English Tamil Hindi Telugu Kannada Malayalam Android App
Wed. Oct 5th, 2022

PTI

ಬೀಜಿಂಗ್: ಗಂಭೀರ ಎಚ್ಚರಿಕೆಯ ನಡುವೆಯೂ ಅಮೆರಿಕದ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ತೈವಾನ್‌ಗೆ ಬಂದಿಳಿದಿರುವ ಪರಿಣಾಮ ಅಮೆರಿಕ ವಿರುದ್ಧ ಕೆಂಗಣ್ಣು ಬೀರಿರುವ ಚೀನಾ ಇದೀಗ ಅಮೆರಿಕದ ಜೊತೆ ತನ್ನ ಮಾತುಕತೆಯನ್ನು ಸ್ಥಗಿತಗೊಳಿಸಿದೆ.

ಹೌದು.. ಅಮೆರಿಕದ ನ್ಯಾನ್ಸಿ ಪೆಲೋಸಿ ಅವರ ತೈವಾನ್ ಭೇಟಿಯನ್ನು ಗಂಭೀರವಾಗಿ ವಿರೋಧಿಸಿರುವ ಚೀನಾ ಇದೀಗ ಹವಾಮಾನ ಬದಲಾವಣೆ, ಮಿಲಿಟರಿ ಸಮಸ್ಯೆಗಳು, ಮಾದಕ ದ್ರವ್ಯ ವಿರೋಧಿ ಕೆಲಸಗಳ ಕುರಿತು ಅಮೆರಿಕ ಜೊತೆಗಿನ ಮಾತುಕತೆಯನ್ನು ಸ್ಥಗಿತಗೊಳಿಸಿದೆ.

ಇದನ್ನೂ ಓದಿ: ಅಮೆರಿಕ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿಗೆ ನಿರ್ಬಂಧ ವಿಧಿಸಿದ ಚೀನಾ; ತೈವಾನ್ ವಿರುದ್ಧ 100 ಯುದ್ಧವಿಮಾನಗಳ ಬಲ ಪ್ರದರ್ಶನ

ಇತ್ತ ತೈವಾನ್ ಗೆ ಬಂದಿಳಿಯುತ್ತಲೇ ಈ ಕುರಿತು ಟ್ವೀಟ್ ಮಾಡಿರುವ ಪೆಲೋಸಿ ಅವರು, ‘ತೈವಾನ್‌ಗೆ ನಮ್ಮ ನಿಯೋಗದ ಭೇಟಿಯು ತೈವಾನ್‌ನ ರೋಮಾಂಚಕ ಪ್ರಜಾಪ್ರಭುತ್ವವನ್ನು ಬೆಂಬಲಿಸುವ ಅಮೆರಿಕದ ಅಚಲ ಬದ್ಧತೆಯನ್ನು ಗೌರವಿಸುತ್ತದೆ. ನಮ್ಮ ಭೇಟಿಯು ತೈವಾನ್‌ಗೆ ಹಲವಾರು ಕಾಂಗ್ರೆಷನಲ್ ನಿಯೋಗಗಳಲ್ಲಿ ಒಂದಾಗಿದೆ. 1979 ರ ತೈವಾನ್ ಸಂಬಂಧಗಳ ಕಾಯಿದೆಯ ಯುಎಸ್‌-ಚೀನಾ ನಡುವಿನ ಜಂಟಿ ಸಂಬಂಧಗಳು, ಆರು ಭರವಸೆಗಳನ್ನು ಯಾವುದೇ ರೀತಿಯಲ್ಲಿ ದೀರ್ಘಾವಧಿಯ ಯುನೈಟೆಡ್ ಸ್ಟೇಟ್ಸ್ ನೀತಿಯನ್ನು ವಿರೋಧಿಸುವುದಿಲ್ಲ” ಎಂದು ಅವರು ಹೇಳಿದ್ದಾರೆ.

ಇನ್ನು ಪೆಲೋಸಿ ತೈವಾನ್ ಭೇಟಿ ವಿರೋಧಿಸಿ ಚೀನಾ, ಕ್ಸಿಯಾಮೆನ್ ಸುತ್ತ ಪೂರ್ವ ಕರಾವಳಿಯ ವಾಯುಪ್ರದೇಶವನ್ನು ಮುಚ್ಚಿದ್ದರಿಂದ ಆಕೆಯ ವಿಮಾನ ತೈಪೆಯಲ್ಲಿ ಇಳಿಯಿತು. ಚೀನಾದ ಯುದ್ಧ ವಿಮಾನಗಳು ತೈವಾನ್ ಜಲಸಂಧಿಯ ಬಳಿ ಹಾರಾಟ ನಡೆಸಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ‘ನಾವೂ ಸಿದ್ಧರಾಗಿದ್ದೇವೆ’: ತೈವಾನ್ ಜಲಸಂಧಿಯಲ್ಲಿ ಪರಮಾಣು ಜಲಾಂತರ್ಗಾಮಿ ನೌಕೆ ನಿಯೋಜಿಸಿದ ಚೀನಾಗೆ ಅಮೆರಿಕ ಎಚ್ಚರಿಕೆ

ಕಳೆದ ಎರಡು ದಿನಗಳಲ್ಲಿ 100 ಕ್ಕೂ ಹೆಚ್ಚು ಯುದ್ಧವಿಮಾನಗಳು ಮತ್ತು 10 ಯುದ್ಧನೌಕೆಗಳು ತೈವಾನ್ ಸುತ್ತಮುತ್ತಲಿನ ಲೈವ್-ಫೈರ್ ಮಿಲಿಟರಿ ಡ್ರಿಲ್‌ಗಳಲ್ಲಿ ಭಾಗವಹಿಸಿವೆ ಎಂದು ಹೇಳಲಾಗಿದೆ.  ಇದಕ್ಕೂ ಮೊದಲು ನ್ಯಾನ್ಸಿ ಪೆಲೋಸಿ ಅವರು ಸ್ವಯಂ-ಆಡಳಿತ ದ್ವೀಪ ತೈವಾನ್ ಗೆ ಭೇಟಿ ನೀಡಿದ ಬೆನ್ನಲ್ಲೇ ಚೀನಾ ಅಮೆರಿಕದ ವಿರುದ್ಧ ನಿರ್ಬಂಧಗಳನ್ನು ಘೋಷಿಸಿತ್ತು.  

ಇದನ್ನೂ ಓದಿ: ಪೆಲೋಸಿ ಭೇಟಿ ನಂತರ ತೈವಾನ್ ಬಳಿ ಚೀನಾದಿಂದ ಖಂಡಾಂತರ ಕ್ಷಿಪಣಿ ಉಡಾವಣೆ

25 ವರ್ಷಗಳ ಬಳಿಕ ಅಮೆರಿಕದ ಉನ್ನತ ಮಟ್ಟದ ಪ್ರತಿನಿಧಿಯೊಬ್ಬರು ತೈವಾನ್‌ಗೆ ಭೇಟಿ ನೀಡಿದ್ದಾರೆ. ನ್ಯಾನ್ಸಿ ಪೆಲೋಸಿ ಅವರು ಪ್ರಯಾಣಿಸುತ್ತಿದ್ದ ಅಮೆರಿಕದ ವಿಶೇಷ ವಿಮಾನಕ್ಕೆ ತೈವಾನ್‌ ವಾಯುಪಡೆಯ ಯುದ್ಧ ವಿಮಾನಗಳು ರಕ್ಷಣೆ ಒದಗಿಸಿದವು. ತೈವಾನ್‌ ವಾಯು ಪ್ರದೇಶಕ್ಕೆ ಅಮೆರಿಕದ ವಿಮಾನವು ಪ್ರವೇಶಿಸುವುದಕ್ಕೂ ಮುನ್ನ ಜಪಾನ್‌ನ ವಾಯುನೆಲೆಯಿಂದ ಅಮೆರಿಕ ವಾಯುಪಡೆಯ ಕನಿಷ್ಠ 13 ವಿಮಾನಗಳು ರಕ್ಷಣಾ ಹಾರಾಟ ಆರಂಭಿಸಿದವು. ಎಂಟು ಯುದ್ಧ ವಿಮಾನಗಳು ಹಾಗೂ ಐದು ಟ್ಯಾಂಕರ್‌ಗಳು ಜಪಾನ್‌ನಿಂದ ಹಾರಾಟ ಆರಂಭಿಸಿ, ನ್ಯಾನ್ಸಿ ಪೆಲೋಸಿ ಅವರಿದ್ದ ವಿಮಾನಕ್ಕೆ ಭದ್ರತೆ ಒದಗಿಸಿದವು.

ಇದನ್ನೂ ಓದಿ: ಅಮೆರಿಕ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನ್ ಭೇಟಿ: ಆಸಿಯಾನ್ ಎಚ್ಚರಿಕೆ ನಡುವೆ ಚೀನಾ ಮಿಲಿಟರಿ ಕಸರತ್ತು ಆರಂಭ

ಚೀನಾ ತೀವ್ರ ವಿರೋಧ
ಇನ್ನು ಪೆಲೋಸಿ ಅವರ ತೈವಾನ್ ಭೇಟಿಯನ್ನು ತೀವ್ರವಾಗಿ ಟೀಕಿಸಿರುವ ಚೀನಾ, ‘”ತೈವಾನ್ ಜಲಸಂಧಿಯಾದ್ಯಂತ ಉದ್ವಿಗ್ನತೆಯನ್ನು ಹೆಚ್ಚಿಸುವ ಪ್ರಚೋದನಕಾರಿ ಕ್ರಮಗಳನ್ನು ಅಮೆರಿಕ ತೆಗೆದುಕೊಳ್ಳುತ್ತಿದೆ. ಅದು ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಚೀನಾದ ಸಾರ್ವಭೌಮತ್ವ ಮತ್ತು ಭದ್ರತಾ ಹಿತಾಸಕ್ತಿಗಳನ್ನು ದುರ್ಬಲಗೊಳಿಸಲು ಪ್ರಯತ್ನಿಸಿದರೆ ಅಮೆರಿಕ ಖಂಡಿತವಾಗಿ ಹೊಣೆಗಾರನಾಗುತ್ತದೆ ಮತ್ತು ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ” ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.

ಇದನ್ನೂ ಓದಿ: ನ್ಯಾನ್ಸಿ ಪೆಲೊಸಿ ಭೇಟಿಗೆ ವಿರೋಧ: ತೈವಾನ್ ಮೇಲೆ ವ್ಯಾಪಾರ ನಿರ್ಬಂಧ ಹೇರಿದ ಚೀನಾ

ಚೀನಾ ಎಚ್ಚರಿಕೆಗೆ ಹೆದರಲ್ಲ 
ಇನ್ನು ಚೀನಾ ಎಚ್ಚೆರಿಕೆಗೆ ತಿರುಗೇಟು ನೀಡಿರುವ ಅಮೆರಿಕ, ‘ಚೀನಾ “ಸೇಬರ್ ರ್ಯಾಟ್ಲಿಂಗ್” ಎಂದು ಕರೆದದ್ದಕ್ಕೆ ಹೆದರುವುದಿಲ್ಲ. ವಾಷಿಂಗ್ಟನ್ ಅಧಿಕೃತವಾಗಿ ತೈವಾನ್‌ನೊಂದಿಗೆ ಯಾವುದೇ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿಲ್ಲ. ಆದರೆ ದ್ವೀಪವು ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಹಾಯ ಮಾಡಲು ಅಮೆರಿಕ ಕಾನೂನಿನ ಪ್ರಕಾರ ನೆರವು ನೀಡಲಿದೆ ಎಂದು ತಿಳಿಸಿದೆ. ಇದೇ ವಿಚಾರವನ್ನು ಸ್ಪಷ್ಟಪಡಿಸಿರುವ ಅಮೆರಿಕದ ನ್ಯಾನ್ಸಿ ಪೆಲೋಸಿ ಅವರು, ‘1979 ರ ತೈವಾನ್ ಸಂಬಂಧಗಳ ಕಾಯಿದೆಯನ್ನು ತಾನು ವಿರೋಧಿಸಿಲ್ಲ, ಪ್ರಜಾಪ್ರಭುತ್ವಕ್ಕೆ ಬೆಂಬಲ ನೀಡುವ ಉದ್ದೇಶದಿಂದ ತೈವಾನ್‌ಗೆ ಭೇಟಿ ನೀಡಿದ್ದೇನೆ ಎಂದು ಹೇಳಿದ್ದಾರೆ.

Source link

For more news update stay with actp news

Android App

Facebook

Twitter

Dailyhunt

Share Chat

Telegram

Koo App

Leave a Reply

Your email address will not be published.