662 ರನ್ಗಳ ಬೃಹತ್ ಗುರಿಯೊಂದಿಗೆ ಕಣಕ್ಕೆ ಇಳಿದ ಅಫ್ಘಾನಿಸ್ತಾನ, 115 ರನ್ಗಳಿಗೆ ಕುಸಿಯಿತು. ಇದರೊಂದಿಗೆ ಬಾಂಗ್ಲಾದೇಶ ತಂಡವು ಟೆಸ್ಟ್ ಕ್ರಿಕೆಟ್ ಚರಿತ್ರೆಯಲ್ಲಿ ಹೊಸ ಚರಿತ್ರೆ ಸೃಷ್ಟಿಸಲು ಸಾಧ್ಯವಾಯಿತು. ಟೆಸ್ಟ್ ಕ್ರಿಕೆಟ್ನಲ್ಲಿ 500ಕ್ಕೂ ಅಧಿಕ ರನ್ಗಳ ಅಂತರದಿಂದ ಗೆದ್ದ 4ನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 3ನೇ ಅತಿ ದೊಡ್ಡ ಅಂತರದ ಗೆಲುವು. 21ನೇ ಶತಮಾನದಲ್ಲಿ ಇದೇ ಮೊದಲು.