ಏಷ್ಯನ್ ಗೇಮ್ಸ್‌ನ (Asian Games Hangzhou) ಪುರುಷರ ವಾಲಿಬಾಲ್ ಸ್ಪರ್ಧೆಯ ಮೊದಲ ಪಂದ್ಯದಲ್ಲಿ ಭಾರತ ತಂಡವು 3-0 ಗೋಲುಗಳಿಂದ ಕಾಂಬೋಡಿಯಾವನ್ನು ಮಣಿಸಿದೆ. ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ಪೂಲ್ ಸಿ ಪಂದ್ಯದಲ್ಲಿ ಭಾರತವು 25-14, 25-13, 25-19 ಅಂಕಗಳೊಂದಿಗೆ ತನಗಿಂತ ಕೆಳ ಶ್ರೇಯಾಂಕದ ಕಾಂಬೋಡಿಯಾವನ್ನು ಸೋಲಿಸಿತು.