ಕೇರಳದ ಚಿನ್ನ ಸಾಗಣೆ; ಸ್ವಪ್ನ ಸುರೇಶ್‌ಗೆ ಬೆದರಿಕೆ, ಕೇಸ್‌ ರದ್ದು | Kerala Gold Smuggling Case HC Quashed Case Against Accused Who Threatened Swapna Suresh

India

oi-Gururaj S

By ಎಸ್‌ಎಸ್‌ಎಸ್

|

Google Oneindia Kannada News

ಬೆಂಗಳೂರು, ಜೂನ್ 27: ಕೇರಳದಲ್ಲಿ ಸಿಕ್ಕಾಪಟ್ಟೆ ರಾಜಕೀಯ ಸಂಚಲನ ಮೂಡಿಸಿದ್ದ ಚಿನ್ನ ಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್‌ಗೆ ಬೆದರಿಕೆ ಹಾಕಿದ ಕ್ರಿಮಿನಲ್ ಕೇಸ್‌ಗೆ ಹೊಸ ಟ್ವಿಸ್ಟ್‌ ಸಿಕ್ಕಿದೆ. ಸ್ವಪ್ನಾ ಸುರೇಶ್‌ಗೆ ಬೆದರಿಕೆ ಹಾಕಿದ್ದಾರೆನ್ನಲಾದ ಆರೋಪ ಸಂಬಂಧ ವಿಜೇಶ್‌ ಪಿಳ್ಳೈ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸಲು ಬೆಂಗಳೂರು ಪೊಲೀಸರಿಗೆ ಮ್ಯಾಜಿಸ್ಪ್ರೇಟ್‌ ಕೋರ್ಟ್‌ ನೀಡಿದ್ದ ಅನುಮತಿಯನ್ನು ಕರ್ನಾಟಕ ಹೈಕೋರ್ಟ್‌ ರದ್ದುಪಡಿಸಿದೆ.

ಅಷ್ಟೇ ಅಲ್ಲ, ನ್ಯಾಯಪೀಠ ಈ ಕುರಿತು ಮ್ಯಾಜಿಸ್ಪ್ರೇಟ್‌ ಹಿಂದೆ ಮೇಲ್ನೋಟಕ್ಕೆ ಸಾಕ್ಷ್ಯಗಳನ್ನು ಪರಿಗಣಿಸಿಲ್ಲ, ಹಾಗಾಗಿ ಹೊಸದಾಗಿ ವಿಚಾರಣೆ ನಡೆಸಿ ಆದೇಶ ಹೊರಡಿಸಬೇಕೆಂದು ನಿರ್ದೇಶನ ನೀಡಿದೆ. ತಮ್ಮ ವಿರುದ್ಧದ ಎಫ್‌ಐಆರ್‌ ರದ್ದು ಕೋರಿ ವಿಜೇಶ್‌ ಪಿಳ್ಳೈ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ನೀಡಿದೆ.

Kerala Gold Smuggling Case HC Quashed Case Against Accused Who Threatened Swapna Suresh

ದೂರದಾರರೇ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಅಲ್ಲದೆ, ‘ಅಪರಾಧ ದಂಡ ಸಂಹಿತೆ ಸೆಕ್ಷನ್‌ 155(2)ರಡಿ ನಾನ್‌ ಕಾಗ್ನಿಜಬಲ್‌ ಅಪರಾಧದ ಬಗ್ಗೆ ದೂರುದಾರರೇ ಮ್ಯಾಜಿಸ್ಪ್ರೇಟ್‌ ಮುಂದೆ ಅರ್ಜಿ ಸಲ್ಲಿಸಬೇಕಾದ ಅಗತ್ಯವಿಲ್ಲ. ಪೊಲೀಸ್‌ ಅಧಿಕಾರಿಯೇ ಮ್ಯಾಜಿಸ್ಪ್ರೇಟ್‌ ಮುಂದೆ ಅರ್ಜಿ ಸಲ್ಲಿಸಿ ಪ್ರಕರಣದಲ್ಲಿ ತನಿಖೆ ಮುಂದುವರಿಸಬಹುದು’ ಎಂದು ನ್ಯಾಯಪೀಠ ಹೇಳಿದೆ. ಅಲ್ಲದೆ, ನಿಯಮದ ಪ್ರಕಾರ ಎಸ್‌ಎಚ್‌ಒ (ಠಾಣಾಧಿಕಾರಿ) ಅಥವಾ ದೂರುದಾರರು ಇಬ್ಬರಲ್ಲಿಒಬ್ಬರು ತನಿಖೆಗೆ ಅನುಮತಿ ಕೋರಬಹುದು. ಮಾಹಿತಿದಾರರೇ ಅಥವಾ ದೂರುದಾರರೇ ಮ್ಯಾಜಿಸ್ಪ್ರೇಟ್‌ ಕೋರ್ಟ್‌ ಮೊರೆ ಹೋಗಬೇಕಾದ ಅಗತ್ಯವಿಲ್ಲಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಇಂತಹ ಪ್ರಕರಣಗಳು ಹೆಚ್ಚಾಗುತ್ತಿವೆ, ಮ್ಯಾಜಿಸ್ಪ್ರೇಟ್‌ಗಳ ನಿರ್ಲಕ್ಷ್ಯದ ಜಡ್ಡುಗಟ್ಟಿದ ಮನೋಭಾವ ಮುಂದುವರಿದಿದೆ. ಹಾಗಾಗಿ ಅವರು ಇಂತಹ ಆದೇಶಗಳನ್ನು ನೀಡುತ್ತಿದ್ದಾರೆ. ಕೆಲವೊಮ್ಮೆ ಅವರು ಆದೇಶಗಳನ್ನು ಕೇವಲ ಒಂದು ಪದದಲ್ಲಿಹೊರಡಿಸುತ್ತಾರೆ, ಅದಕ್ಕೆ ಸೂಕ್ತ ಕಾರಣವನ್ನು ನೀಡಿರುವುದಿಲ್ಲಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಕರಣದ ಹಿನ್ನೆಲೆ ಏನು?; ಕೇರಳದಲ್ಲಿ ಸಂಚಲನ ಮೂಡಿಸಿದ್ದ ಚಿನ್ನ ಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್‌ 2023ರ ಮಾರ್ಚ್ 11ರಂದು ಕೆ. ಆರ್‌. ಪುರಂ ಠಾಣಾ ಪೊಲೀಸರಿಗೆ ವಿಜೇಶ್‌ ಪಿಳ್ಳೈ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದರು ಎಂದು ದೂರು ನೀಡಿದ್ದರು. ಪ್ರಕರಣದ ಸಂಬಂಧ ಕೇರಳದ ಮುಖ್ಯಮಂತ್ರಿ ವಿರುದ್ಧ ಹೇಳಿಕೆ ನೀಡಬಾರದು ಮತ್ತು ಒಂದು ವಾರದಲ್ಲಿ ಬೆಂಗಳೂರು ತೊರೆಯಬೇಕು ಎಂದು ಪಿಳ್ಳೈ ತಮಗೆ ಬೆದರಿಸಿದ್ದರು ಎಂದು ಅವರು ಆರೋಪಿಸಿದ್ದರು.

ಆ ಹಿನ್ನೆಲೆಯಲ್ಲಿಎಸ್‌ಎಚ್‌ಒ, ಸಿಆರ್‌ ಪಿಸಿ ಸೆಕ್ಷನ್‌ 506 ರಡಿ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಮ್ಯಾಜಿಸ್ಪ್ರೇಟ್‌ ಅನುಮತಿ ಕೋರಿದ್ದರು. ಅದಕ್ಕೆ ಮ್ಯಾಜಿಸ್ಪ್ರೇಟ್‌ ಅನುಮತಿಯನ್ನೂ ಸಹ ಮಂಜೂರು ಮಾಡಿದ್ದರು. ಅದರಂತೆ ಕೆ. ಆರ್‌. ಪುರ ಪೊಲೀಸರು ವಿಜೇಶ್‌ ಪಿಳೈ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿದ್ದರು.

ಅದನ್ನು ಪ್ರಶ್ನಿಸಿ ಹೈಕೋರ್ಟ್‌ ಮೊರೆ ಹೋಗಿದ್ದ ಪಿಳ್ಳೈ, ಕಾನೂನು ಪ್ರಕಾರ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿ ಮೇಲ್ನೋಟಕ್ಕೆ ಆರೋಪದಲ್ಲಿ ಹುರುಳಿದೆ ಎಂದೆನಿಸಿದರೆ ಮಾತ್ರ ಮ್ಯಾಜಿಸ್ಪ್ರೇಟ್‌ ಅನುಮತಿ ಪಡೆದು ಕ್ರಿಮಿನಲ್‌ ಪ್ರಕರಣ ದಾಖಲಿಸಬಹುದು. ಆದರೆ ಈ ಪ್ರಕರಣದಲ್ಲಿತಮ್ಮ ವಿರುದ್ಧ ಸ್ವಪ್ನಾ ಸುರೇಶ್‌ ಮಾಡಿರುವ ಆರೋಪಗಳಿಗೆ ಹುರುಳಿಲ್ಲ, ಮೇಲ್ನೋಟಕ್ಕೆ ಕಾಣುವ ಯಾವುದೇ ಸಾಕ್ಷ್ಯಾಧಾರಗಳೂ ಇಲ್ಲ. ಆದರೂ ಮ್ಯಾಜಿಸ್ಪ್ರೇಟ್‌ ಆರೋಪಗಳನ್ನು ಮತ್ತು ಸಾಕ್ಷ್ಯಗಳನ್ನು ಪರಿಶೀಲಿಸದೆ ಅನುಮತಿ ನೀಡಿದ್ದಾರೆ, ಹಾಗಾಗಿ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಕೋರಿದ್ದರು.

English summary

Kerala gold Smuggling case; Karnataka high court quashed case against accused who threatened the case prime accused Swapna Suresh.

Story first published: Tuesday, June 27, 2023, 6:20 [IST]

Source link