Travel
oi-Gururaj S

ಹುಬ್ಬಳ್ಳಿ, ಜೂನ್ 28; ನೈಋತ್ಯ ರೈಲ್ವೆ ಪಂಡರಾಪುರಕ್ಕೆ ತೆರಳಿ ವಿಠ್ಠಲನ ದರ್ಶನ ಪಡೆಯುವ ಭಕ್ತರ ಅನುಕೂಲಕ್ಕಾಗಿ ವಿಶೇಷ ರೈಲಿನ ವ್ಯವಸ್ಥೆ ಮಾಡಿದೆ. ಆಷಾಢ ಏಕಾದಶಿ ಪ್ರಯುಕ್ತ ಸಾವಿರಾರು ಭಕ್ತಾದಿಗಳು ದೇವಾಲಯಕ್ಕೆ ತೆರಳುವ ನಿರೀಕ್ಷೆ ಇದೆ.
ಆಷಾಢ ಮಾಸದ ಪ್ರಯುಕ್ತ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಂಡರಾಪುರದ ವಿಠ್ಠಲನ ದರ್ಶನಕ್ಕೆ ತೆರಳುತ್ತಿದ್ದಾರೆ. ಆದ್ದರಿಂದ ನೈಋತ್ಯ ರೈಲ್ವೆ ಎಸ್‌ಎಸ್‌ಎಸ್ ಹುಬ್ಬಳ್ಳಿ ಮತ್ತು ಪಂಡರಾಪುರ ನಡುವೆ ವಿಶೇಷ ರೈಲಿನ ವ್ಯವಸ್ಥೆ ಮಾಡಿದೆ.

ದಿನಾಂಕ, ನಿಲ್ದಾಣಗಳು; ರೈಲು ಸಂಖ್ಯೆ 07385 ಎರಡು ಟ್ರಿಪ್‌ಗಳಲ್ಲಿ ಎಸ್ಎಸ್ಎಸ್ ಹುಬ್ಬಳ್ಳಿ ಮತ್ತು ಪಂಡರಾಪುರ ನಡುವೆ ಜೂನ್ 28 ಮತ್ತು 29ರಂದು ಸಂಚಾರ ನಡೆಸಲಿದೆ. ಅದೇ ರೀತಿ ರೈಲು ಸಂಖ್ಯೆ 07386 ಎರಡು ಟ್ರಿಪ್‌ಗಳಲ್ಲಿ ಪಂಡರಾಪುರ ಮತ್ತು ಎಸ್ಎಸ್‌ಎಸ್ ಹುಬ್ಬಳ್ಳಿ ನಡುವೆ ಸಂಚಾರ ನಡೆಸಲಿದೆ ಎಂದು ಪ್ರಕಟಣೆ ಹೇಳಿದೆ.
ಪಂಡರಾಪುಕ್ಕೆ ತೆರಳುವ ಭಕ್ತಾದಿಗಳ ಅನುಕೂಲಕ್ಕಾಗಿಯೇ ವಿಶೇಷ ರೈಲು ಪ್ರಾರಂಭಿಸಲಾಗಿದೆ. ವಿಶೇಷ ರೈಲು ಓಡಿಸುವಂತೆ ರೈಲ್ವೆ ಮಹಾಪ್ರಬಂಧಕರಿಗೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಎರಡು ದಿನದ ಮಟ್ಟಿಗೆ ವಿಶೇಷ ರೈಲು ಓಡಿಸಲಾಗುತ್ತಿದೆ. ಭಕ್ತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಲಾಗಿದೆ.
ಈ ವಿಶೇಷ ರೈಲುಗಳು ಎಸ್‌ಎಸ್‌ಎಸ್ ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ, ಖಾನಾಪುರ, ಬೆಳಗಾವಿ, ಸೂಳೆಬಾವಿ, ಪಚ್ಚಾಪುರ್, ಗೋಕಾಕ್ ರೋಡ್, ಘಟಪ್ರಭಾ, ಚಿಕ್ಕೋಡಿ ರೋಡ್, ರಾಯಭಾಗ, ಚಿಂಚೋಳಿ, ಕುಡಚಿ, ವಿಜಯನಗರ, ಮೀರಜ್ ಜಂಕ್ಷನ್, ಸಂಘೋಲ ಮೂಲಕ ಪಂಡರಾಪುರಕ್ಕೆ ಸಂಚಾರ ನಡೆಸಲಿದೆ.
ಬೀದರ್‌ನಿಂದಲೂ ವಿಶೇಷ ರೈಲು; ಪಂಡರಾಪುಕ್ಕೆ ತೆರಳುವ ಭಕ್ತರ ಅನುಕೂಲಕ್ಕಾಗಿ ಬೀದರ್‌ನಿಂದಲೂ ವಿಶೇಷ ರೈಲು ಓಡಿಸಲಾಗುತ್ತಿದೆ. ರೈಲು ಸಂಖ್ಯೆ 07501 ಜೂನ್ 28 ರಂದು ಬೆಳಗ್ಗೆ 11 ಗಂಟೆಗೆ ಅದಿಲಾಬಾದ್‌ನಿಂದ ಹೊರಟು ನಾಂದೇಡ್, ಪರಳಿ ವೈಜಿನಾಥ, ಉದಗೀ ಮೂಲಕ ಭಾಲ್ಕಿಗೆ ರಾತ್ರಿ 9.30 ಹಾಗೂ ಬೀದರ್‌ಗೆ 10.05 ನಿಮಿಷಕ್ಕೆ ಬರಲಿದೆ.
ಸೇಡ್, ಚಿತ್ತಾಪೂರ, ಕಲಬುರಗಿ, ಸೊಲ್ಹಾಪುರ ಮಾರ್ಗವಾಗಿ ಮರುದಿನ ಜೂನ್ 29 ರಂದು ಬೆಳಿಗ್ಗೆ 9.20ಕ್ಕೆ ಪಂಡರಾಪುರಕ್ಕೆ ತಲುಪಲಿದೆ. ಅದೇ ದಿನ ರೈಲು ಸಂಖ್ಯೆ 07502 ರಾತ್ರಿ 9.50ಕ್ಕೆ ಪಂಡರಪುರದಿಂದ ಹೊರಟು, ಬಂದ ಮಾರ್ಗದಲ್ಲಿಯೇ ಬೀದರ್‌ಗೆ ಮರುದಿನ (ಜೂನ್ 30)ರ ಬೆಳಗ್ಗೆ 9.30ಕ್ಕೆ ಭಾಲ್ಕಿಗೆ, 10.5ಕ್ಕೆ ಬೀದರ್‌ಗೆ ತಲುಪಲಿದೆ.
English summary
To help devotees south western railway will run special train between SSS Hubballi and Pandharpur for Ashadha Ekadashi. Train will run on June 28 and 29.