಿನಿಮಾ
1200
ಕೋಟಿ
ರೂ.ಗೂ
ಅಧಿಕ
ಕಲೆಕ್ಷನ್
ಮಾಡಿತ್ತು.
ಜಪಾನ್
ಭಾಷೆಗೆ
ಡಬ್
ಆಗಿ
ಶತದಿನೋತ್ಸವ
ಆಚರಿಸಿಕೊಂಡಿತ್ತು.
ಒರಿಜಿನಲ್
ಸಾಂಗ್
ವಿಭಾಗದಲ್ಲಿ
ಆಸ್ಕರ್
ಪ್ರಶಸ್ತಿ
ಬಾಚಿಕೊಂಡಿತ್ತು.
ಮುಂದಿನ
ವರ್ಷ
ಹೊಸ
ಸಿನಿಮಾ
ರಾಜಮೌಳಿ
ಭಾರತೀಯ
ಚಿತ್ರರಂಗದಲ್ಲೇ
ನಂಬರ್
ವನ್
ನಿರ್ದೇಶಕ
ಎನಿಸಿಕೊಂಡಿದ್ದಾರೆ.
ಜಕ್ಕಣ್ಣನ
ವಿಷನ್,
ಮೇಕಿಂಗ್,
ಟೇಕಿಂಗ್
ಹಾಲಿವುಡ್
ಸಿನಿಮಾಗಳನ್ನು
ನೆನಪಿಸುತ್ತದೆ.
ಈ
ರೀತಿ
ಸಿನಿಮಾ
ಮಾಡಲು
ಮೌಳಿ
ಸಾಕಷ್ಟು
ಹೋಂವರ್ಕ್
ಮಾಡುತ್ತಾರೆ.
ಫ್ಯಾಮಿಲಿ
ಸದಸ್ಯರೆಲ್ಲಾ
ಸಿನಿಮಾ
ಕೆಲಸಗಳಲ್ಲಿ
ಬೆಂಬಲವಾಗಿ
ನಿಲ್ಲುತ್ತಾರೆ.
ಮಹೇಶ್
ಬಾಬು
ಜೊತೆ
ದೊಡ್ಡ
ಸಿನಿಮಾ
ಆಗಿರುವುದರಿಂದ
ಸಾಕಷ್ಟು
ತಯಾರಿ
ಅವಕಶ್ಯಕತೆ
ಇದೆ.
ಮುಂದಿನ
ವರ್ಷ
ಸಿನಿಮಾ
ಸೆಟ್ಟೇರುವ
ಸಾಧ್ಯತೆಯಿದೆ.
English summary
Rajamouli enjoys tuticorin vacation with family after RRR success. he heads for a family vacation before starts Mahesh babu’s Film work. know more.
Tuesday, June 27, 2023, 20:30