ಏಕದಿನ ಕ್ರಿಕೆಟ್​ನಲ್ಲಿ ಭಾರತ-ಬಾಂಗ್ಲಾದೇಶ ಮುಖಾಮುಖಿ ದಾಖಲೆ; 37 ವರ್ಷಗಳ ವೈರತ್ವದಲ್ಲಿ ಯಾರು ಮೇಲುಗೈ?

ಕಳೆದ 6 ತಿಂಗಳ ಅಂತರದಲ್ಲಿ ಕೇವಲ ಎರಡು ಏಕದಿನ ಸರಣಿಗಳನ್ನು ಆಡಿರುವ ಭಾರತ ಮಹತ್ವದ ಟೂರ್ನಿಗೆ ಸಜ್ಜಾಗಿದೆ. ಕಳೆದ ವರ್ಷ ಜುಲೈನಲ್ಲಿ ಗೌತಮ್ ಗಂಭೀರ್ ಮುಖ್ಯ ಕೋಚ್ ಆಗಿ ನೇಮಕಗೊಂಡ ಮೊದಲ ಸರಣಿಯಲ್ಲಿ ಶ್ರೀಲಂಕಾ ವಿರುದ್ಧ 0-2ರಿಂದ ಭಾರತ ಸೋಲನುಭವಿಸಿತ್ತು. ಆದಾಗ್ಯೂ, ಈ ತಿಂಗಳ ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧ 3-0 ಕ್ಲೀನ್ ಸ್ವೀಪ್ ಸಾಧಿಸಿತು. ಮತ್ತೊಂದೆಡೆ, ಬಾಂಗ್ಲಾದೇಶ 2024 ರಿಂದ 9 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, ಕೇವಲ ಮೂರರಲ್ಲಷ್ಟೆ ಗೆದ್ದಿದೆ. ಇದರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 0-3, ಯುಎಇಯಲ್ಲಿ ಅಫ್ಘಾನಿಸ್ತಾನ ವಿರುದ್ಧ 1-2 ಸೋಲೂ ಸೇರಿವೆ.

Source link