English Tamil Hindi Telugu Kannada Malayalam Android App
Mon. Oct 3rd, 2022

ಭಾರತದ ಸಹಾಯಕ್ಕೆ ಮಿತ್ರ ದೇಶವಾದ ಇಸ್ರೇಲ್ ಮುಂದೆ ಬಂದಿದೆ. ಲ್ಯಾಂಡರ್ ಸಂಪರ್ಕ ಕಳೆದುಕೊಂಡ ಬಗ್ಗೆ ತನಿಖೆ ಪೂರ್ಣಗೊಳಿಸಿರುವ ಇಸ್ರೋ, ವಿಕ್ರಮ್ ಲ್ಯಾಂಡರ್ ನಿಯಂತ್ರಣ ಕೊಠಡಿಯ ಸಂಪರ್ಕ ಕಳೆದುಕೊಳ್ಳಲು ಕಾರಣ ಏನು ಎಂಬುದರ ಕುರಿತು ಇಸ್ರೋ ಮುಖ್ಯಸ್ಥರು ಹಾಗೂ ಇಸ್ರೇಲ್ ಬಾಹ್ಯಾಕಾಶ ಸಂಸ್ಥೆಯ ಮುಖ್ಯಸ್ಥರು ಪರಸ್ಪರ ಮಾಹಿತಿ ಹಂಚಿಕೊಳ್ಳಲಿದ್ದಾರೆ.

ಇದೆ ವರ್ಷ ಇಸ್ರೇಲ್ ಕೂಡ ಚಂದ್ರಯಾನ ಕೈಗೊಂಡಿತ್ತು ಈ ವರ್ಷದ ಏಪ್ರಿಲ್ 11 ರಂದು ಇಸ್ರೇಲಿನ ರೊಬೊಟಿಕ್ ಲೂನಾರ್ ಲ್ಯಾಂಡರ್ ಸಹ ಪತನ ಹೊಂದಿತ್ತು. ಚಂದ್ರನ ಅಂಗಳಕ್ಕೆ ಇಳಿಯುವ ಸಂದರ್ಭದಲ್ಲಿ ಈ ಅವಘಡ ಸಂಭವಿಸಿತ್ತು.

ಭಾರತ ಮತ್ತು ಇಸ್ರೇಲಿನ ಚಂದ್ರಯಾನಗಳಿಗೆ ಸಾಮ್ಯತೆ ಇದ್ದು ಈ ಕಾರಣಕ್ಕೆ  ಎರಡು ದೇಶಗಳು ಅಧ್ಯಯನ ನಡೆಸಲಿದೆ ಎಂದು ಇಸ್ರೇಲ್ ದೇಶದ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಿ ಭಾರತದ ಪ್ರಯತ್ನವನ್ನು ಶ್ಲಾಘಿಸಿದೆ.

ಭಾರತದ ಪ್ರಯತ್ನ ನಿಜವಾಗಿಯೂ ಕಷ್ಟದ ಕೆಲಸವಾಗಿತ್ತು. ಇಸ್ರೋ ಮತ್ತು ಭಾರತದ ವಿಜ್ಞಾನಿಗಳು ದೊಡ್ಡ ಸಾಧನೆ ಮಾಡಿದ್ದಾರೆ. ಭಾರತ ಚಂದ್ರನನ್ನು ತಲುಪುತ್ತದೆ ಎನ್ನುವ ಆಶಾಭಾವವನ್ನು ಹೊಂದಿದ್ದೇವೆ ಎಂದು ಟ್ವೀಟ್ ನಲ್ಲಿ ತಿಳಿಸಿದೆ.

 

 

Source link

For more news update stay with actp news

Android App

Facebook

Twitter

Dailyhunt

Share Chat

Telegram

Koo App

Leave a Reply

Your email address will not be published.