English Tamil Hindi Telugu Kannada Malayalam Android App
Mon. Oct 3rd, 2022

Express News Service

ನಟಿ ಪ್ರಿಯಾಂಕಾ ಉಪೇಂದ್ರ ಇದೀಗ ಹಲವಾರು ಸಿನಿಮಾಗಳಲ್ಲಿ ಫುಲ್ ಬ್ಯುಸಿ ಇದ್ದಾರೆ. ಉಗ್ರಾವತಾರ, ಲೈಫ್ ಈಸ್ ಬ್ಯೂಟಿಫುಲ್, ಸೇಂಟ್ ಮಾರ್ಕ್ಸ್ ರೋಡ್, ಮಿಸ್ ನಂದಿನಿ, ಡಿಟೆಕ್ಟಿವ್ ತೀಕ್ಷ್ಣ, ಮತ್ತು ಬಂಗಾಳಿ ಚಲನಚಿತ್ರ ಮಾಸ್ಟರ್ ಅನುಷ್ಮಾನ್‌ ಸಿನಿಮಾಗಳ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಹಿರಿಯ ನಿರ್ದೇಶಕ ಸಾಯಿ ಪ್ರಕಾಶ್ ಅವರ ಮೊದಲ ಭಕ್ತಿ ಪ್ರಧಾನ ಸಿನಿಮಾ ‘ವಿಶ್ವರೂಪಿಣಿ ಹುಲಿಗೆಮ್ಮ’ ಚಿತ್ರದಲ್ಲಿ ಮೊದಲ ಬಾರಿಗೆ ದೇವಿ ಪಾತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಹೊಸಪೇಟೆಯಲ್ಲಿ ಶೂಟಿಂಗ್‌ನಲ್ಲಿರುವ ನಟಿ, ಚಿತ್ರದ ಬಗ್ಗೆ ಕೆಲವು ವಿವರಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

‘ಇದು ಸಾಯಿ ಪ್ರಕಾಶ್ ಅವರ 105 ನೇ ಚಿತ್ರ ಮತ್ತು ಪ್ರಸಿದ್ಧ ಹಾಗೂ ಶಕ್ತಿಶಾಲಿ ದೇವತೆ ಹುಲಿಗೆಮ್ಮನನ್ನು ಆಧರಿಸಿದೆ. ನಾವು ಇಂದು ಚಿತ್ರೀಕರಣವನ್ನು ಪ್ರಾರಂಭಿಸಿದ್ದೇವೆ. ಸುಗಮವಾಗಿ ನಡೆಯುತ್ತಿದೆ. ಇದೇ ಮೊದಲ ಬಾರಿಗೆ ನಾನು ‘ದೇವಿ’ ಪಾತ್ರದಲ್ಲಿ ತೆರೆಯ ಮೇಲೆ ನಟಿಸುತ್ತಿದ್ದೇನೆ. ಇದೊಂದು ವಿಭಿನ್ನ ಅನುಭವ’ ಎಂದು ಚಿತ್ರದ ಫಸ್ಟ್‌ ಲುಕ್ ಅನ್ನು ಹಂಚಿಕೊಳ್ಳುವ ಮೂಲಕ ಪ್ರಿಯಾಂಕಾ ತಿಳಿಸಿದ್ದಾರೆ.

ಭಾವನಾ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ಗೌರಮ್ಮ ಪಿ ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ಸುಮಂತ್, ರಮೇಶ್ ಭಟ್ ಮತ್ತು ರಾಜು ತಾಳಿಕೋಟೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ಮಾಪಕರ ಪುತ್ರಿಯರಾದ ಭಾವನಾ ಮತ್ತು ಪ್ರೀತಿ ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ.

ಹುಲಿಗೆಮ್ಮ ದೇವಿ ಅವತಾರದಲ್ಲಿ ಪ್ರಿಯಾಂಕಾ ಉಪೇಂದ್ರ

ವಿಶ್ವರೂಪಿಣಿ ಹುಲಿಗೆಮ್ಮ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯವನ್ನು ಸಂಜಯ್ ಕುಮಾರ್ ಬರೆದಿದ್ದಾರೆ. ಅಣಜಿ ನಾಗರಾಜ್ ಅವರ ಛಾಯಾಗ್ರಹಣವಿದ್ದು, ವಿ ಮನೋಹರ್ ಸಂಗೀತ ಸಂಯೋಜನೆ ಇದೆ. ರೌಡಿ ಅಳಿಯಾ ಸಿನಿಮಾದ ಬಳಿಕ ಪ್ರಿಯಾಂಕಾ ಉಪೇಂದ್ರ ಮತ್ತು ನಿರ್ದೇಶಕ ಸಾಯಿ ಪ್ರಕಾಶ್ ಅವರಿಗೆ ಇದು ಎರಡನೇ ಸಿನಿಮಾ.

ಇದನ್ನೂ ಓದಿ: ಪ್ರಿಯಾಂಕಾ ಉಪೇಂದ್ರ ನಟನೆಯ ‘ಡಿಟೆಕ್ಟಿವ್ ತೀಕ್ಷ್ಣ’ 7 ಭಾಷೆಗಳಲ್ಲಿ ರಿಲೀಸ್

‘ಆಧ್ಯಾತ್ಮಿಕ ವ್ಯಕ್ತಿಯಾಗಿರುವ ಅವರು ಈ ವಿಷಯದೊಂದಿಗೆ ನನ್ನನ್ನು ಸಂಪರ್ಕಿಸಿದಾಗ, ನಾನು ತಕ್ಷಣ ಹೌದು ಎಂದು ಹೇಳಿದೆ. ಇಂತಹ ಸಿನಿಮಾದಲ್ಲಿ ನಟಿಸುತ್ತಿರುವುದು ಇದೇ ಮೊದಲ ಬಾರಿಗೆ. ದೇವಿ ಪಾತ್ರ ಮಾಡುವುದೇ ದೊಡ್ಡ ವಿಷಯ. ಹೀಗಾಗಿ ಹುಲಿಗೆಮ್ಮನ ಪಾತ್ರ ಮಾಡುವುದೇ ಒಂದು ಗೌರವ. ಇಲ್ಲಿ ಜನರು ದೇವಿಯ ಬಗ್ಗೆ ತುಂಬಾ ಸೂಕ್ಷ್ಮವಾಗಿರುವುದರಿಂದ, ಚಿತ್ರದಲ್ಲಿ ಎಲ್ಲವೂ ಸರಿಯಾಗಿ ನಡೆಯುವಂತೆ ನೋಡಿಕೊಳ್ಳುತ್ತಿದ್ದೇನೆ’ ಎನ್ನುತ್ತಾರೆ ಪ್ರಿಯಾಂಕಾ.

ಇದಲ್ಲದೆ, ಒಬ್ಬ ನಟ ಅಥವಾ ನಟಿ ದೇವರು ಮತ್ತು ದೇವತೆಯನ್ನು ಪ್ರತಿನಿಧಿಸುವಾಗ ಜಾಗರೂಕರಾಗಿರಬೇಕು. ನಾನೀಗ ಹಂಪಿಯಲ್ಲಿದ್ದೇನೆ ಮತ್ತು ಇದು ತುಂಬಾ ಸುಂದರವಾಗಿದೆ. ಚಿತ್ರಕ್ಕೆ ಸಂಬಂಧಿಸಿದಂತೆ ಮಾಡಲು ಸಾಕಷ್ಟು ಕೆಲಸಗಳಿದ್ದು, ಅವುಗಳನ್ನು ಬೆಂಗಳೂರಿನಲ್ಲಿ ಮಾಡಲಾಗುತ್ತದೆ’ ಎಂದು ಅವರು ಹೇಳುತ್ತಾರೆ.

Source link

For more news update stay with actp news

Android App

Facebook

Twitter

Dailyhunt

Share Chat

Telegram

Koo App

Leave a Reply

Your email address will not be published.