ಚಲಿಸುತ್ತಿದ್ದ ಬೈಕ್‌ನಲ್ಲಿ ಚುಂಬಿಸಿದ ಯುವ ಜೋಡಿ- ನೆಟ್ಟಿಗರ ಆಕ್ರೋಶ | Young couple who kissed on a moving bike – anger of netizens

Features

oi-Sunitha B

|

Google Oneindia Kannada News

ಗಾಜಿಯಾಬಾದ್ ಜೂನ್ 23: ಚಲಿಸುವ ಬೈಕ್ ಮೇಲೆ ಯುವ ಜೋಡಿಯೊಂದು ಸಾರ್ವಜನಿಕವಾಗಿ ತಮ್ಮ ಪ್ರೀತಿಯನ್ನು ಪ್ರದರ್ಶಿಸುವ ಮತ್ತೊಂದು ವೀಡಿಯೊ ವೈರಲ್ ಆಗಿದೆ. ಉತ್ತರ ಪ್ರದೇಶದ ಗಾಜಿಯಾಬಾದ್‌ನ ಇಂದಿರಾಪುರಂ ಪ್ರದೇಶದ ಬಳಿ ಎನ್‌ಎಚ್ 9 ಹೆದ್ದಾರಿಯಲ್ಲಿ ಬೈಕ್‌ನಲ್ಲಿ ಸವಾರಿ ಮಾಡುವಾಗ ದಂಪತಿಗಳು ಬಿಗಿಯಾಗಿ ಅಪ್ಪಿಕೊಂಡಿರುವುದು ಕಂಡುಬಂದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ವಿಡಿಯೋದಲ್ಲಿ ಯುವತಿ ತನ್ನ ಪ್ರೇಮಿಗೆ ಎದುರಾಗಿ ಬೈಕ್‌ನ ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತಿದ್ದಾಳೆ. ಬೈಕ್ ಅನ್ನು ವೇಗವಾಗಿದೆ. ಹೆಲ್ಮೆಟ್ ಧರಿಸದೆ ಇಬ್ಬರು ಬೈಕ್ ನಲ್ಲಿ ವೇಗವಾಗಿ ಚಲಿಸುವ ದೃಶ್ಯ ಸೆರೆಯಾಗಿದೆ.

ಸಹ ಪ್ರಯಾಣಿಕರು ಚಿತ್ರೀಕರಿಸಿದ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ರಸ್ತೆಯಲ್ಲಿ ಇಂತಹ ಕೃತ್ಯಗಳನ್ನು ಮಾಡುವ ಮೂಲಕ ತಮ್ಮ ಮತ್ತು ಇತರರ ಪ್ರಾಣಕ್ಕೆ ಅಪಾಯವನ್ನುಂಟುಮಾಡುವ ಜನರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ವಿಡಿಯೋ ಹಂಚಿಕೊಳ್ಳಲಾಗಿದೆ.

Young couple who kissed on a moving bike - anger of netizens

ಕ್ಲಿಪ್ ವೈರಲ್ ಆದ ನಂತರ ಉತ್ತರ ಪ್ರದೇಶ ಪೊಲೀಸರು ಘಟನೆಯ ಬಗ್ಗೆ ಗಮನ ಹರಿಸಿದ್ದಾರೆ. ವಿಡಿಯೋ ಕ್ಲಿಪ್ ಗಮನಿಸಿದ ಗಾಜಿಯಾಬಾದ್ ಪೊಲೀಸರು ಅಗತ್ಯ ಕ್ರಮವನ್ನು ತೆಗದುಕೊಳ್ಳಲು ಮುಂದಾಗಿದ್ದಾರೆ. ಗಾಜಿಯಾಬಾದ್ ಟ್ರಾಫಿಕ್ ಪೊಲೀಸರು ಟ್ವೀಟ್‌ನಲ್ಲಿ ವಾಹನದ ಚಾಲಕನನ್ನು ಗುರುತಿಸಲಾಗಿದೆ ಮತ್ತು ಹಲವಾರು ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಚಲಿಸುವ ಬೈಕ್‌ಗಳಲ್ಲಿ ರೋಮ್ಯಾನ್ಸ್ ಮಾಡುವುದು- ಹೆಚ್ಚುತ್ತಿರುವ ಪ್ರವೃತ್ತಿ

ಬಿಡುವಿಲ್ಲದ ರಸ್ತೆಗಳಲ್ಲಿ ಯುವ ಜೋಡಿಗಳು ಚಲಿಸುವ ಬೈಕ್‌ಗಳಲ್ಲಿ ರೋಮ್ಯಾನ್ಸ್ ಮಾಡುವ ವೀಡಿಯೊಗಳು ಇತ್ತೀಚಿನ ದಿನಗಳಲ್ಲಿ ಟ್ರೆಂಡ್ ಆಗಿವೆ. ಇದಕ್ಕೂ ಮೊದಲು ಈ ವರ್ಷದ ಫೆಬ್ರವರಿಯಲ್ಲಿ ರಾಜಸ್ಥಾನದ ಅಜ್ಮೀರ್‌ನಲ್ಲಿ ಬೈಕ್ ಓಡಿಸುವಾಗ ದಂಪತಿಗಳು ಚುಂಬಿಸುತ್ತಿದ್ದರು. ರೀಜನಲ್ ಕಾಲೇಜ್ ಕ್ರಾಸ್‌ರೋಡ್ಸ್‌ನಿಂದ ನಗರದ ನೌಸರ್ ಕಣಿವೆಗೆ ಪ್ರಯಾಣಿಸುತ್ತಿದ್ದಾಗ ತಡರಾತ್ರಿ ಯುವ ಜೋಡಿ ಬೈಕ್‌ನಲ್ಲಿ ಚುಂಬಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು.

ಬೈಕ್‌ನಲ್ಲಿ ಅಪಾಯಕಾರಿ ಕಸರತ್ತು

ಆರೋಪಿ ಇಬ್ಬರು ಹುಡುಗಿಯರೊಂದಿಗೆ ಬೈಕ್‌ನಲ್ಲಿ ಅಪಾಯಕಾರಿ ಸಾಹಸ ಪ್ರದರ್ಶಿಸಿದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಈ ಘಟನೆ ನಗರದ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ) ಪ್ರದೇಶದಲ್ಲಿ ಸಂಭವಿಸಿದೆ. ವಿಡಿಯೊ ವೈರಲ್ ಆದ ಬಳಿಕ ಮುಂಬೈ ಟ್ರಾಫಿಕ್ ಪೊಲೀಸರು ಯುವಕನ ಪತ್ತೆಗೆ ತಂಡವನ್ನು ರಚಿಸಿತ್ತು. ಈ ತಂಡ ಯುವಕನನ್ನು ಪತ್ತೆ ಮಾಡಿ ಆತನ ವಿರುದ್ಧ ಕ್ರಮ ಕೈಗೊಂಡಿದೆ. ಖಚಿತ ಮಾಹಿತಿ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆತನ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

ಇತ್ತೀಚಿಗೆ ಅಪಾಯಕಾರಿ ಬೈಕ್ ಸ್ಟಂಟ್ ವಿಡಿಯೋಗಳು ಹೆಚ್ಚಾಗಿ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುತ್ತಿವೆ. ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ಕೆಲ ಪುಂಡರು ರಸ್ತೆಯಲ್ಲಿ ಸಾಹಸ ಪ್ರದರ್ಶನ ಮಾಡುತ್ತಿದ್ದಾರೆ. ಇಂತಹದ್ದೇ ಒಂದು ವಿಡಿಯೋದಲ್ಲಿ ಹಿಂದೊಮ್ಮೆ ವ್ಯಕ್ತಿಯೊಬ್ಬ ತನ್ನ ಪತ್ನಿಯೊಂದಿಗೆ ಬೈಕ್‌ನಲ್ಲಿ ಜಾಲಿ ರೈಡ್ ವೇಳೆ ಅಪಾಯಕಾರಿ ಸ್ಟಂಟ್ ಮಾಡಿರುವುದು ಕಂಡು ಬಂದಿತ್ತು. ಈ ಅಪಾಯಕಾರಿ ಸಾಹಸ ಪ್ರದರ್ಶನದ ವಿಡಿಯೋ ಅಂತರ್ಜಾಲದಲ್ಲಿ ವೇಗವಾಗಿ ವೈರಲ್ ಆಗಿತ್ತು. ‘ನಿಜವಾದ ಬಾದ್‌ಶಾ ಇದ್ದಾನೆ’ ಎಂಬ ಶೀರ್ಷಿಕೆಯೊಂದಿಗೆ ಘಂಟಾ ಹೆಸರಿನ ಇಂಟಾಗ್ರಾಮ್‌ ಪುಟದಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿತ್ತು.

English summary

Video of a young couple romancing on a bike on the Ghaziabad highway has gone viral.

Story first published: Friday, June 23, 2023, 17:33 [IST]

Source link