ಫೈನಲ್ ಮುಗಿದು ಒಂದು ವಾರದ ನಂತರ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅಶ್ವಿನ್, ಕಳೆದ ವರ್ಷ ಬಾಂಗ್ಲಾದೇಶ ಟೆಸ್ಟ್ ಸರಣಿಯ ವೇಳೆ ಉಂಟಾದ ಮೊಣಕಾಲಿನ ಗಾಯದ ಕುರಿತು ಪ್ರಸ್ತಾಪಿಸಿದ್ದಾರೆ. ಇದರಿಂದ ಫೆಬ್ರವರಿ-ಮಾರ್ಚ್ನಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಸರಣಿಯೇ ನನ್ನ ಪಾಲಿಗೆ ಕೊನೆ ಎಂದು ತಮ್ಮ ಪತ್ನಿಗೆ ತಿಳಿಸಿರುದಾಗಿ ಬಹಿರಂಗಪಡಿಸಿದ್ದಾರೆ. ಹಳೆಯ ತಂತ್ರವು ಅವರ ಗಾಯಕ್ಕೆ ಒತ್ತಡ ತರುತ್ತಿದ್ದ ಕಾರಣ, ತಮ್ಮ ಬೌಲಿಂಗ್ ಕ್ರಮ ಸ್ವಲ್ಪ ಬದಲಾಯಿಸಲು ಬಯಸುವುದಾಗಿಯೂ ಹೇಳಿದ್ದರಂತೆ.