ಉಕ್ರೇನ್‌ಗೆ ಅಮೆರಿಕದ ಭರ್ಜರಿ ಗಿಫ್ಟ್: 10 ಸಾವಿರ ಕೋಟಿ ರೂಪಾಯಿ ಕೊಟ್ಟ ವಿಶ್ವದ ದೊಡ್ಡಣ್ಣ | America announced 1.3 billion dollars as part of aid to Ukraine

International

oi-Malathesha M

|

Google Oneindia Kannada News

ವಾಷಿಂಗ್ಟನ್: ಅಮೆರಿಕ ಮತ್ತೊಮ್ಮೆ ಉಕ್ರೇನ್‌ಗೆ ಭಾರಿ ದೊಡ್ಡ ಪ್ರಮಾಣದ ಸಹಾಯವನ್ನ ಮಾಡಿದೆ. ಈವರೆಗೂ ಸುಮಾರು 3 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ನೆರವು ನೀಡಿದ್ದ ಅಮೆರಿಕ, ಈಗ 10 ಸಾವಿರ ಕೋಟಿ ರೂಪಾಯಿ ನೀಡಿದೆ. ಈ ಮೂಲಕ ರಷ್ಯಾ ವಿರುದ್ಧದ ಯುದ್ಧಕ್ಕೆ ಪರೋಕ್ಷವಾಗಿ ನೆರವಾಗುತ್ತಿದೆ ಅನ್ನೋ ಆರೋಪವೂ ಕೇಳಿಬಂದಿದೆ. ಆ ಬಗ್ಗೆ ಮಾಹಿತಿ ಇಲ್ಲಿ ತಿಳಿಯಿರಿ.

ರಷ್ಯಾ ಮತ್ತು ಉಕ್ರೇನ್ ಮಧ್ಯೆ ಭೀಕರ ಯುದ್ಧ ಆರಂಭವಾಗಿ ಇಂದಿಗೆ 484 ದಿನ. ಹೀಗೆ ದಿನದಿಂದ ಯುದ್ಧ ಮತ್ತಷ್ಟು ಭೀಕರವಾಗುತ್ತಿದೆ. ಅದರಲ್ಲೂ ರಷ್ಯಾ ಕೊಟ್ಟಿರುವ ಪೆಟ್ಟಿಗೆ ನರಳುತ್ತಿರುವ ಉಕ್ರೇನ್ ನೆರವಿಗೆ ಪಾಶ್ಚಿಮಾತ್ಯ ರಾಷ್ಟ್ರಗಳು ಓಡೋಡಿ ಬರುತ್ತಿವೆ. ಈ ಪೈಕಿ ಅಮೆರಿಕ ನೀಡುತ್ತಿರುವ ಸಹಾಯದ ಪಾಲು ಬಹುತೇಕ ದೊಡ್ಡ ಪ್ರಮಾಣದ್ದು. ಈವರೆಗೂ ಸುಮಾರು 3 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ನೆರವನ್ನ ಉಕ್ರೇನ್‌ಗೆ ನೀಡಿದೆ ಅಮೆರಿಕ. ಈಗ ಮತ್ತೊಂದು ರೌಂಡ್ ಸಹಾಯ ಮಾಡಲು ಅಮೆರಿಕ ಮುಂದಾಗಿದ್ದು 1.3 ಬಿಲಿಯನ್ ಡಾಲರ್ ಅಂದ್ರೆ ಸುಮಾರು 10 ಸಾವಿರ ಕೋಟಿ ರೂಪಾಯಿ ನೀಡಲು ಮುಂದಾಗಿದೆ.

America announced 1.3 billion dollars as part of aid to Ukraine

ಸಾವಿರ ಸಾವಿರ ಕೋಟಿ ಭರ್ಜರಿ ಗಿಫ್ಟ್!

ರಷ್ಯಾ ಸೇನೆ ಉಕ್ರೇನ್ ನೆಲದಲ್ಲಿ ತೀವ್ರವಾದ ಕಾರ್ಯಾಚರಣೆ ನಡೆಸುತ್ತಿದೆ. ಹೀಗಾಗಿ ಅಮೆರಿಕ ಮತ್ತದರ ಸ್ನೇಹಿತರು ಉಕ್ರೇನ್ ಬೆಂಬಲಕ್ಕೆ ನಿಂತಿದ್ದಾರೆ. ಉಕ್ರೇನ್ ಪಡೆಗಳಿಗೆ ಅಗತ್ಯವಿರುವ ವೆಪನ್ಸ್ ಒದಗಿಸುವ ಕೆಲಸ ನಡೆಯುತ್ತಿದೆ. ಇದರ ಜೊತೆಗೆ ಯುದ್ಧದ ನಷ್ಟವನ್ನೂ ಕಟ್ಟಿ ಕೊಡಲು ಅಮೆರಿಕ ಮುಂದಾಗುತ್ತಿದೆ. ಅಲ್ಲದೆ ಈ ಎಲ್ಲಾ ನಷ್ಟಗಳಿಗೆ ರಷ್ಯಾ ಸೇನೆ ಹೊಣೆ ಎಂದು ಅಮೆರಿಕ ನೇರವಾಗಿ ವಾಗ್ದಾಳಿ ನಡೆಸುತ್ತಿದೆ. ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಇದೇ ವಿಚಾರದಲ್ಲಿ ರಷ್ಯಾಗೆ ನೇರವಾದ ಎಚ್ಚರಿಕೆ ನೀಡಿದ್ದಾರೆ. ಹಾಗೇ ಉಕ್ರೇನ್ ಪರ ನಿಂತಿದ್ದು, ಮತ್ತಷ್ಟು ನೆರವು ನೀಡುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಮುಗಿಯಿತು ಕಥೆ, ಭಯಾನಕ ಪರಮಾಣು ಅಸ್ತ್ರ ಹೊರತೆಗೆದ ರಷ್ಯಾ: ಉಕ್ರೇನ್ ರಾಜಧಾನಿ ಮೇಲೆ ರಷ್ಯಾ ನ್ಯೂಕ್ಲಿಯರ್ ಅಟ್ಯಾಕ್?ಮುಗಿಯಿತು ಕಥೆ, ಭಯಾನಕ ಪರಮಾಣು ಅಸ್ತ್ರ ಹೊರತೆಗೆದ ರಷ್ಯಾ: ಉಕ್ರೇನ್ ರಾಜಧಾನಿ ಮೇಲೆ ರಷ್ಯಾ ನ್ಯೂಕ್ಲಿಯರ್ ಅಟ್ಯಾಕ್?

500 ದಿನದತ್ತ ರಷ್ಯಾ & ಉಕ್ರೇನ್ ಯುದ್ಧ

ಇನ್ನೇನು 1 ತಿಂಗಳು ಕಳೆದರೆ ರಷ್ಯಾ & ಉಕ್ರೇನ್ ನಡುವೆ ಯುದ್ಧ ಆರಂಭವಾಗಿ 500 ದಿನಗಳು ಪೂರ್ಣವಾಗಲಿವೆ. ಆದರೂ ಯುದ್ಧ ನಿಲ್ಲುವ ಮುನ್ಸೂಚನೆ ಇಲ್ಲ, ಎರಡೂ ದೇಶಗಳ ಮಧ್ಯೆ ಕಿತ್ತಾಟ ಕೂಡ ಇನ್ನಷ್ಟು ಜೋರಾಗುತ್ತಿದೆ. ಅದರಲ್ಲೂ ಉಕ್ರೇನ್ ಡ್ಯಾಂ ಸ್ಫೋಟವಾಗಿ ಹತ್ತಾರು ಜನರು ಜೀವ ಬಿಟ್ಟಿದ್ದಾರೆ. ಲಕ್ಷಾಂತರ ಜನ ಬೀದಿಗೆ ಬಿದ್ದು ಊರಿಗೆ ಊರೇ ಜಲಾಶಯದ ನೀರಲ್ಲಿ ಮುಳುಗಿ ಹೋಗಿವೆ. ಈ ಸ್ಥಿತಿಯಲ್ಲಿ ನಷ್ಟದಲ್ಲಿ ನರಳುತ್ತಿರುವ ಉಕ್ರೇನ್‌ಗೆ ಅಮೆರಿಕ ಭರ್ಜರಿ ಗಿಫ್ಟ್ ಘೋಷಣೆ ಮಾಡಿದೆ. ಉಕ್ರೇನ್ ಜನರಿಗೆ ನೆರವು ನೀಡಲು ಪಾಶ್ಚಿಮಾತ್ಯ ರಾಷ್ಟ್ರಗಳು ಈಗ ಮುಂದಾಗಿವೆ.

10 ವರ್ಷ ನಡೆಯುತ್ತಾ ಯುದ್ಧ?

ರಷ್ಯಾ ದೀರ್ಘಕಾಲದ ಯುದ್ಧಕ್ಕೆ ಸಿದ್ಧವಾಗಿ ಬಂದಿದೆ. ರಷ್ಯಾ ಅಧ್ಯಕ್ಷ ಪುಟಿನ್ ಆಪ್ತರೇ ಕೆಲವು ದಿನಗಳ ಹಿಂದಷ್ಟೇ ಮಾಹಿತಿ ನೀಡಿದ್ದರು. ಮುಂದಿನ 10 ವರ್ಷಗಳಲ್ಲೂ ರಷ್ಯಾ & ಉಕ್ರೇನ್ ಯದ್ಧ ನಿಲ್ಲಲ್ಲ ಎಂದಿದ್ದರು. ಹೀಗೆ ಅಮೆರಿಕ ಕೂಡ ತನ್ನ ತಂತ್ರಗಳಲ್ಲಿ ಫ್ಲಾಪ್ ಆಗುತ್ತಿದ್ದಿದ್ದು ಗೊತ್ತಾಗಿದೆ. ಈ ಎಲ್ಲ ಕಾರಣಕ್ಕೆ ಅಮೆರಿಕ ಮತ್ತು ನ್ಯಾಟೋ ಪಡೆಗಳು ಕೂಡ ರಷ್ಯಾ ವಿರುದ್ಧ ದೀರ್ಘ ಕಾಲದ ಯುದ್ಧಕ್ಕೆ ಸನ್ನದ್ಧವಾಗಿವೆ. ಇದೇ ಕಾರಣಕ್ಕೆ ಉಕ್ರೇನ್‌ಗೆ ಮತ್ತಷ್ಟು ನೆರವನ್ನ ಅಮೆರಿಕ ನೀಡುತ್ತಿದೆಯಾ? ಈ ನೆರವಿನ ಮೂಲಕ ಉಕ್ರೇನ್‌ಗೆ ಶಕ್ತಿ ತುಂಬಿ ಯುದ್ಧವನ್ನ ಮತ್ತಷ್ಟು ದಿನ ಎಳೆದಾಡುವ ಪ್ಲ್ಯಾನ್ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಇದೆಯಾ? ಅನ್ನೋ ಅನುಮಾನ ಮತ್ತು ಆರೋಪ ಕೂಡ ಕೇಳಿಬಂದಿದೆ.

ಇದೆಲ್ಲಾ ಏನೇ ಇರಲಿ, ಇನ್ನೊಂದ್ಕಡೆ ರಷ್ಯಾ ತನ್ನಲ್ಲಿರುವ ಭಯಾನಕ ಪರಮಾಣು ಅಸ್ತ್ರ ಹೊರತೆಗೆದಿದೆ. ಉಕ್ರೇನ್ ಗಡಿಯಲ್ಲಿ ನ್ಯೂಕ್ಲಿಯರ್ ವೆಪನ್ಸ್ ಇಟ್ಟುಕೊಂಡು ಉಕ್ರೇನ್ ಬಗ್ಗೆ ಕೆಂಡ ಕಾರುತ್ತಿದೆ. ಯಾವ ಕ್ಷಣದಲ್ಲಿ ಏನಾಗುತ್ತೋ? ಅನ್ನೋ ಭಯ ಎಲ್ಲರನ್ನು ಕಾಡ್ತಿದೆ. ಈ ಸಂದರ್ಭದಲ್ಲೇ ಉಕ್ರೇನ್‌ಗೆ ಅಮೆರಿಕ ಭರ್ಜರಿ ನೆರವು ಘೋಷಿಸಿದ್ದು, ಇದಕ್ಕೆ ಯಾವ ರೀತಿ ರಷ್ಯಾ ಉತ್ತರ ನೀಡುತ್ತೆ ಅನ್ನೋದನ್ನ ಕಾದು ನೋಡಬೇಕು.

English summary

America announced 1.3 billion dollars as part of aid to Ukraine.

Story first published: Thursday, June 22, 2023, 23:27 [IST]

Source link